ಶನಿ ಹಿಮ್ಮುಖ ಚಲನೆ 2026 : ಈ 4 ರಾಶಿಯವರಿಗೆ ಸಿಗಲಿದೆ ಕರ್ಮಫಲದಾತನ ಕೃಪಾಕಟಾಕ್ಷ

ದೇವರುಗಳ ನ್ಯಾಯಾಧೀಶನೆಂದು ಕರೆಯಲ್ಪಡುವ ಶನಿ ಜುಲೈನಲ್ಲಿ ಹಿಮ್ಮುಖ ಚಲನೆ ಮಾಡಲಿದ್ದಾನೆ. ಇದರಿಂದ 4 ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ.

ಜ್ಯೋತಿಷ್ಯ ಶಾಸ್ತ್ರದಲ್ಲಿ ಶನಿ ದೇವನನ್ನು ನ್ಯಾಯದ ದೇವರು ಎಂದು ಕರೆಯಲಾಗುತ್ತದೆ. ಬಹಳ ನಿಧನವಾಗಿ ಚಲಿಸುವ ಈ ಗ್ರಹವು ಕರ್ಮಗಳಿಗೆ ಅನುಸಾರವಾಗಿ ಫಲವನ್ನು ನೀಡುತ್ತಾನೆ. ಸೂರ್ಯನ ಮಗನಾದ ಶನಿಯು ಒಂದು ರಾಶಿಯಲ್ಲಿ ಎರಡೂವರೆ ವರ್ಷಗಳ ಕಾಲ ನೆಲೆಸುತ್ತಾನೆ. ಅದರ ಪ್ರಭಾವು ಉಳಿದ ಎಲ್ಲಾ ರಾಶಿಗಳ ಮೇಲೆ ಬೀಳುತ್ತದೆ. ಕರ್ಮ ಫಲ ನೀಡುವ ಶನಿಯು ಸದ್ಯ ಮೀನ ರಾಶಿಯಲ್ಲಿ ಸಾಗುತ್ತಿದ್ದಾನೆ. ಜುಲೈ 27 ರಿಂದ ಇದೇ ರಾಶಿಯಲ್ಲಿ ಹಿಮ್ಮುಖವಾಗಿ ಚಲಿಸಲಿದ್ದಾನೆ. ಶನಿಯ ಹಿಮ್ಮುಖ ಚಲನೆಯು ಅತ್ಯಂತ ಮತ್ವದ್ದಾಗಿದೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಪರಿಗಣಿಸಲಾಗಿದೆ. ಏಕೆಂದರೆ ಶನಿ ಹಿಮ್ಮುಖವಾದಾಗ ಅದರ ಪ್ರಭಾವ ತೀವ್ರವಾಗಿರುತ್ತದೆ. ಇದರಿಂದ ತೊಂದರೆ ಮತ್ತು ಸಮಸ್ಯೆಗಳು ಹೆಚ್ಚಾಗುತ್ತದೆಯಾದರೂ ಕೆಲವು ರಾಶಿಯವರ ಮೇಲೆ ಹೆಚ್ಚಿನ ಪ್ರಯೋಜನ ನೀಡುತ್ತಾನೆ. ಶನಿಯ ಹಿಮ್ಮುಖ ಚಲನೆಯ ಸಮಯದಲ್ಲಿ ಶನಿಯು ‘ಶಶ ಮಹಾಪುರುಷ ರಾಜಯೋಗವನ್ನು’ ಸೃಷ್ಟಿಸುತ್ತಾನೆ. ಇದರ ಪ್ರಭಾವದಿಂದ ವೃಷಭ, ಮಿಥುನ, ತುಲಾ ಮತ್ತು ವೃಶ್ಚಿಕ ರಾಶಿಯವರಿಗೆ ಬಂಪರ್‌ ಲಾಭವಾಗಲಿದೆ.

ವೃಷಭ ರಾಶಿ

ವೃಷಭ ರಾಶಿಯು ಶುಕ್ರನಿಂದ ಆಳಲ್ಪಡುತ್ತದೆ. ಶುಕ್ರನು ಶನಿಯ ಆಪ್ತಮಿತ್ರ. ಜಾತಕದ 10 ನೇ ಮನೆಯಲ್ಲಿ ಶನಿಯು ಹಿಮ್ಮುಖವಾಗಿದ್ದಾನೆ. ಈ ಸಮಯವು ನಿಮಗೆ ಶುಭ ಸಮಯವಾಗಿದೆ. ಉದ್ಯೋಗದಲ್ಲಿರುವವರಿಗೆ ಬಡ್ತಿ, ಸಂಬಳ ಹೆಚ್ಚಳ ಅಥವಾ ನಿಮ್ಮಿಷ್ಟದ ಸ್ಥಳಕ್ಕೆ ವರ್ಗಾವಣೆ ಸಿಗಬಹುದು. ಕೆಲಸದ ಸ್ಥಳದಲ್ಲಿ ನಿಮ್ಮ ಗೌರವ ಮತ್ತು ಅಧಿಕಾರ ಹೆಚ್ಚಾಗುತ್ತದೆ.

ಮಿಥುನ ರಾಶಿ

ಶನಿಯು ನಿಮ್ಮ ರಾಶಿಯ 9ನೇ ಮನೆಯಲ್ಲಿ ಹಿಮ್ಮುಖವಾಗಲಿದ್ದಾನೆ. ಶನಿಯ ಚಲನೆಯಲ್ಲಿನ ಈ ಬದಲಾವಣೆಯು ನಿಮ್ಮ ಕೆಲಸದಲ್ಲಿದ್ದ ಅಡೆತಡೆಗಳನ್ನು ದೂರಮಾಡುತ್ತದೆ. ಅದೃಷ್ಟವು ನಿಮ್ಮ ಕೈಹಿಡಿಯುತ್ತದೆ. ಉನ್ನತ ಶಿಕ್ಷಣಕ್ಕಾಗಿ ವಿದೇಶಕ್ಕೆ ಹೋಗಲು ಬಯಸುವ ವಿದ್ಯಾರ್ಥಿಗಳು ಯಶಸ್ಸನ್ನು ಕಾಣುತ್ತಾರೆ.

ಇದನ್ನೂ ಓದಿ: ಶುಕ್ರನ ಅಂಗಳಕ್ಕೆ ಮಂಗಳನ ಸಂಚಾರ : ವೃಷಭ ಸೇರಿ ಈ 5 ರಾಶಿಯವರಿಗೆ ಮಂಗಳಕರ ಸಮಯ

ತುಲಾ ರಾಶಿ

ತುಲಾ ರಾಶಿಯವರಿಗೆ ಶನಿಯನ್ನು “ಯೋಗಕಾರಕ” ಗ್ರಹವೆಂದು ಪರಿಗಣಿಸಲಾಗುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳು ಒಳ್ಳೆಯ ಸುದ್ದಿಯನ್ನು ಪಡೆಯಬಹುದು. ಪೋಷಕರು ತಮ್ಮ ಮಕ್ಕಳಿಂದ ಶುಭ ಸುದ್ದಿಯನ್ನು ಪಡೆಯುತ್ತಾರೆ. ಪ್ರೇಮ ಸಂಬಂಧಗಳು ಆಳ ಮತ್ತು ಸ್ಪಷ್ಟತೆಯನ್ನು ಪಡೆಯುತ್ತವೆ.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯವರು ಪ್ರಸ್ತುತ ಶನಿ ಕಾಟದ ಪ್ರಭಾವದಲ್ಲಿದ್ದಾರೆ. ಆದರೆ ನಾಲ್ಕನೇ ಮನೆಯಲ್ಲಿ ಶನಿಯ ಹಿಮ್ಮುಖ ಚಲನೆಯು ಕಾಟದ ನಕಾರಾತ್ಮಕ ಪರಿಣಾಮಗಳಿಂದ ಗಮನಾರ್ಹ ಪರಿಹಾರವನ್ನು ನೀಡುತ್ತದೆ. ಕೌಟುಂಬಿಕ ವಿವಾದಗಳು ಮತ್ತು ಮಾನಸಿಕ ಒತ್ತಡದಿಂದ ನೀವು ಮುಕ್ತರಾಗುತ್ತೀರಿ. ನಿಮ್ಮ ತಾಯಿಯ ಆರೋಗ್ಯವು ಸುಧಾರಿಸುತ್ತದೆ. ಹೊಸ ಮನೆ, ಭೂಮಿ ಅಥವಾ ಕಾರು ಖರೀದಿಸಲು ಇದು ಅನುಕೂಲಕರ ಸಮಯ.

Archana V. Bhat |ಅರ್ಚನಾ ವಿ. ಭಟ್

ಅರ್ಚನಾ ವಿ. ಭಟ್‌ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮೂಲದವರು. ಕಳೆದ ಹಲವು ವರ್ಷಗಳಿಂದಲೂ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನ್ಯೂಸ್‌ನೆಕ್ಸ್ಟ್‌ ಕನ್ನಡ ಸುದ್ದಿ ಸಂಸ್ಥೆಯಲ್ಲಿ ನಾಲ್ಕು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವ್ಯವಹಾರ, ಆಟೋಮೊಬೈಲ್‌, ಟೆಕ್ನಾಲಜಿ, ಕ್ರೀಡೆ ಸುದ್ದಿ ವಿಭಾಗದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿದ್ದಾರೆ.. ನೈಜ, ಸತ್ಯ ಸುದ್ದಿಯನ್ನು ಪ್ರಕಟಿಸುತ್ತಿದ್ದಾರೆ.

Related Stories