
ಆನ್ಲೈನ್ ಶಾಪಿಂಗ್ ಪ್ರಿಯರಿಗೆ ಅಮೆಜಾನ್ ಮತ್ತೊಮ್ಮೆ ಭರ್ಜರಿ ಕೊಡುಗೆ ನೀಡಲು ಸಜ್ಜಾಗಿದೆ. ದೇಶದಲ್ಲಿ ನಡೆಯಲಿರುವ ಅಮೆಜಾನ್ ಪ್ರೈಮ್ ಡೇ 2026 ಸೇಲ್ ಜುಲೈ 4ರಿಂದ 6ರವರೆಗೆ ನಡೆಯಲಿದ್ದು, ಪ್ರೈಮ್ ಸದಸ್ಯರಿಗೆ ಮಾತ್ರ ವಿಶೇಷ ರಿಯಾಯಿತಿ ಹಾಗೂ ಎಕ್ಸ್ಕ್ಲೂಸಿವ್ ಆಫರ್ಗಳು ಲಭ್ಯವಾಗಲಿವೆ.
ಕಂಪನಿಯ ಮಾಹಿತಿ ಪ್ರಕಾರ, 100ಕ್ಕೂ ಹೆಚ್ಚು ಬ್ರ್ಯಾಂಡ್ಗಳ 500ಕ್ಕೂ ಅಧಿಕ ಉತ್ಪನ್ನಗಳ ಮೇಲೆ ವಿಶೇಷ ರಿಯಾಯಿತಿ ಘೋಷಿಸಲಾಗಿದೆ. ವಿಶೇಷವಾಗಿ ಸ್ಮಾರ್ಟ್ಫೋನ್, ಲ್ಯಾಪ್ಟಾಪ್, ಟ್ಯಾಬ್ಲೆಟ್, ಸ್ಮಾರ್ಟ್ ಗ್ಯಾಜೆಟ್ಗಳು ಹಾಗೂ ಇತರ ಎಲೆಕ್ಟ್ರಾನಿಕ್ ಉತ್ಪನ್ನಗಳ ಮೇಲೆ ಸಾವಿರಾರು ರೂಪಾಯಿ ಉಳಿತಾಯ ಮಾಡುವ ಅವಕಾಶ ಗ್ರಾಹಕರಿಗೆ ದೊರೆಯಲಿದೆ.
ಪ್ರೀಮಿಯಂ ಸ್ಮಾರ್ಟ್ಫೋನ್ ಖರೀದಿಸಲು ಕಾಯುತ್ತಿರುವವರಿಗೆ ಈ ಸೇಲ್ ಉತ್ತಮ ಅವಕಾಶವಾಗಲಿದೆ. ಸ್ಯಾಮ್ಸಂಗ್ ಗ್ಯಾಲಕ್ಸಿ S25 ಅಲ್ಟ್ರಾ, ಐಫೋನ್ 17, ಒನ್ಪ್ಲಸ್ 13, ಒನ್ಪ್ಲಸ್ 13R, ಐಕ್ಯೂಒಒ 15, ಸ್ಯಾಮ್ಸಂಗ್ Z Fold 7 ಸೇರಿದಂತೆ ಹಲವು ಪ್ರಮುಖ ಮಾದರಿಗಳ ಮೇಲೆ ಆಕರ್ಷಕ ರಿಯಾಯಿತಿ ನೀಡಲಾಗುತ್ತಿದೆ ಎಂದು ಕಂಪನಿ ತಿಳಿಸಿದೆ. ಕೆಲವು ಮಾದರಿಗಳ ಬೆಲೆ ಲಕ್ಷ ರೂಪಾಯಿಗಿಂತ ಕಡಿಮೆಯಾಗುವ ನಿರೀಕ್ಷೆಯಿದೆ.
ಮಿಡ್ರೇಂಜ್ ಮತ್ತು ಬಜೆಟ್ ಸ್ಮಾರ್ಟ್ಫೋನ್ ಖರೀದಿಸಲು ಬಯಸುವವರಿಗೂ ಈ ಸೇಲ್ ಲಾಭದಾಯಕವಾಗಲಿದೆ. ಆಯ್ದ ಮಾದರಿಗಳ ಮೇಲೆ ಸಾವಿರಾರು ರೂಪಾಯಿಗಳ ರಿಯಾಯಿತಿ, ಬ್ಯಾಂಕ್ ಆಫರ್ಗಳು ಹಾಗೂ ಎಕ್ಸ್ಚೇಂಜ್ ಬೋನಸ್ಗಳು ಲಭ್ಯವಾಗಲಿದ್ದು, ಅಂತಿಮ ಬೆಲೆ ಮತ್ತಷ್ಟು ಕಡಿಮೆಯಾಗುವ ಸಾಧ್ಯತೆ ಇದೆ.
ಪ್ರೈಮ್ ಸದಸ್ಯತ್ವ ಹೊಂದಿರದವರಿಗಾಗಿ ಕೂಡ ಅಮೆಜಾನ್ ವಿಶೇಷ ಕೊಡುಗೆ ನೀಡಿದೆ. ವಾರ್ಷಿಕ ಪ್ರೈಮ್ ಸದಸ್ಯತ್ವ ಸೇರಿದಂತೆ ಲೈಟ್ ಮತ್ತು ಶಾಪಿಂಗ್ ಆವೃತ್ತಿಗಳ ಸದಸ್ಯತ್ವ ಯೋಜನೆಗಳ ಮೇಲೆ ರಿಯಾಯಿತಿ ಘೋಷಿಸಲಾಗಿದ್ದು, ಸೇಲ್ ಆರಂಭಕ್ಕೂ ಮುನ್ನವೇ ಕಡಿಮೆ ದರದಲ್ಲಿ ಸದಸ್ಯತ್ವ ಪಡೆಯುವ ಅವಕಾಶ ನೀಡಲಾಗಿದೆ.
ಈ ನಡುವೆ ಅಮೆಜಾನ್ ಸೇಲ್ಗೆ ಪೈಪೋಟಿಯಾಗಿ ಫ್ಲಿಪ್ಕಾರ್ಟ್ ಕೂಡ ತನ್ನ ವಿಶೇಷ ಸೇಲ್ ಘೋಷಿಸಿದ್ದು, ಗ್ರಾಹಕರಿಗೆ ವಿವಿಧ ವೇದಿಕೆಗಳಲ್ಲಿ ಹಲವು ಆಕರ್ಷಕ ಡೀಲ್ಗಳು ಲಭ್ಯವಾಗಲಿವೆ.



