
ಉಡುಪಿ: ಅತ್ಯುತ್ತಮ ಬೀಚ್‌ಗಳಲ್ಲಿ ಒಂದಾಗಿರುವ ಪಡುಬಿದ್ರಿ ಹಾಗೂ ಎರ್ಮಲ್ ನಲ್ಲಿ ಈಗ ಹಲವಾರು ರೆಸಾರ್ಟ್ಗಳು ಬೀಚ್ ಪಕ್ಕದಲ್ಲಿ ಬರುತ್ತಿದ್ದು, ಅ ಮೂಲಕ ಟೂರಿಸಂ ಚಟುವಟಿಕೆಗಳು ಗರಿಗೆದರಿದೆ. ಇದರಿಂದಾಗಿ ಈ ಪ್ರದೇಶದ ಸುತ್ತಮುತ್ತಲ ಆಸ್ತಿ ಬೆಲೆಗಳು ಗಗನಕ್ಕೇರಿದ್ದು, ಹಿಂದೆಂದೂ ಕಾಣದ ಚಟುವಟಿಕೆಗಳು ಕಂಡುಬರುತ್ತವೆ.
ಕರ್ನಾಟಕದಲ್ಲಿ ಅತ್ಯುತ್ತಮ ಬೀಚಿಗಳಲ್ಲಿ ಒಂದಾಗಿದೆ ಹಾಗೂ ಮಂಗಳೂರು ಉಡುಪಿಯನ್ನು ಸಂಪರ್ಕಿಸಲು ಅತ್ಯುತ್ತಮ ಸ್ಥಳ ಎಂದು ಈ ಪ್ರದೇಶವನ್ನು ಪರಿಗಣಿಸಲಾಗಿದೆ. ಡಿಕೆ ಶಿವಕುಮಾರ್ ಈ ಬಗ್ಗೆ ಅಧಿಕೃತವಾಗಿ ಕರಾವಳಿಯ ಪ್ರವಾಸೋದ್ಯಮ ಅಭಿವೃದ್ಧಿಪಡಿಸುವ ಮಾತುಗಳನ್ನು ಹೇಳಿರುವುದು ಇನ್ನಷ್ಟು ಜನರಲ್ಲಿ ಉದ್ಯಮದ ಆಶಾಭಾವನೆಯನ್ನು ವ್ಯಕ್ತಪಡಿಸಿದೆ.
Also Read : ಮುಂದಿನ ನಾಲ್ಕು ದಿನಗಳ ಕಾಲ ಇರಲಿದೆ ಮಳೆಯ ಅಬ್ಬರ : ಕರಾವಳಿ-ಮಲೆನಾಡಿಗೆ ‘ಆರೆಂಜ್ ಅಲರ್ಟ್’ ಘೋಷಣೆ
ಕರ್ನಾಟಕದಲ್ಲಿ ಕರಾವಳಿ ಭಾಗದಲ್ಲಿ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲು ಹೇರಳ ಅವಕಾಶಗಳಿವೆ. ಅದರಲ್ಲೂ ಪಡುಬಿದ್ರಿ ಹಾಗೂ ಎರ್ಮಾಲ್ ಬೀಚ್ಗಳು ದೇಶದ ಅತ್ಯುತ್ತಮ ಬೀಚುಗಳಲ್ಲಿ ಒಂದು ಎಂಬ ಖ್ಯಾತಿಗೆ ಪಾತ್ರವಾಗಿದೆ.
ಕೆಲವು ದಿನಗಳ ಹಿಂದೆ ಕರ್ನಾಟಕ ರಾಜ್ಯ ಸರ್ಕಾರ ಕರಾವಳಿಯಲ್ಲಿ 38ಕ್ಕೂ ಅಧಿಕ ಟೂರಿಸಂ ಪ್ರಾಜೆಕ್ಟ್ ಗಳಿಗೆ ಅನುಮತಿ ನೀಡಿದೆ ಎಂಬ ಮಾಹಿತಿ ಹೊರಬಿದ್ದಿದೆ. ಇದರಲ್ಲಿ ಹಲವಾರು ರೆಸಾರ್ಟ್ ನಂತಹ ಪ್ರಾಜೆಕ್ಟ್ ಗಳು ಸೇರಿವೆ ಎಂದು ತಿಳಿದು ಬಂದಿದೆ.
Also Read : Pramod Madhwaraj : ಮಲ್ಪೆ ಬಂದರಿನಲ್ಲಿ ಮಹಿಳೆಗೆ ಹಲ್ಲೆ ಪ್ರಕರಣ : ಪ್ರಮೋದ್ ಮಧ್ವರಾಜ್‌ಗೆ ಬಿಗ್ ರಿಲೀಫ್
ಕರಾವಳಿಯ ಪಣಂಬೂರು, ಪಡುಬಿದ್ರಿ, ಎರ್ಮಲ್, ಹಾಗೂ ಉಡುಪಿ ಭಾಗದ ಇನ್ನಿತರ ಬೀಚ್ಗಳು ಈ ಬಂಡವಾಳ ಹೂಡಿಕೆಗೆ ಅತ್ಯಂತ ಉತ್ತಮ ಬೀಚ್ ಗಳು ಎಂಬ ಆಧಾರದ ಮೇಲೆ ಈ ಪ್ರದೇಶಗಳಲ್ಲಿ ಬಂಡವಾಳ ಹೂಡಿಕೆ ಹಾಗೂ ಚಟುವಟಿಕೆಗಳು ಗರಿಗೆದರಿವೆ.
Udupi Yermal Beach property prices soar due to tourism effect



