ಭಾರತದ ಮೋಸ್ಟ್ ಡಿಸೈರೆಬಲ್ ಮೆನ್ ಪಟ್ಟಿಯಲ್ಲೂ ಯಶ್ ಗೆ ಸ್ಥಾನ…! ಟೈಮ್ಸ್ ಪ್ರಕಟಿಸಿದ ಪಟ್ಟಿಯಲ್ಲಿ ಯಾರ್ಯಾರಿದ್ದಾರೆ ನೋಡಿ…!!
ಕರ್ನಾಟಕದ ಮೋಸ್ಟ್ ಡಿಸೈರೆಬಲ್ ಮೆನ್ ಪಟ್ಟಿ ಬಿಡುಗಡೆ ಮಾಡಿದ್ದ ಟೈಮ್ಸ್ ಗ್ರೂಪ್ ಇದೀಗ ಭಾರತದ ಮೋಸ್ಟ್ ಡಿಸೈರೆಬಲ್ ಮೆನ್ ಪಟ್ಟಿ ಬಿಡುಗಡೆ ಮಾಡಿದ್ದು, ವಿಜಯ್ ದೇವರಕೊಂಡ್ ಹಾಗೂ ಕನ್ನಡದ ರಾಕಿಂಗ್ ಸ್ಟಾರ್ ಯಶ್ ಸ್ಥಾನ ಪಡೆದಿದ್ದಾರೆ.
೨೦೨೦ ಸಾಲಿನಲ್ಲಿ ಭಾರತದಲ್ಲಿ ಹೆಚ್ಚು ಗಮನ ಸೆಳೆದ ಸೆಲಿಬ್ರೆಟಿಯಾರು ಎಂಬುದರ ಆಧಾರದ ಮೇಲೆ ಟೈಮ್ಸ್ ಗ್ರೂಪ್ ಬಿಡುಗಡೆ ಮಾಡಿದ ೫೦ ಜನರ ಪಟ್ಟಿಯಲ್ಲಿ ವಿಜಯ್ ದೇವರುಕೊಂಡ ಎರಡನೇ ಸ್ಥಾನದಲ್ಲಿದ್ದು ಮೊದಲ ಸ್ಥಾನ ಯಾರಿಗೆ ಎಂಬ ಗುಟ್ಟನ್ನು ಟೈಮ್ಸ್ ಇನ್ನೂ ಬಿಟ್ಟಿಲ್ಲ.
ಇನ್ನು ಕರ್ನಾಟಕದ ಮೋಸ್ಟ್ ಡಿಸೈರೆಬಲ್ ಮ್ಯಾನ್ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದ ಯಶ್ ಭಾರತದ ಪಟ್ಟಿಯಲ್ಲಿ ೨೧ ನೇ ಸ್ಥಾನದಲ್ಲಿದ್ದಾರೆ.
ಭಾರತದ ಕ್ರೀಡೆ,ಸಿನಿಮಾ,ಸಾಹಿತ್ಯ ಸೇರಿದಂತೆ ಎಲ್ಲ ಕ್ಷೇತ್ರವನ್ನು ಒಳಗೊಂಡ ಈ ಸಮೀಕ್ಷೆಯಲ್ಲಿ ಮೂರನೇ ಸ್ಥಾನದಲ್ಲಿ ಆದಿತ್ಯ ರಾಯ್ ಕಪೂರ್,ನಾಲ್ಕನೇ ಸ್ಥಾನದಲ್ಲಿ ವಿಕ್ಕಿ ಕೌಶಲ್,ಐದನೇ ಸ್ಥಾನದಲ್ಲಿ ದುಲ್ಕರ್ ಸಲ್ಮಾನ್ ಸ್ಥಾನ ಪಡೆದಿದ್ದಾರೆ.
ಟೀಂ ಇಂಡಿಯಾ ಕ್ರಿಕೆಟಿಗ್ ವಿರಾಟ್ ಕೊಹ್ಲಿ ೬ ಹಾಗೂ ಟೈಗರ್ ಶ್ರಾಫ್ ೭ ನೇ ಸ್ಥಾನದಲ್ಲಿದ್ದು,ರಾಣಾದಗ್ಗುಬಾಟಿ,ಕೆ.ಎಲ್.ರಾಹುಲ್,ಅರ್ಮಾನ್ ಮಲ್ಲಿಕ್,ಅಕ್ಷಯ್ ಒಬೆರಾಯ್ ,ಶ್ರೇಯಸ್ ಅಯ್ಯರ್, ಶುಭಮನ್ ಗಿಲ್ ಸೇರಿದಂತೆ ಹಲವು ಸೆಲಿಬ್ರೆಟಿಗಳು ಸ್ಥಾನ ಪಡೆದಿದ್ದಾರೆ.
Comments are closed.