ಬೆಂಗಳೂರು : ಗೃಹಲಕ್ಷ್ಮೀ (Gruha Lakshmi Yojana)ಗೃಹಜ್ಯೋತಿ, ಅನ್ನಭಾಗ್ಯ, ಶಕ್ತಿ ಯೋಜನೆಯ ಮೂಲಕ ರಾಜ್ಯ ಸರಕಾರ ಜನತೆಗೆ ಗುಡ್‌ನ್ಯೂಸ್ ಕೊಟ್ಟಿತ್ತು. ಆದರೆ ಬರಗಾಲ, ಲೋಡ್‌ಶೆಡ್ಡಿಂಗ್‌ನಿಂದಾಗಿ ರಾಜ್ಯದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ನಡುವಲ್ಲೇ ರಾಜ್ಯ ಸರಕಾರ ರೈತರಿಗೆ ಗುಡ್ ನ್ಯೂಸ್ ಕೊಟ್ಟಿದ್ದು, ಬ್ಯಾಂಕ್‌ಗಳು ಸಾಲ ವಸೂಲಾತಿ ಮಾಡದಂತೆ ಸೂಚಿಸಿದೆ.
ರಾಜ್ಯದಲ್ಲಿ ರೈತರ ಆತ್ಮಹತ್ಯೆ ಪ್ರಕರಣವನ್ನು ಕಡಿಮೆ ಮಾಡುವ ಸಲುವಾಗಿ ರಾಜ್ಯ ಸರಕಾರ ಮಹತ್ವದ ಕ್ರಮವನ್ನು ಅನುಸರಿಸಿದೆ. ಈಗಾಗಲೇ ರಾಜ್ಯದ 200 ಕ್ಕೂ ಅಧಿಕ ತಾಲೂಕುಗಳು ಬರಗಾಲದಿಂದ ತತ್ತರಿಸಿ ಹೋಗಿವೆ. ಇದರಿಂದಾಗಿ ಅನ್ನದಾತರು ಬೆಳೆ ಕಳೆದುಕೊಂಡು ಕಂಗಾಲಾಗಿದ್ದಾರೆ.

ಕೇಂದ್ರ ಸರಕಾರ ಈಗಾಗಲೇ ತಜ್ಞರ ತಂಡವನ್ನು ರಾಜ್ಯಕ್ಕೆ ಕಳುಹಿಸಿ ಬರಪೀಡಿತ ತಾಲೂಕಿಗಳಲ್ಲಿ ಸರ್ವೆ ಕಾರ್ಯವನ್ನು ನಡೆಸಿದೆ. ರಾಜ್ಯ, ಕೇಂದ್ರ ಸರಕಾರಗಳು ಬರ ಪರಿಹಾರ ನೀಡುವ ನಿರೀಕ್ಷೆಯಲ್ಲಿ ಅನ್ನದಾತರು ಕಾಯುತ್ತಿದ್ದಾರೆ. ಬರಗಾಲದಿಂದಾಗಿ ಸಾಲ ಪಾವತಿಸದೇ ಸಂಕಷ್ಟಕ್ಕೆ ರೈತರು ಸಿಲುಕಿದ್ದಾರೆ.
ಇದನ್ನೂ ಓದಿ : ಬೆಂಗಳೂರಲ್ಲಿ 4 ದಿನ ವಿದ್ಯುತ್ ಕಡಿತ : ಯಾವ ಏರಿಯಾದಲ್ಲಿ, ಯಾವ ದಿನ ಕರೆಂಟ್ ಇರಲ್ಲ ? ಇಲ್ಲಿದೆ ಸಂಪೂರ್ಣ ಮಾಹಿತಿ
ಬರಗಾಲದಿಂದ ಕಂಗಾಲಾಗಿರುವ ರೈತರ ಸಂಕಷ್ಟಕ್ಕೆ ರಾಜ್ಯ ಸರಕಾರ ಇದೀಗ ಸ್ಪಂದಿಸಿದೆ. ಬರಪೀಡಿತ ಪ್ರದೇಶಗಳಲ್ಲಿ ರೈತರಿಂದ ಸಾಲ ವಸೂಲಿ (Agriculture Loan) ಮಾಡದಂತೆ ರಾಜ್ಯ ಸರಕಾರ ರಾಷ್ಟ್ರೀಕೃತ ಬ್ಯಾಂಕುಗಳಿಗೆ (Nationalised Banks) ಸೂಚನೆಯನ್ನು ನೀಡಿವೆ. ಅಲ್ಲದೇ ರೈತರು ಪಡೆದಿರುವ ಸಾಲವನ್ನು (Agriculture Loan)ಪುನರ್ ರಚಿಸುವಂತೆ ಬ್ಯಾಂಕರ್‌ಗಳ ಸಮಿತಿ ಎಲ್ಲಾ ಬ್ಯಾಂಕುಗಳಿಗೆ ಸೂಚಿಸಿದೆ ಎನ್ನಲಾಗಿದೆ.
ಇದನ್ನೂ ಓದಿ : ಗೃಹಲಕ್ಷ್ಮೀ ಯೋಜನೆಯ ಹಣ ಜಮೆ ಆಗದೇ ಇರುವವರಿಗೆ ಇಲ್ಲಿದೆ ಗುಡ್‌ನ್ಯೂಸ್
ರಾಜ್ಯದಲ್ಲಿ ಬರ ಪರಿಸ್ಥಿತಿಯ ನಡುವಲ್ಲೇ ಲೋಡ್ ಶೆಡ್ಡಿಂಗ್ (load shedding) ಸಮಸ್ಯೆಯನ್ನು ರೈತರು ಎದುರಿಸುತ್ತಿದ್ದಾರೆ.ರಾಜ್ಯದ ಕಾಂಗ್ರೆಸ್ ಸರಕಾರ ರೈತರನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿದೆ. ಕೃಷಿ ಚಟುವಟಿಕೆಗೆ ವಿದ್ಯುತ್ ನೀಡಲು ರಾಜ್ಯ ಸರಕಾರದಿಂದ ಸಾಧ್ಯವಾಗುತ್ತಿಲ್ಲ. ಜೊತೆಗೆ ಬರಗಾಲದಿಂದ ರೈತರು ತತ್ತರಿಸಿದ್ದಾರ ಎಂದು ಮಾಜಿ ಸಚಿವ ಬಿ.ಸಿ.ಪಾಟೀಲ್ ವಾಗ್ದಾಳಿ ನಡೆಸಿದ್ದರು.

ಸದ್ಯಕ್ಕೆ ಬರಗಾಲದಿಂದ ತತ್ತರಿಸಿರುವ ರೈತರು ತಾವು ಹಿಂದೆ ಕೃಷಿಗಾಗಿ ಮಾಡಿದ್ದ ಸಾಲವನ್ನು ಮರುಪಾವತಿ ಮಾಡಲು ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ಸದ್ಯ ಬೆಳೆದಿರುವ ಬೆಳೆ ನೆಲಕಚ್ಚುವ ಭೀತಿಯಲ್ಲಿದ್ದ ಅನ್ನದಾತರು, ಸಾಲವನ್ನು ಮುಂದಿನ ಇಳುವರಿಯಲ್ಲಿ ಪಾವತಿಸಲು ಅವಕಾಶ ದೊರೆತಂತಾಗಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಗೃಹಜ್ಯೋತಿ, ಗೃಹಲಕ್ಷ್ಮೀ, ಅನ್ನಭಾಗ್ಯ ಹಾಗೂ ಶಕ್ತಿ ಯೋಜನೆಯ ಮೂಲಕ ಬಡವರು, ಮಧ್ಯಮ ವರ್ಗದವರಿಗೆ ನೆರವಾಗಿದೆ. ಆದರೆ ರಾಜ್ಯದ ಅನ್ನದಾತರಿಗೆ ಯಾವುದೇ ಘೋಷಣೆಯನ್ನೂ ಮಾಡದಿರುವುದು ಅನ್ನದಾತರ ಆಕ್ರೋಶಕ್ಕೆ ಕಾರಣವಾಗಿದೆ,
ಇದನ್ನೂ ಓದಿ : ಗೃಹಲಕ್ಷ್ಮಿ ಯೋಜನೆಯಿಂದ ಸಿಗುತ್ತೆ 4000ರೂ.: ದಸರಾ, ದೀಪಾವಳಿಗೆ ಬಿಗ್ ಗಿಫ್ಟ್
ಇನ್ನು ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಕೂಡ ರಾಜ್ಯ ಸರಕಾರ ರೈತರ ಪರ ಕಾಳಜಿ ವಹಿಸುತ್ತಿಲ್ಲ ಎಂದು ಆರೋಪ ಮಾಡಿದ್ದರು. ಜೊತೆಗೆ ಮಾಜಿಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ರಾಜ್ಯದಲ್ಲಿ ರಾಜ್ಯ ಸರಕಾರ ಕತ್ತಲೆಭಾಗ್ಯವನ್ನು ಕರುಣಿಸಿದೆ ಎಂಬ ಆರೋಪ ಮಾಡಿದ್ದರು.
Karnataka Good News Dont collect loans from farmers Karnataka government instructions to banks