ವಾರ ಕಳೆದರೂ ಮುಗಿಯದ ಇಂಡಿಗೊ ಅವ್ಯವಸ್ಥೆ : 500ಕ್ಕೂ ಅಧಿಕ ವಿಮಾನಯಾನ ರದ್ದು

IndiGo Chaos: ಒಂದು ವಾರಗಳೇ ಕಳೆಯುತ್ತಾ ಬಂದರೂ ಇಂಡಿಗೊ ವಿಮಾನಯಾನ ಸಂಸ್ಥೆಯ ಬಿಕ್ಕಟ್ಟು ಮಾತ್ರ ಮುಗಿಯುವ ಲಕ್ಷಣ ಗೋಚರಿಸುತ್ತಿಲ್ಲ. ಪೈಲಟ್​ ಡ್ಯೂಟಿ ನಿಯಮಗಳೂ ಹಾಗೂ ಆಂತರಿಕ ಯೋಜನೆಗಳ ದೋಷದಿಂದಾಗಿ ಸೋಮವಾರ ಕೂಡ ವಿಮಾನಯಾನ ವ್ಯತ್ಯಯ ಮುಂದುವರಿದಿದ್ದು 500ಕ್ಕೂ ಅಧಿಕ ವಿಮಾನಗಳು ರದ್ದಾಗಿವೆ.

ಬೆಂಗಳೂರಿನಲ್ಲಿ ಸೋಮವಾರಂದು 127 ಇಂಡಿಯೋ ವಿಮಾನಗಳು ರದ್ದಾಗಿವೆ. ದೆಹಲಿಯಲ್ಲಿ 134 ಹಾಗೂ ಹೈದರಾಬಾದ್​ನಲ್ಲಿ 77 ವಿಮಾನಯಾನ ಸೇವೆ ರದ್ದು ಮಾಡಲಾಗಿದೆ. ಇನ್ನುಳಿದಂತೆ ಮುಂಬೈ, ಚೆನ್ನೈ ಹಾಗೂ ಜೈಪುರದಲ್ಲಿಯೂ ಇದೇ ಸಮಸ್ಯೆ ಮುಂದುವರಿದಿದೆ. ಇನ್ನು ನವೆಂಬರ್​ 21ರಿಂದ ಡಿಸೆಂಬರ್​ 7ರ ನಡುವೆ ರದ್ದಾಗಿರುವ ವಿಮಾನಯಾನ ಟಿಕೆಟ್​ನ ರಿಫಂಡ್​ ಪ್ರಕ್ರಿಯೆ ಮುಂದುವರಿದಿದೆ. ಇಂಡಿಗೋ ಸಂಸ್ಥೆಯು ಈವರೆಗೆ 827 ಕೋಟಿ ರೂಪಾಯಿಗಳನ್ನು ಪ್ರಯಾಣಿಕರಿಗೆ ಮರುಪಾವತಿ ಮಾಡಿದೆ.

ಇದನ್ನೂ ಓದಿ: ಶಬರಿಮಲೆ ಭಕ್ತಾದಿಗಳಿಗೆ ಶುಭ ಸುದ್ದಿ : ರೈಲ್ವೆ ಇಲಾಖೆಯಿಂದ ಕರ್ನಾಟಕ – ಕೇರಳ ವಿಶೇಷ ರೈಲು

ಈ ಎಲ್ಲದರ ನಡುವೆ ವಿಮಾನಗಳ ರದ್ದತಿ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ ಇಲ್ಲ ಎಂದಿದೆ. ಕೇಂದ್ರ ಸರ್ಕಾರವೇ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಇರುವಾಗ ನ್ಯಾಯಾಂಗದ ಮಧ್ಯಪ್ರವೇಶದ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದೆ.
ಇತ್ತ ಪ್ರಯಾಣಿಕರ ಲಗೇಜ್​ ವಿಲೇವಾರಿ ವಿಚಾರದಲ್ಲಿಯೂ ಸಾಕಷ್ಟು ಸಮಸ್ಯೆ ಉಂಟಾಗಿದೆ. 48 ಗಂಟೆಗಳ ಒಳಗಾಗಿ ಪ್ರಯಾಣಿಕರ ಲಗೇಜ್​ಗಳನ್ನು ಅವರ ಕೈಗೆ ಹಸ್ತಾಂತರಿಸುವಂತೆ ಇಂಡಿಗೋ ಸಂಸ್ಥೆಗೆ ಕೇಂದ್ರ ಸರ್ಕಾರ ತಾಕೀತು ಮಾಡಿದೆ. ಈ ವರೆಗೆ 4500 ಬ್ಯಾಗುಗಳನ್ನು ಇಂಡಿಗೋ ಸಂಸ್ಥೆ ಪ್ರಯಾಣಿಕರಿಗೆ ನೀಡಿದೆ. ಇನ್ನೂ ಇಷ್ಟೇ ಸಂಖ್ಯೆಯ ಬ್ಯಾಗುಗಳ ಹಸ್ತಾಂತರ ಪ್ರಕ್ರಿಯೆ ನಡೆಯಬೇಕಿದ್ದು ಮುಂದಿನ 36 ಗಂಟೆಗಳ ಒಳಗಾಗಿ ಈ ಕಾರ್ಯವನ್ನು ಮಾಡಿಮುಗಿಸುವ ಗುರಿಯನ್ನು ಇಂಡಿಗೋ ವಿಮಾನಯಾನ ಸಂಸ್ಥೆ ಹೊಂದಿದೆ.

ರಶ್ಮಿ ಎಸ್. | Rashmi S.

ರಶ್ಮಿ ಎಸ್. ನ್ಯೂಸ್‌ ನೆಕ್ಸ್ಟ್‌ ಕನ್ನಡ ( News Next Kannada) ದಲ್ಲಿ ಕಂಟೆಂಟ್‌ ರೈಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು, ಹತ್ತು ವರ್ಷಗಳ ಕಾಲ ಕನ್ನಡ ಸುದ್ದಿ ಮಾಧ್ಯಮಗಳಲ್ಲಿ ಕೆಲಸ ಮಾಡಿದ್ದಾರೆ. ರಾಜಕೀಯ, ಕ್ರೀಡೆ, ವಾಣಿಜ್ಯ, ಸಿನಿಮಾ, ಸ್ಥಳೀಯ ಸುದ್ದಿಗಳನ್ನು ಪ್ರಕಟಿಸುತ್ತಿದ್ದಾರೆ. More »

Related Stories