ಮಳೆಗಾಲದಲ್ಲಿ ಇಲೆಕ್ಟ್ರಿಕ್‌ ಕಾರ್‌ ಕೇರ್‌ ಮಾಡೋದು ಹೇಗೆ ಅಂತೀರಾ? ಹಾಗಾದ್ರೆ ಈ ಟಿಪ್ಸ್‌ ನಿಮಗಾಗಿ

EV Care Tips: ಮಳೆಗಾಲದ ತಂಪು ವಾತಾವರಣ ನಮ್ಮ ಮನಸ್ಸಿಗೆ ಆಹ್ಲಾದವನ್ನುಂಟು ಮಾಡುವುದಂತು ನಿಜ. ಆದರೆ ವಾಹನಗಳಿಗೆ ಸ್ವಲ್ಪ ಹೆಚ್ಚಿನ ಕಾಳಜಿ ಅಗತ್ಯವಾಗಿ ಬೇಕು.

ಕಷ್ಟಪಟ್ಟು ದುಡಿದ ಹಣದಲ್ಲಿ ನಮ್ಮ ಇಚ್ಛೆಯ ವಾಹನ ಖರೀದಿಸಿ, ಅದು ಬೇಗ ಹಾಳಾಯಿತೆಂದರೆ ಎಂತಹವರಿಗಾದರೂ ಬೇಜಾರಾಗದೇ ಇರದು. ಅದಕ್ಕಾಗಿ ಮಳೆಗಾಲದಲ್ಲಿ ವಾಹನಗಳ ಮೇಲೆ ಅದೆಷ್ಟೇ ಕೇರ್‌ ತೆಗೆದುಕೊಂಡರೂ ಕಡಿಮೆ ಅನ್ನಿಸುತ್ತದೆ.

ಅದರಲ್ಲೂ ನಿಮ್ಮ ಹತ್ತಿರ ಇಲೆಕ್ಟ್ರಿಕ್‌ ವಾಹನಗಳಿದ್ದರೆ ಖಂಡಿತವಾಗಿಯೂ ನೀವು ಕಾಳಜಿ ತೆಗೆದುಕೊಳ್ಳಲೇ ಬೇಕಾಗುತ್ತದೆ. ಇತ್ತೀಚಿಗಿನ ಅತ್ಯಾಧುನಿಕ ಇವಿಗಳು ಸಂಪೂರ್ಣವಾಗಿ ಸುರಕ್ಷಿತವಾಗಿವೆ.

ಹಾಗೆಂದು ಸಂಪೂರ್ಣವಾಗಿ ನಿರ್ಲಕ್ಷವಹಿಸುವುದು ಖಂಡಿತ ಒಳ್ಳೆಯದಲ್ಲ. ಕೆಲವು ಮುಂಜಾಗ್ರತಾ ಕ್ರಮಗಳನ್ನಂತೂ ತೆಗೆದುಕೊಳ್ಳಲೇಬೇಕಾಗುತ್ತದೆ.

ಮಳೆಗಾಲದಲ್ಲಿ ಇಲೆಕ್ಟ್ರಿಕ್‌ ಕಾರು ಓಡಿಸಲು ಒಂದಿಷ್ಟು ಮುನ್ನೆಚ್ಚರಿಕೆಯ ಸಲಹೆಗಳನ್ನು ತಿಳಿದುಕೊಂಡರೆ ನಿಮ್ಮ ಪ್ರಯಾಣವು ಸುಖಕರ ಹಾಗೂ ಆನಂದದಾಯಕವಾಗಿರುತ್ತದೆ.

ನಿಮ್ಮ ಇಲೆಕ್ಟ್ರಿಕ್‌ ಕಾರನ್ನು ಯಾವ ರೀತಿ ಕಾಳಜಿ ಮಾಡಬೇಕು ಎಂಬುದರ ಬಗ್ಗೆ ಇಲ್ಲಿ ಕೆಲವು ಸಲಹೆಗಳನ್ನು ನೀಡಲಾಗಿದೆ. ಅವುಗಳನ್ನು ತಪ್ಪದೇ ಪಾಲಿಸಿ.

ಮಳೆಗಾಲದಲ್ಲಿ ನಿಮ್ಮ ಇಲೆಕ್ಟ್ರಿಕ್‌ ಕಾರನ್ನು ಹೀಗೆ ಕಾಳಜಿ ಮಾಡಿ

ನೀರು ನಿಲ್ಲುವ ರಸ್ತೆಗಳನ್ನು ಆಯ್ದುಕೊಳ್ಳಬೇಡಿ

ಮಳೆಗಾಲದಲ್ಲಿ ಭಾರಿ ಮಳೆಯಿಂದಾಗಿ ರಸ್ತೆಯ ಮೇಲೆ ನಿಲ್ಲುವುದು ಸರ್ವೇಸಾಮಾನ್ಯ. ಜಲಾವೃತವಾದ ರಸ್ತೆಗಳಲ್ಲಿ ಗುಂಡಿಗಳು ಎಲ್ಲಿವೆಯೆಂಬುದು ಕಾಣುವುದಿಲ್ಲ. ಆದ್ದರಿಂದ ಅಂತಹ ರಸ್ತೆಗಳನ್ನು ಆದಷ್ಟು ತಪ್ಪಿಸಿ. ಇಲೆಕ್ಟ್ರಿಕ್‌ ಕಾರುಗಳ ಬ್ಯಾಟರಿ ಮತ್ತು ಮೋಟಾರ್‌ ಅನ್ನು ನೀರಿನಿಂದ ಸುರಕ್ಷಿತವಾಗಿಡಲು ಚೆನ್ನಾಗಿ ಮುಚ್ಚಲಾಗುತ್ತದೆ. ಆದರೂ ನೀರಿನಿಂದ ತುಂಬಿದ ಆಳವಾದ ಗುಂಡಿಗಳಿರುವ ರಸ್ತೆಗಳಲ್ಲಿ ಕಾರು ಓಡಿಸುವುದನ್ನು ತಪ್ಪಿಸುವುದು ಉತ್ತಮ. ಕೆಲವೊಮ್ಮೆ ಆಳವಾದ ಗುಂಡಿಯಲ್ಲಿ ಕಾರು ಸಿಲುಕಿದರೆ ತೊಂದರೆಗಳನ್ನು ಅನುಭವಿಸಬೇಕಾಗಬಹುದು. ಆದ್ದರಿಂದ ನೀರು ನಿಲ್ಲುವ ರಸ್ತೆಗಳನ್ನು ಆಯ್ದುಕೊಳ್ಳಬೇಡಿ.

ಇದನ್ನೂ ಓದಿ: Top 12 EV cars 2025 ರಲ್ಲಿ ಬಿಡುಗಡೆ ಆಗೋ ಟಾಪ್‌ 12 ಇವಿ ಕಾರುಗಳು

ಮಳೆಯಲ್ಲಿ ವಾಹನ ನಿಲ್ಲಿಸಬೇಡಿ

ಮಳೆಗಾಲದಲ್ಲಿ ನಿಮ್ಮ ಇಲೆಕ್ಟ್ರಿಕ್‌ ವಾಹನಗಳನ್ನು ಮಳೆಯಲ್ಲಿ ನಿಲ್ಲಿಸಬೇಡಿ. ಅದನ್ನು ಶೆಡ್‌ನಲ್ಲಿ ನಿಲ್ಲಿಸಿ. ಸ್ವಲ್ಪ ಸಮಯ ನಿಲ್ಲಿಸಬೇಕಾದ ಸಂದರ್ಭದಲ್ಲಿ ನಿಲ್ಲಿಸಿ. ಆದರೆ ಬಹಳ ಸಮಯದವರೆಗೆ ನಿಲ್ಲಿಸಬೇಡಿ. ಇವಿನ್ನು ನೀರಿಲ್ಲದ ಸ್ಥಳದಲ್ಲಿ ನಿಲ್ಲಿಸುವುದರಿಂದ ಅದನ್ನು ಸುರಕ್ಷಿತವಾಗಿಡಬಹುದು.

ಬ್ರೇಕ್‌ಗಳನ್ನು ಬಹಳ ಎಚ್ಚರಿಕೆಯಿಂದ ಬಳಸಿ

ಕಾರಿನ ಅತ್ಯಂತ ಪ್ರಮುಖ ಭಾಗವೆಂದರೆ ಅದು ಬ್ರೇಕ್‌. ಆದ್ದರಿಂದ ಬ್ರೇಕ್‌ ಅನ್ನು ಸರಿಯಾಗಿ ಬಳಸಬೇಕು. ಒದ್ದೆಯಾದ ರಸ್ತೆಗಳಲ್ಲಿ ಹಠಾತ್‌ ಬ್ರೇಕ್‌ ಹಾಕುವುದರಿಂದ ಕಾರು ಸ್ಕಿಡ್‌ ಆಗುವ ಸಾಧ್ಯತೆ ಹೆಚ್ಚಿರುತ್ತದೆ. ಆದ್ದರಿಂದ ನಿಧಾನವಾಗಿ ಬ್ರೇಕ್‌ ಹಾಕಿ. ನಿಮ್ಮ ಮುಂದಿನ ಕಾರು ಮತ್ತು ನಿಮ್ಮ ಕಾರಿನ ನಡುವೆ ಅಂತರ ಕಾಯ್ದುಕೊಳ್ಳಿ. ಮಳೆ ಬರುತ್ತಿರುವಾಗ ವೇಗವಾಗಿ ಕಾರು ಓಡಿಸುವುದನ್ನು ತಪ್ಪಿಸಿ.

ಟೈರ್‌ನ ಗ್ರಿಪ್‌ ಪರಿಶೀಲಿಸಿ

ಒದ್ದೆಯಾದ ರಸ್ತೆಯ ಮೇಲೆ ಜಾರುವ ಅಪಾಯ ಹೆಚ್ಚಿರುತ್ತದೆ. ಅದಕ್ಕಾಗಿ ಟೈರ್‌ನ ಗ್ರಿಪ್‌ ಸರಿಯಾಗಿದೆಯೇ ಎಂದು ಆಗಾಗ ಪರೀಕ್ಷಿಸುತ್ತಿರಿ. ಟೈರ್‌ಗಳು ಸವೆದು ಹೋಗಿದ್ದರೆ ತಕ್ಷಣ ಅವುಗಳನ್ನು ಬದಲಾಯಿಸಿ. ಒಳ್ಳೆಯ ಗ್ರಿಪ್‌ ಹೊಂದಿರುವ ಟೈರ್‌ ಮಳೆಯಲ್ಲೂ ಉತ್ತಮ ಗ್ರಿಪ್ ಅನ್ನು ಒದಗಿಸುತ್ತದೆ. ಕಾರು ಜಾರುವುದನ್ನು ಅದು ತಪ್ಪಿಸುತ್ತದೆ. ಸುರಕ್ಷತಾ ದೃಷ್ಟಿಯಿಂದ ಟೈರ್‌ ನ ಗ್ರಿಪ್‌ ಅನ್ನು ಪರೀಕ್ಷಿಸುತ್ತಿರುವುದು ಬಹಳ ಮುಖ್ಯವಾಗಿದೆ.

ಇದನ್ನೂ ಓದಿ: Honda CB 125 Hornet Bike: ಹೊಂಡಾದ ಹೊಸ CB 125 ಹಾರ್ನೆಟ್‌ ಬೈಕ್‌: ಇದು ಮಧ್ಯಮ ವರ್ಗದವರಿಗೆ ಗುಡ್‌ನ್ಯೂಸ್

Automobile how to take care of electric cars in monsoon ev maintenance tips in kannada

Archana V. Bhat |ಅರ್ಚನಾ ವಿ. ಭಟ್

ಅರ್ಚನಾ ವಿ. ಭಟ್‌ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮೂಲದವರು. ಕಳೆದ ಹಲವು ವರ್ಷಗಳಿಂದಲೂ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನ್ಯೂಸ್‌ನೆಕ್ಸ್ಟ್‌ ಕನ್ನಡ ಸುದ್ದಿ ಸಂಸ್ಥೆಯಲ್ಲಿ ನಾಲ್ಕು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವ್ಯವಹಾರ, ಆಟೋಮೊಬೈಲ್‌, ಟೆಕ್ನಾಲಜಿ, ಕ್ರೀಡೆ ಸುದ್ದಿ ವಿಭಾಗದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿದ್ದಾರೆ.. ನೈಜ, ಸತ್ಯ ಸುದ್ದಿಯನ್ನು ಪ್ರಕಟಿಸುತ್ತಿದ್ದಾರೆ.

Related Stories