Honda CB 125 Hornet Bike: ಹೊಂಡಾದ ಹೊಸ CB 125 ಹಾರ್ನೆಟ್‌ ಬೈಕ್‌: ಇದು ಮಧ್ಯಮ ವರ್ಗದವರಿಗೆ ಗುಡ್‌ನ್ಯೂಸ್

Honda CB 125 Hornet Bike: ಭಾರತದ ಆಟೋಮೊಬೈಲ್‌ ಜಗತ್ತಿನಲ್ಲಿ ಮಂಚೂಣಿಯಲ್ಲಿರುವ ಹೊಂಡಾ ಮೋಟಾರ್‌ಸೈಕಲ್‌ ಆಂಡ್‌ ಸ್ಕೂಟರ್‌ ಕಳೆದ ತಿಂಗಳು ತನ್ನ ಮೊದಲ 125cc ಯ ಸ್ಪೋರ್ಟಿ ಬೈಕ್‌ ಒಂದನ್ನು ಅನಾವರಣಗೊಳಿಸಿತ್ತು.

ಆದರೆ ಆಗ ಆ ಬೈಕಿನ ಬೆಲೆಯನ್ನು ಬಹಿರಂಗಪಡಿಸಿರಲಿಲ್ಲ. ಹೊಂಡಾ CB 125 ಹಾರ್ನೆಟ್‌ ಬೈಕ್‌ನ ಬೆಲೆಯನ್ನು ಈಗ ಬಹಿರಂಗಪಡಿಸಿದೆ.

ಈ ಬೈಕ್‌ನ ಬೆಲೆ 1.12 ಲಕ್ಷದಿಂದ ಪ್ರಾರಂಭವಾಗುತ್ತದೆ (ಎಕ್ಸ್‌ ಶೋ ರೂಂ ಬೆಲೆ). ಈಗ ಬೆಲೆಯನ್ನು ನೋಡಿದರೆ, ಮಧ್ಯಮ ವರ್ಗದವರಿಗಾಗಿಯೇ ಮಾರುಕಟ್ಟೆಗೆ ಬಂದ ಬೈಕ್‌ ಎಂದೆನಿಸುತ್ತಿದೆ.

ಈ ಬೈಕ್‌ ಅನ್ನು ಹೊಂಡಾ ಟು–ವೀಲರ್‌ ವೆಬ್‌ಸೈಟ್‌ ಅಥವಾ ಅಧಿಕೃತ ಡೀಲರ್‌ಶಿಪ್‌ ಮುಖಾಂತರ ಬುಕಿಂಗ್‌ ಮಾಡಬಹುದಾಗಿದೆ.

ಬುಕಿಂಗ್‌ ಮಾಡಿದ ಬೈಕ್‌ನ ವಿತರಣೆಯು ಆಗಸ್ಟ್ 2025ರ ಮಧ್ಯದಲ್ಲಿ ಪ್ರಾರಂಭವಾಗುತ್ತದೆ ಎನ್ನಲಾಗಿದೆ. ಈ ಬೈಕ್‌ನ ವೈಶಿಷ್ಟ್ಯ, ವಿನ್ಯಾಸ, ಬಣ್ಣ ಮುಂತಾದವುಗಳ ಬಗ್ಗೆ ತಿಳಿದುಕೊಳ್ಳೋಣ.

Honda CB 125 Hornet Bike ವಿನ್ಯಾಸ ಮತ್ತು ವೈಶಿಷ್ಟ್ಯ:

ಹೊಂಡಾ CB125 ಹಾರ್ನೆಟ್‌ ಇದು ತನ್ನ‌ವಿಶಿಷ್ಟ ವಿನ್ಯಾಸದಿಂದ ಗ್ರಾಹಕರ ಗಮನ ಸೆಳೆಯುತ್ತದೆ. CB125 ಹಾರ್ನೆಟ್ 125 ಬೈಕ್‌ 123.94 ಸಿಸಿ, ಏರ್-ಕೂಲ್ಸ್, ಸಿಂಗಲ್-ಸಿಲಿಂಡರ್ ಎಂಜಿನ್‌ನಿಂದ ಚಲಿಸುತ್ತದೆ.

ಇದನ್ನು 11.1hp ಮತ್ತು 11.2Nm ನ ಹೆಚ್ಚಿನ ವಿದ್ಯುತ್ ಉತ್ಪಾದನೆಯನ್ನು ಉತ್ಪಾದಿಸಲು ಟ್ಯೂನ್ ಮಾಡಲಾಗಿದೆ. ಇದರ ಎಂಜಿನ್ ಅನ್ನು 5-ಸ್ಪೀಡ್ ಟ್ರಾನ್ಸ್‌ಮಿಷನ್‌ಗೆ ಜೋಡಿಸಲಾಗಿದೆ.

ಇದು 2.0 ನಿಂದ 4.2 ಇಂಚಿನ ಟಿಎಫ್‌ಟಿ ಡಿಸ್ಪ್ಲೇಯನ್ನು ಹೊಂದಿದೆ. ಹೊಂಡಾ ರೋಡ್‌ಸಿಂಕ್‌ ಅಪ್ಲಿಕೇಶನ್ ಮೂಲಕ ಬ್ಲೂಟೂತ್‌ ಸಂಪರ್ಕವು ಇದರಲ್ಲಿದೆ.

ಇದರಿಂದ ಚಾಲಕರು ಮ್ಯೂಸಿಕ್‌ ಪ್ಲೇಬ್ಯಾಕ್‌ ವಿವರಗಳು, ಮೊಬೈಲ್‌ ಕರೆ ಮತ್ತು ನೋಟಿಫಿಕೇಶನ್‌, ಟರ್ನ್‌–ಬೈ–ಟರ್ನ್‌ ನ್ಯಾವಿಗೇಷನ್‌ನಂತಹ ವೈಶಿಷ್ಟವನ್ನು ಪಡೆಯಬಹುದು.

ಇದು ಎಲ್‌ಇಡಿ ಡಿಆರ್‌ಎಲ್‌ ಮತ್ತು ಹೈ ಮೌಂಟೆಡ್‌ ಎಲ್‌ಇಡಿ ಸೂಚಕಗಳೊಂದಿಗೆ ಸಿಗ್ನೇಚರ್ ಟ್ವಿನ್‌ ಎಲ್‌ಇಡಿ ಹೆಡ್‌ಲ್ಯಾಂಪ್‌ ಸೆಟಪ್‌ ನಿಂದ ವಿಶೇಷವಾಗಿ ಕಾಣಿಸುತ್ತದೆ.

ಇದರ ಇಂಧನ ಟ್ಯಾಂಕ್‌ ಎತ್ತರವಾಗಿದ್ದು ಸ್ಟೈಲಿಶ್‌ ನೋಟವನ್ನು ನೀಡುತ್ತದೆ. ಇದರ ಸೀಟ್‌ ಸ್ಪ್ಲಿಟ್‌ ವಿನ್ಯಾಸವನ್ನು ಹೊಂದಿದ್ದು, ಗೋಲ್ಡನ್‌ ಯುಎಸ್‌ಡಿ ಫ್ರಂಟ್‌ ಪೋರ್ಕ್‌ ವೈಶಿಷ್ಟ್ಯವನ್ನು ಹೊಂದಿದೆ.

ಪ್ರೀಲೋಡ್‌–ಅಡ್ಜೆಸ್ಟೆಬಲ್‌ ಮೋನೋಶಾಕ್‌ ಇರುವ ಈ ಬೈಕ್‌ ಮುಂಭಾಗದಲ್ಲಿ 240mm ಡಿಸ್ಕ್‌ ಬ್ರೆಕ್‌, ಸಿಂಗಲ್‌ ಚಾನೆಲ್‌ ಎಬಿಎಸ್‌ ಮತ್ತು ಹಿಂಭಾಗದ ಡ್ರಮ್‌ ಬ್ರೆಕ್‌ನೊಂದಿಗೆ ಬರುತ್ತದೆ.

ಇದು ಹಿಂಭಾಗದ ಡ್ರಮ್ ಬ್ರೇಕ್‌ನಿಂದ ಬರುತ್ತದೆ. ಈ ಬೈಕ್‌ ಮುಂಭಾಗದಲ್ಲಿ 80/100-17 ಟೈರ್‌ ಅನ್ನು ಮತ್ತು ಹಿಂಭಾಗದಲ್ಲಿ 110/80-17 ಟೈರ್‌ಗಳೊಂದಿಗೆ 17-ಇಂಚಿನ ಚಕ್ರಗಳ ಮೇಲೆ ಚಲಿಸುತ್ತದೆ.

ಇದರ ಕರ್ಬ್ ತೂಕವು 124 ಕೆಜಿ ಹೊಂದಿರುವ ಮೂಲಕ ಈ ವರ್ಗದಲ್ಲಿ ಬರುವ ಅತ್ಯಂತ ಹಗುರವಾದ ಬೈಕ್‌ಗಳಲ್ಲಿ ಒಂದಾಗಿದೆ.

ಹೀಗಿದ್ದರೂ ಇದು SP 125 (7 ಕೆಜಿಗಿಂತ ಹೆಚ್ಚು) ಮತ್ತು ಶೈನ್ 125 (11 ಕೆಜಿ) ಇವೆರಡಕ್ಕಿಂತಲೂ ಸ್ವಲ್ಪ ಭಾರವಾಗಿರುತ್ತದೆ.

ಇದನ್ನೂ ಓದಿ: Top 12 EV cars 2025 ರಲ್ಲಿ ಬಿಡುಗಡೆ ಆಗೋ ಟಾಪ್‌ 12 ಇವಿ ಕಾರುಗಳು

ಯಾವ ಬಣ್ಣಗಳಲ್ಲಿ ಲಭ್ಯ ?

ಹೊಂಡಾದ CB 125 ಹಾರ್ನೆಟ್‌ ಬೈಕ್‌ ನೀಲಿ, ಕೆಂಪು, ಫ್ಲೋರೊಸೆಂಟ್ ಹಳದಿ ಮತ್ತು ಕಪ್ಪು ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದೆ.

ಹಾರ್ನೆಟ್ 125 ಬಣ್ಣ-ಹೊಂದಾಣಿಕೆಯ ಮಿಶ್ರಲೋಹದ ಚಕ್ರಗಳನ್ನು ಹೊಂದಿದೆ.

ಈ ಬೈಕ್‌ ಭಾರತದಲ್ಲಿ, TVS ರೈಡರ್ 125, ಹೀರೋ ಎಕ್ಸ್‌ಟ್ರೀಮ್‌ 125R ಮತ್ತು ಬಜಾಜ್ ಪಲ್ಸರ್ N125 ನೊಂದಿಗೆ ಸ್ಪರ್ಧಿಸಲಿದೆ.

ಇದನ್ನೂ ಓದಿ: Tata Dark Red Edition Cars: ಟಾಟಾದ ಮೂರು ಡಾರ್ಕ್‌–ರೆಡ್‌ ಎಡಿಷನ್‌ ಎಸ್‌ಯುವಿ ಕಾರುಗಳು

Automobile honda launched new CB125 Hornet Bike know its features and price in kannada

Archana V. Bhat |ಅರ್ಚನಾ ವಿ. ಭಟ್

ಅರ್ಚನಾ ವಿ. ಭಟ್‌ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮೂಲದವರು. ಕಳೆದ ಹಲವು ವರ್ಷಗಳಿಂದಲೂ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನ್ಯೂಸ್‌ನೆಕ್ಸ್ಟ್‌ ಕನ್ನಡ ಸುದ್ದಿ ಸಂಸ್ಥೆಯಲ್ಲಿ ನಾಲ್ಕು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವ್ಯವಹಾರ, ಆಟೋಮೊಬೈಲ್‌, ಟೆಕ್ನಾಲಜಿ, ಕ್ರೀಡೆ ಸುದ್ದಿ ವಿಭಾಗದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿದ್ದಾರೆ.. ನೈಜ, ಸತ್ಯ ಸುದ್ದಿಯನ್ನು ಪ್ರಕಟಿಸುತ್ತಿದ್ದಾರೆ.

Related Stories