ದುಬಾರಿಯಾದ ಫಾಸ್ಟ್ಯಾಗ್‌ ವಾರ್ಷಿಕ ಪಾಸ್‌ ದರ : 3,000 ರೂ. ಇದ್ದ ವಾರ್ಷಿಕ ಪಾಸ್ ಬೆಲೆ ಹೆಚ್ಚಾಗಿದ್ದೆಷ್ಟು?

FASTag Annual Pass Price Hike: ನ್ಯಾಷನಲ್‌ ಹೈವೇ ಅಥಾರಿಟಿ ಆಫ್ ಇಂಡಿಯಾ (NHAI) ಫಾಸ್ಟ್ಯಾಗ್‌ನ ವಾರ್ಷಿಕ ಬೆಲೆಯನ್ನು ಹೆಚ್ಚಿಗೆ ಮಾಡಲಾಗುವುದು ಎಂದು ಘೋಷಣೆ ಮಾಡಿದೆ. ಹೊಸ ದರ ಎಂದಿನಿಂದ ಪ್ರಾರಂಭ ಮತ್ತು ಎಷ್ಟು ರೂಪಾಯಿ ಹೆಚ್ಚಿಗೆ ಪಾವತಿಸಬೇಕು? ಇಲ್ಲಿದೆ ಓದಿ.

FASTag Annual Pass Price Hike: ನೀವು ವಾರ್ಷಿಕ ಫಾಸ್ಟ್ಯಾಗ್‌ (FASTag) ಪಾಸ್‌ ಹೊಂದಿದ್ದರೆ ಅಥವಾ ಪದೇ ಪದೇ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರಯಾಣಿಸುತ್ತಿದ್ದರೆ ಈ ಸುದ್ದಿ ನಿಮಗಾಗಿ. ಇಲ್ಲಿಯವರೆಗೆ ನೀವು ಫಾಸ್ಟ್ಯಾಗ್‌ನ ವಾರ್ಷಿಕ ಪಾಸ್ ಪಡೆಯಲು ಪಾವತಿಸುತ್ತಿದ್ದ 3,000 ರೂ. ಬೆಲೆ ಈಗ ದುಬಾರಿಯಾಗಿದೆ. ನ್ಯಾಷನಲ್‌ ಹೈವೇ ಅಥಾರಿಟಿ ಆಫ್ ಇಂಡಿಯಾ (NHAI) ಹೊಸ ಬೆಲೆಯನ್ನು ಘೋಷಿಸಿದೆ. ಈ ಹೊಸ ಬದಲಾವಣೆ ಏಪ್ರಿಲ್‌ 1, 2026 ರಿಂದ ಜಾರಿಗೆ ಬರಲಿದೆ ಎಂದು ಅದು ಹೇಳಿದೆ. ಇದರ ಅರ್ಥ ಇನ್ಮುಂದೆ ನೀವು ವಾರ್ಷಿಕ ಫಾಸ್ಟ್ಯಾಗ್‌ ಪಾಸ್‌ ಗಾಗಿ ಹೆಚ್ಚಿಗೆ ಹಣ ಪಾವತಿಸಬೇಕು. ಹಾಗಾದರೆ ವಾರ್ಷಿಕ ಪಾಸ್ ಎಷ್ಟು ದುಬಾರಿಯಾಗಿದೆ? ಫಾಸ್ಟ್ಯಾಗ್‌ನ ಪ್ರಯೋಜನಗಳೇನು? ಇಲ್ಲಿದೆ ಓದಿ.

 

ವಾರ್ಷಿಕ ಪಾಸ್ ಎಷ್ಟು ದುಬಾರಿಯಾಗಿದೆ?

ಹೌದು, ಎನ್‌ಎಚ್‌ಎಐ ಫಾಸ್ಟ್ಯಾಗ್‌ ವಾರ್ಷಿಕ ಪಾಸ್‌ ದರವನ್ನು ಹೆಚ್ಚಿಸಿದೆ. ಹೊಸ ದರದ ಪ್ರಕಾರ ಈ ಪಾಸ್‌ಗಾಗಿ 3,075 ರೂ. ಪಾವತಿಸಬೇಕಾಗುತ್ತದೆ ಎಂದು ಎನ್‌ಎಚ್‌ಎಐ ತಿಳಿಸಿದೆ. ಈ ಹೊಸ ದರವು ಏಪ್ರಿಲ್‌ 1, 2026 ರಿಂದ ಜಾರಿಗೆ ಬರಲಿದೆ.

ಇದನ್ನೂ ಓದಿ: ಉಡುಪಿ: ಕಟಪಾಡಿಯಲ್ಲಿ ಗ್ಯಾಸ್ ಟ್ಯಾಂಕರ್ ಪಲ್ಟಿ : ಸಂಚಾರಕ್ಕೆ ಪರ್ಯಾಯ ಮಾರ್ಗ

ಏನಿದು ಫಾಸ್ಟ್‌ಟ್ಯಾಗ್‌?

ಹೆದ್ದಾರಿಗಳಲ್ಲಿ ಟೋಲ್ ತೆರಿಗೆ ಪಾವತಿಯನ್ನು ಸರಳಗೊಳಿಸಲು ಫಾಸ್ಟ್ಯಾಗ್‌ (FASTag) ನ ವಾರ್ಷಿಕ ಪಾಸ್ ಅನ್ನು ಪರಿಚಯಿಸಲಾಯಿತು. ಅದು ಒಂದು ವರ್ಷದ ಮಾನ್ಯತೆಯ ಅವಧಿ ಅಥವಾ 200 ಉಚಿತ ಟೋಲ್ ತೆರಿಗೆ ಪಾಸ್‌ಗಳನ್ನು ಪಾವತಿಸುವ ಸಾಮರ್ಥ್ಯ (ಯಾವುದು ಮೊದಲು ಮುಕ್ತಾಯಗೊಳ್ಳುತ್ತದೆಯೋ ಅದು) ಹೊಂದಿರುವ ಪಾಸ್‌ ಆಗಿದೆ. ಇದರರ್ಥ ನೀವು ಒಂದು ವರ್ಷದ ಮಾನ್ಯತೆಯ ಅವಧಿ ಮುಗಿಯುವ ಮೊದಲು 200 ಟೋಲ್ ತೆರಿಗೆ ಪಾಸ್‌ಗಳನ್ನು ಪಾವತಿಸಿದ್ದರೆ, ನೀವು ಮತ್ತೊಮ್ಮೆ ಅದನ್ನು ರೀಚಾರ್ಜ್ ಮಾಡಬೇಕಾಗುತ್ತದೆ. ಒಂದು ವರ್ಷದ ಮಾನ್ಯತೆಯ ಅವಧಿ ಮುಗಿದ ಮೇಲೂ ರೀಚಾರ್ಜ್ ಮಾಡಬೇಕಾಗುತ್ತದೆ.

ಫಾಸ್ಟ್ಯಾಗ್‌ನ ಪ್ರಯೋಜನವೇನು?

ಹೆದ್ದಾರಿಗಳಲ್ಲಿ ಪದೇ ಪದೇ ಪ್ರಯಾಣಿಸುವವರಿಗೆ ಈ ಫಾಸ್ಟ್ಯಾಗ್‌ ಬಹಳ ಪ್ರಯೋಜನಕಾರಿಯಾಗಿದೆ. ಒಮ್ಮೆ ಶುಲ್ಕ ಪಾವತಿಸಿ ರಿಚಾರ್ಜ್‌ ಮಾಡಿದರೆ, ಅದನ್ನು ವರ್ಷಪೂರ್ತಿ ಉಪಯೋಗಿಸಬಹುದಾಗಿದೆ. ಪದೇ ಪದೇ ರಿಚಾರ್ಜ್‌ ಮಾಡುವ ಕಿರಿಕಿರಿ ತಪ್ಪುತ್ತದೆ.

Archana V. Bhat |ಅರ್ಚನಾ ವಿ. ಭಟ್

ಅರ್ಚನಾ ವಿ. ಭಟ್‌ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮೂಲದವರು. ಕಳೆದ ಹಲವು ವರ್ಷಗಳಿಂದಲೂ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನ್ಯೂಸ್‌ನೆಕ್ಸ್ಟ್‌ ಕನ್ನಡ ಸುದ್ದಿ ಸಂಸ್ಥೆಯಲ್ಲಿ ನಾಲ್ಕು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವ್ಯವಹಾರ, ಆಟೋಮೊಬೈಲ್‌, ಟೆಕ್ನಾಲಜಿ, ಕ್ರೀಡೆ ಸುದ್ದಿ ವಿಭಾಗದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿದ್ದಾರೆ.. ನೈಜ, ಸತ್ಯ ಸುದ್ದಿಯನ್ನು ಪ್ರಕಟಿಸುತ್ತಿದ್ದಾರೆ.

Related Stories