ನೆಕ್ಸಾನ್ ಇವಿ ಯಿಂದ ಟಿಯಾಗೊ ಇವಿ ವರೆಗೆ ಟಾಟಾದ ಈ 4 ಕಾರುಗಳ ಮೇಲೆ 1.71 ಲಕ್ಷ ರೂ.ಗಳ ಭರ್ಜರಿ ರಿಯಾಯಿತಿ: ಮಾರ್ಚ್ 31 ರೊಳಗೆ ಬುಕ್ ಮಾಡಿ
ಟಾಟಾ ತನ್ನ ಜನಪ್ರಿಯ ಇವಿ ಕಾರುಗಳ ಮೇಲೆ ಭರ್ಜರಿ ರಿಯಾಯಿತಿ ಘೋಷಿಸಿದೆ. ಸೀಮಿತ ಅವಧಿಗೆ ನೀಡಿರುವ ಈ ಕೊಡುಗೆ ಯಾವ ಯಾವ ಕಾರುಗಳಿಗೆ ಲಭ್ಯಿರುತ್ತದೆ ಇಲ್ಲಿದೆ ಓದಿ.
Tata Electric Car Discount March 2026: ಈ ವರ್ಷ ಇಲೆಕ್ಟ್ರಿಕ್ ಕಾರು ಖರೀದಿಸುವ ಪ್ಲಾನ್ ಏನಾದರೂ ಇದ್ದರೆ ಟಾಟಾ ನಿಮಗೆ ಉತ್ತಮ ಅವಕಾಶವೊಂದನ್ನು ಮಾಡಿಕೊಡುತ್ತಿದೆ. ಹೌದು, ಭಾರತದ ಅತಿ ದೊಡ್ಡ ಪ್ರಯಾಣಿಕ ವಾಹನ ತಯಾರಕ ಕಂಪನಿ ಟಾಟಾ, ತನ್ನ ಜನಪ್ರಿಯ ಮಾಡೆಲ್‌ಗಳ ಪ್ರಮುಖ ಇಲೆಕ್ಟ್ರಿಕ್ ಕಾರುಗಳ ಮೇಲೆ ಉತ್ತಮ ರಿಯಾಯಿತಿ ನೀಡುತ್ತಿದೆ. ಹಣಕಾಸು ವರ್ಷದ ಅಂತ್ಯ ಮತ್ತು ಸ್ಟಾಕ್ ಕ್ಲಿಯರೆನ್ಸ್ ಗಾಗಿ ಟಾಟಾ ದೊಡ್ಡ ಮೊತ್ತದ ರಿಯಾಯಿತಿ ನೀಡುತ್ತಿದೆ. ಈ ವಿಶೇಷ ಕೊಡುಗೆಯು ಮಾರ್ಚ್ 31, 2026 ರೊಳಗೆ ಖರೀದಿಸುವ ನೆಕ್ಸಾನ್ ಇವಿ, ಪಂಚ್ ಇವಿ, ಕರ್ವ್ ಇವಿ ಮತ್ತು ಟಿಯಾಗೊ ಇವಿ ಕಾರುಗಳಿಗೆ ಮಾನ್ಯವಾಗಿರುತ್ತದೆ. ಒಟ್ಟಾರೆಯಾಗಿ 1.71 ಲಕ್ಷ ರೂ. ಗಳವರೆಗೆ ದೊಡ್ಡ ಮೊತ್ತದ ಪ್ರಯೋಜನ ಪಡೆಯಬಹುದಾದ ಟಾಟಾ ಇವಿ ಕಾರುಗಳು ಯಾವುವು ಎಂದು ನೋಡೋಣ.
ಟಾಟಾ ಕರ್ವ್ ಇವಿ
ಟಾಟಾದ ಇವಿ ಕಾರುಗಳಲ್ಲಿ ಸ್ಟೈಲಿಶ್ ಕೂಪ್ ವಿನ್ಯಾಸದ ಕಾರು ಎಂದು ಹೆಸರು ಪಡೆದಿರುವ ಕರ್ವ್ ಇವಿ ಮೇಲೆ ಟಾಟಾ 1.71 ಲಕ್ಷ ರೂ. ಗಳ ವರೆಗೆ ಪ್ರಯೋಜನ ಪಡೆದುಕೊಳ್ಳಬಹುದು. ಈ ಕಾರು 45kWh ಮತ್ತು 55kWh ನಂತಹ ಶಕ್ತಿಶಾಲಿ ಬ್ಯಾಟರಿ ಪ್ಯಾಕ್ ಆಯ್ಕೆ ನೀಡುತ್ತದೆ. ಸಿಂಗಲ್ ಚಾರ್ಜ್‌ನಲ್ಲಿ ದೂರದ ಪ್ರಯಾಣಕ್ಕೆ ಉತ್ತಮವಾಗಿರುವ ಈ ಕಾರಿನ ಆರಂಭಿಕ ಬೆಲೆ 17.49 ಲಕ್ಷ ರೂ.
ಇದನ್ನೂ ಓದಿ: ರೆನಾಲ್ಟ್ ಡಸ್ಟರ್‌ನಿಂದ ಮರ್ಸಿಡಿಸ್ ವಿ–ಕ್ಲಾಸ್‌ವರೆಗೆ: ಮಾರ್ಚ್ 2026 ನಲ್ಲಿ ಬಿಡುಗಡೆಯಾಗಲಿರುವ ಹೊಸ ಕಾರುಗಳ ಪಟ್ಟಿ
ಟಾಟಾ ನೆಕ್ಸಾನ್ ಇವಿ
ಭಾರತದ ರಸ್ತೆಗಳ ಮೇಲೆ ರಾಜನಂತೆ ಓಡಾಡುವ ಟಾಟಾ ನೆಕ್ಸಾನ್ ಇವಿ ಮಾರ್ಚ್‌ನಲ್ಲಿ ಖರೀದಿಸುವ ಗ್ರಾಹಕರಿಗೆ ಉತ್ತಮ ರಿಯಾಯಿತಿ ಕೊಡುಗೆ ನೀಡುತ್ತಿದೆ. 30kWh ನಿಂದ 45kWh ವರೆಗಿನ ಮೈಲೇಜ್ ನೀಡುವ ನೆಕ್ಸಾನ್ ಇವಿ ಮೇಲೆ 1.41 ಲಕ್ಷದವರೆಗಿನ ಪ್ರಯೋಜನ ಪಡೆಯಬಹುದು. ಫ್ಯಾಮಿಲಿ ಇಲೆಕ್ಟ್ರಿಕ್ ಕಾರು ಹುಡುಕುತ್ತಿರುವವರಿಗೆ ಬೆಸ್ಟ್ ಎನಿಸಿರುವ ನೆಕ್ಸಾನ್ ಇವಿ ಕಾರಿನ ಆರಂಭಿಕ ಬೆಲೆ 12.49 ಲಕ್ಷ ರೂ. ಆಗಿದೆ.
ಟಾಟಾ ಪಂಚ್ ಇವಿ
ಇತ್ತೀಚೆಗೆ ಫೇಸ್‌ಲಿಫ್ಟ್ ಆದ ಹೊಸ ಪಂಚ್ ಇವಿ ಮೇಲೆ ಯಾವುದೇ ರಿಯಾಯಿತಿಗಳನ್ನು ನೀಡುವುದಿಲ್ಲ. ಆದರೆ 2024 ರ ಮಾದರಿಯ ಕಾರುಗಳ ಮೇಲೆ 1.20 ಲಕ್ಷದವರೆಗೆ ರಿಯಾಯಿತಿ ನೀಡುತ್ತಿದೆ. ಸ್ಟಾಕ್ ಇರುವವರೆಗೆ ಈ ಕೊಡುಗೆ ಮಾನ್ಯವಾಗಿರುತ್ತದೆ. ನಗರ ಸಂಚಾರಕ್ಕೆ ಬೆಸ್ಟ್ ಎನಿಸುವು ಈ SUV 25kWh ಮತ್ತು 35kWh ಬ್ಯಾಟರಿ ಆಯ್ಕೆಗಳೊಂದಿಗೆ ಬರುತ್ತದೆ.
ಟಾಟಾ ಟಿಯಾಗೊ ಇವಿ
ಮಧ್ಯಮ ವರ್ಗದವರ ಅಚ್ಚುಮೆಚ್ಚಿನ ಹ್ಯಾಚ್‌ಬ್ಯಾಕ್ ಕಾರ್ ಆದ ಟಿಯಾಗೊ ಇವಿ ಮೇಲೆ ಟಾಟಾ 1.30 ಲಕ್ಷ ರೂ. ಗಳ ಭರ್ಜರಿ ರಿಯಾಯಿತಿ ನೀಡುತ್ತಿದೆ. ಭಾರತದ ಕೈಗಟುಕುವ ಇಲೆಕ್ಟ್ರಿಕ್ ಕಾರು ಎಂದೇ ಹೆಸರುವಾಸಿಯಾಗಿರುವ ಟಿಯಾಗೊ 19.2kWh ಮತ್ತು 24kWh ಬ್ಯಾಟರಿ ಪ್ಯಾಕ್‌ಗಳೊಂದಿಗೆ ಬರುತ್ತದೆ. ಬಜೆಟ್ ಫ್ರೆಂಡ್ಲಿ ಕಾರು ಹುಡುಕುತ್ತಿರುವವರಿಗೆ 7.99 ಲಕ್ಷ ರೂ. ಗಳಿಂದ ಪ್ರಾರಂಭವಾಗುವ ಟಿಯಾಗೊ ಇವಿ ಉತ್ತಮ ಆಯ್ಕೆಯಾಗುವುದರಲ್ಲಿ ಸಂಶಯವೇ ಇಲ್ಲ.



