ನವೆಂಬರ್ 2025ರಲ್ಲಿ ಹೆಚ್ಚು ಮಾರಾಟವಾದ ಟಾಪ್ 5 ಕಾರುಗಳು: ಟಾಟಾ, ಮಾರುತಿ, ಹುಂಡೈ ಯಾವ ಸ್ಥಾನದಲ್ಲಿದೆ?
Top 5 Cars: ಇನ್ನು ಕೆಲವೇ ದಿನಗಳಲ್ಲಿ 2025 ಮುಗಿದು ಹೊಸ ವರ್ಷ 2026 ಪ್ರಾರಂಭವಾಗಲಿದೆ. ಈ ವರ್ಷ ಭಾರತದಲ್ಲಿ ಕಾರುಗಳ ಮಾರಾಟ ಏರುಗತಿಯನ್ನು ಕಂಡಿದೆ.
ಕೆಲವು ಕಾರುಗಳನ್ನು ಜನರು ಬಹಳ ಇಷ್ಟಪಟ್ಟರೆ, ಒಂದಿಷ್ಟು ಕಾರುಗಳು ಹೆಚ್ಚು ಜನರನ್ನು ಆಕರ್ಷಿಸುವಲ್ಲಿ ವಿಫಲವಾಗಿವೆ.
ಆದರೂ ಪ್ರತಿವರ್ಷ ಲಕ್ಷಾಂತರ ಕಾರುಗಳು ಮಾರಾಟವಾಗುವಂತೆ ಈ ವರ್ಷವೂ ವಾಹನ ಮಾರಾಟ ಗಮನಾರ್ಹ ಸಂಖ್ಯೆಯಲ್ಲಿದೆ.
ವರದಿಗಳ ಪ್ರಕಾರ ನವೆಂಬರ್ ತಿಂಗಳಿನಲ್ಲಿ ಕೆಲವು ಬ್ರ್ಯಾಂಡ್‌ನ ಕಾರುಗಳು ಹೆಚ್ಚು ಮಾರಾಟವನ್ನು ಕಂಡು ನಂಬರ್ ಒನ್ ಸ್ಥಾನ ಗಿಟ್ಟಿಸಿಕೊಂಡಿವೆ.
ಹಾಗಾದರೆ ನವೆಂಬರ್ ತಿಂಗಳಿನಲ್ಲಿ ಭಾರತದಲ್ಲಿ ಯಾವ ಕಾರುಗಳು ಟಾಪ್ 5 ರಲ್ಲಿ ಸ್ಥಾನ ಉಳಿಸಿಕೊಂಡಿವೆ ಎಂದು ನೋಡೋಣ.
ಮೊದಲ ಸ್ಥಾನದಲ್ಲಿ ಟಾಟಾ ನೆಕ್ಸಾನ್
ವರದಿಗಳ ಪ್ರಕಾರ, ಟಾಟಾ ನೆಕ್ಸಾನ್ ಟಾಪ್ 5 ಪಟ್ಟಿಯಲ್ಲಿ ಹೆಚ್ಚು ಬೇಡಿಕೆಯಿರುವ ಕಾರು. ಕಳೆದ ತಿಂಗಳು ಈ ಎಸ್‌ಯುವಿಯ 22,434 ಯುನಿಟ್‌ಗಳು ಮಾರಾಟವಾಗಿ ನಂಬರ್ ಒನ್ ಸ್ಥಾನದಲ್ಲಿದೆ.
ಈ ಕಾರುಗಳ ಮಾರಾಟವು ವರ್ಷದಿಂದ ವರ್ಷಕ್ಕೆ 46% ರಷ್ಟು ಹೆಚ್ಚಾಗಿದೆ.
ಎರಡನೇ ಸ್ಥಾನದಲ್ಲಿ ಮಾರುತಿ ಡಿಜೈರ್
ಮಾರುತಿ ಕಂಪನಿಯು ಕಾಂಪ್ಯಾಕ್ಟ್ ಸೆಡಾನ್ ವಿಭಾಗದಲ್ಲಿ ಡಿಜೈರ್ ಕಾರನ್ನು ಮಾರಾಟ ಮಾಡುತ್ತಿದೆ. ತಯಾರಕರು ಕಳೆದ ತಿಂಗಳು ಈ ವಾಹನದ 21,082 ಯುನಿಟ್‌ಗಳನ್ನು ಮಾರಾಟ ಮಾಡಿದೆ.
ವರ್ಷದಿಂದ ವರ್ಷಕ್ಕೆ 79% ಹೆಚ್ಚು ಮಾರಾಟ ಕಂಡು ಎರಡನೇ ಸ್ಥಾನ ಪಡೆದಿದೆ.
ಮಾರುತಿ ಸ್ವಿಫ್ಟ್‌ಗೆ ಮೂರನೇ ಸ್ಥಾನ
ಬಿಡುಗಡೆಯಾದಾಗಿನಿಂದಲೂ ಜನಪ್ರಿಯತೆ ಕಾಯ್ದುಕೊಂಡು ಮಾರುತಿ ಸ್ವಿಫ್ಟ್ ಕಳೆದ ತಿಂಗಳು 19,733 ಯುನಿಟ್‌ಗಳನ್ನು ಮಾರಾಟ ಮಾಡಿದೆ. ಈ ಹ್ಯಾಚ್‌ಬ್ಯಾಕ್ ಕಾರಿನ ಮಾರಾಟವು ವರ್ಷದಿಂದ ವರ್ಷಕ್ಕೆ 34% ರಷ್ಟು ಏರಿಕೆಯಾಗಿ ಮೂರನೇ ಸ್ಥಾನದಲ್ಲಿದೆ.
ನಾಲ್ಕನೇ ಸ್ಥಾನದಲ್ಲಿದೆ ಟಾಟಾ ಪಂಚ್
ಟಾಟಾದ ಪಂಚ್ ಕೂಡ ದೇಶದಲ್ಲಿ ಜನಪ್ರಿಯ ಮಾದರಿಯಾಗಿದೆ. ಕಡಿಮೆ ಬೆಲೆಯ ಉತ್ತಮ SUV ಕಾರಾದ ಪಂಚ್ ಕಳೆದ ತಿಂಗಳು 18,753 ಯುನಿಟ್‌ಗಳ ಮಾರಾಟ ಕಂಡಿದೆ. ಮಾರಾಟದಲ್ಲಿ ವರ್ಷದಿಂದ ವರ್ಷಕ್ಕೆ 21% ಹೆಚ್ಚಳವನ್ನು ದಾಖಲಿಸಿರುವ ಟಾಟಾ ಪಂಚ್ ನಾಲ್ಕನೆ ಸ್ಥಾನದಲ್ಲದೆ.
ಇದನ್ನೂ ಓದಿ: ಮಾರುತಿ, ಹುಂಡೈ, ಹೋಂಡಾಗೆ ನಡುಕ! ಟಾಟಾ ಈ ಕಾರು ರಸ್ತೆಯ ರಾಜನಾಗೋದು ಗ್ಯಾರಂಟಿ
ಟಾಪ್-5 ರಲ್ಲಿ ಕೊನೆ ಸ್ಥಾನ ಪಡೆದ ಹುಂಡೈ ಕ್ರೆಟಾ
ಹುಂಡೈ ಕಂಪನಿಯು ಕ್ರೆಟಾ ಎಸ್‌ಯುವಿಯು ಟಾಪ್ 5 ರಲ್ಲಿ ಸ್ಥಾನ ಉಳಿಸಿಕೊಳ್ಳು ಸಫಲವಾಗಿದೆ. ಕಳೆದ ತಿಂಗಳು ಈ ಎಸ್‌ಯುವಿ 17,344 ಯುನಿಟ್‌ಗಳ ಮಾರಾಟ ಕಂಡಿದೆ, ವರ್ಷದಿಂದ ವರ್ಷಕ್ಕೆ ಈ ಕಾರಿನ ಮಾರಾಟವು ಶೇ. 12 ರಷ್ಟು ಹೆಚ್ಚಳವಾಗಿದೆ.



