ಭಾರತದಲ್ಲಿ ಅನಾವರಣಗೊಂಡ ಕಡಿಮೆ ವೇಗದ, ಕಡಿಮೆ ಬೆಲೆಯ ಝೆಲಿಯೊ ಗ್ರೇಸಿ ಪ್ಲಸ್ ಎಲೆಕ್ಟ್ರಿಕ್ ಸ್ಕೂಟರ್
Zelio Gracy Plus: ಭಾರತದ ವಾಹನ ಪ್ರಪಂಚ ದಿನೇ ದಿನೇ ತನ್ನ ವಿಸ್ತಾರವನ್ನು ಹೆಚ್ಚಿಸಿಕೊಳ್ಳುತ್ತಲೇ ಇದೆ. ಇಲ್ಲಿನ ಮಾರುಕಟ್ಟೆಯಲ್ಲಿ ನಿಯಮಿತವಾಗಿ ಹೊಸ ಹೊಸ ವಾಹನಗಳು ಸೇರ್ಪಡೆಯಾಗುತ್ತಿವೆ.
ಪೆಟ್ರೋಲ್, ಡೀಸಲ್, ಸಿಎನ್‌ಜಿ ವಾಹನಗಳ ಜೊತೆಗೆ ಇವಿ ವಾಹನಗಳು ಪೈಪೋಟಿ ನೀಡುತ್ತಿವೆ. ಅದರಲ್ಲೂ ಸಣ್ಣ ಊರುಗಳಿಂದ ಹಿಡಿದು ದೊಡ್ಡ ನಗರಗಳಿಗೂ ಹೊಂದಿಕೆಯಾಗುವ ಇಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ಬೇಡಿಕೆ ಹೆಚ್ಚುತ್ತಲೇ ಇದೆ.
ಹಾಗಾಗಿ ಅನೇಕ ವಾಹನ ತಯಾರಕರು ಎಲೆಕ್ಟ್ರಿಕ್ ವಾಹನಗಳ ಹೊಸ ಉತ್ಪನ್ನಗಳನ್ನು ಪರಿಚಯಿಸುತ್ತಿದ್ದಾರೆ. ಇದಕ್ಕೆ ಪೂರಕವಾಗಿ ಝೆಲಿಯೊ ಮೊಬಿಲಿಟಿಯಿಂದ ಝೆಲಿಯೊ ಗ್ರೇಸಿ ಪ್ಲಸ್ ಎನ್ನುವ ಎಲೆಕ್ಟ್ರಿಕ್ ಸ್ಕೂಟರ್ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದೆ.
ಕಡಿಮೆ ವೇಗದ ಈ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ಯಾವ ರೀತಿಯ ವೈಶಿಷ್ಟ್ಯಗಳನ್ನು ನೀಡಲಾಗಿದೆ? ಇದರ ಬ್ಯಾಟರಿ ಮತ್ತು ಮೋಟಾರ್‌ನ ಶಕ್ತಿ ಎಷ್ಟು? ಹಾಗೂ ಇದರ ಆನ್‌ರೋಡ್ ಬೆಲೆ ಎಷ್ಟು ಎಂದು ತಿಳಿದುಕೊಳ್ಳೋಣ.
ಝೆಲಿಯೊ ಗ್ರೇಸಿ ಪ್ಲಸ್ (Zelio Gracy Plus) ಸ್ಕೂಟರ್ ವೈಶಿಷ್ಟ್ಯ
ಕಡಿಮೆ ವೇಗದ ಇವಿ ಸ್ಕೂಟರ್ ವಿಭಾಗದಲ್ಲಿ ಝಲಿಯೊ ಭಾರತದ ಮಾರುಕಟ್ಟೆಯಲ್ಲಿ ಗ್ರೇಸಿ ಪ್ಲಸ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡಿದೆ. ತಯಾರಕರು ಈ ಸ್ಕೂಟರ್ ಅನ್ನು 6 ರೂಪಾಂತರಗಳ ಆಯ್ಕೆಯನ್ನು ನೀಡಿದ್ದಾರೆ.
ಹೊಸದಾಗಿ ಬಿಡುಗಡೆಯಾದ ಗ್ರೇಸಿ ಪ್ಲಸ್ ಎಲೆಕ್ಟ್ರಿಕ್ ಸ್ಕೂಟರ್ ಜೆಲ್ ಬ್ಯಾಟರಿ ಮತ್ತು ಲಿಥಿಯಂ ಅಯಾನ್ ಬ್ಯಾಟರಿಯ ಆಯ್ಕೆಗಳನ್ನು ಹೊಂದಿದೆ.
60V/ 32AH ಬ್ಯಾಟರಿ ಜೊತೆಗೆ 72V/ 42AH ಜೆಲ್ ಬ್ಯಾಟರಿಯನ್ನು ಇದು ಹೊಂದಿದೆ. ಮತ್ತೊಂದೆಡೆ, 60V/30AH ಮತ್ತು 74V/32AH ಲಿಥಿಯಂ ಅಯಾನ್ ಬ್ಯಾಟರಿಯ ಆಯ್ಕೆಗಳು ಸಹ ಲಭ್ಯವಿರುತ್ತದೆ.
ಈ ಸ್ಕೂಟರ್ ಅನ್ನು 80 ಕಿ.ಮೀ ನಿಂದ 130 ಕಿ.ಮೀ ವರೆಗಿನ ವೇಗದಲ್ಲಿ ಓಡಿಸಬಹುದಾಗಿದೆ. ಝೆಲಿಯೊದ ಗ್ರೇಸಿ ಪ್ಲಸ್ ಎಲೆಕ್ಟ್ರಿಕ್ ಸ್ಕೂಟರ್ 10 ಮತ್ತು 12 ಇಂಚಿನ ಟೈರ್‌ಗಳು ಮತ್ತು ಮುಂಭಾಗದಲ್ಲಿ ಡಿಸ್ಕ್ ಬ್ರೇಕ್ ಹೊಂದಿದೆ.
ಹೈಡ್ರಾಲಿಕ್ ಶಾಕ್ ಅಬ್ಸಾರ್ಬರ್, ಡಿಆರ್‌ಎಲ್, ಡಿಜಿಟಲ್ ಮೀಟರ್, ಆಂಟಿ ಥೆಫ್ಟ್ ಅಲಾರ್ಮ್, ಪಾರ್ಕಿಂಗ್ ಗೇರ್, ಕೀ ಲೆಸ್ ಡ್ರೈವ್, ಯುಎಸ್‌ಬಿ ಚಾರ್ಚಿಂಗ್ ಪೋರ್ಟ್ ಮುಂತಾದ ವೈಶಿಷ್ಟ್ಯಗಳನ್ನು ಹೊಂದಿದೆ.
ಇದನ್ನೂ ಓದಿ: ಭಾರತದಲ್ಲಿ ಅತೀ ಹೆಚ್ಚು ಮಾರಾಟವಾದ 7 ಸೀಟರ್ ಟಾಪ್ 10 ಕಾರುಗಳ ಪಟ್ಟಿ
Zelio Gracy Plus: ಝೆಲಿಯೊ ಗ್ರೇಸಿ ಪ್ಲಸ್ ಸ್ಕೂಟರ್‌ನ ಬೆಲೆ ಎಷ್ಟು?
ಈ ಸ್ಕೂಟರ್ ಅನ್ನು ತಯಾರಕರು 6 ರೂಪಾಂತರಗಳಲ್ಲಿ ಬಿಡುಗಡೆಗೊಳಿಸಿದ್ದಾರೆ. ಇದರ ಎಕ್ಸ್ ಶೋ ರೂಂ. ಬೆಲೆಯು 54,000 ದಿಂದ ಪ್ರಾರಂಭವಾಗುತ್ತದೆ.
ಇದರ ಟಾಪ್ ಮಾದರಿಯ ಸ್ಕೂಟರ್‌ನ ಬೆಲೆಯು 69,500 ರೂ. (ಎಕ್ಸ್ ಶೋ ರೂಂ ಬೆಲೆ). ಈ ಸ್ಕೂಟರ್ ಅನ್ನು ಬಿಳಿ, ಬೂದು, ಕಪ್ಪು ಮತ್ತು ನೀಲಿ ಬಣ್ಣಗಳಲ್ಲಿ ಖರೀದಿಸಬಹುದಾಗಿದೆ.
ಇದರೊಂದಿಗೆ ಲಿಥಿಯಂ–ಅಯಾನ್ ಬ್ಯಾಟರಿ ರೂಪಾಂತರಗಳ ಮೇಲೆ 2 ರಿಂದ 3 ವರ್ಷಗಳ ಗ್ಯಾರಂಟಿಯನ್ನು ನೀಡಲಾಗುತ್ತಿದೆ.
ಇದನ್ನೂ ಓದಿ: Best Cars Under 6 Lakh : 6 ಲಕ್ಷಕ್ಕಿಂತಲೂ ಕಡಿಮೆ ಬೆಲೆಗೆ ಖರೀದಿಸಿ ಈ ಕಾರು



