ಎಲ್ಲೆಲ್ಲೂ ರಾಮನಾಮ… ರಾಮಮಂದಿರ ಭೂಮಿ ಪೂಜೆಗೆ ಸಜ್ಜಾದ ರಾಮನ ಹುಟ್ಟೂರು : ಐತಿಹಾಸಿಕ ಕ್ಷಣಕ್ಕಾಗಿ ಭಕ್ತರ ಕಾತರ

0

ಅಯೋಧ್ಯೆ : ದೇಶದ ಕೋಟ್ಯಾಂತರ ಭಕ್ತರ ಪಾಲಿಗೆ ಐತಿಹಾಸಿಕ ಕ್ಷಣ. ರಾಮನ ಜನ್ಮಭೂಮಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಕ್ಷಣಗಣನೆ ಆರಂಭವಾಗಿದೆ. ರಾಮ ಮಂದಿರ ಭೂಮಿ ಪೂಜೆ ಮಹೋತ್ಸವಕ್ಕೆ ದೇಶವೇ ಸಂಭ್ರಮಿಸುತ್ತಿದ್ದು, ರಾಮ ನಾಡು ಅಯೋಧ್ಯೆ ವಿದ್ಯುತ್ ದೀಪಾಲಕಾರದಿಂದ ಕಂಗೊಳಿಸುತ್ತಿದೆ.

ಇಂದು ಮಧ್ಯಾಹ್ನ 12:30 ರ ಆಸುಪಾಸಿನಲ್ಲಿ ಸಲ್ಲುವ ಅಭಿಜಿನ್ ಮುಹೂರ್ತದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಿದ್ದಾರೆ. ರಾಮಮಂದಿರ ಭೂಮಿ ಪೂಜೆಯ ಹಿನ್ನೆಲೆಯಲ್ಲಿ ಮಂಗಳವಾರದಿಂದ ಹಲವು ಧಾರ್ಮಿಕ ವಿಧಿ ವಿಧಾನಗಳಿಗೆ ಚಾಲನೆ ದೊರೆತಿದ್ದು, ಸಂಜೆ ದೀಪೋತ್ಸವ, ದೀಪ ಅಲಂಕಾರಗಳಿಂದ ಅಯೋಧ್ಯೆ, ವಿಶೇಷವಾಗಿ ಸರಯೂ ನದಿ ಬಳಿ ಇರುವ ಘಾಟ್ ಗಳು ಕಂಗೊಳಿಸುತ್ತಿದ್ದವು.

ಅಯೋಧ್ಯೆಯಷ್ಟೇ ಅಲ್ಲದೇ ದೇಶದ ವಿವಿಧ ಪ್ರಮುಖ ದೇವಾಲಯಗಳಲ್ಲಿಯೂ ದೀಪೋತ್ಸವ ನಡೆದಿದ್ದು ವಿಶೇಷ ಅಲಂಕಾರ ನೆರವೇರಿಸಲಾಗಿದೆ. ಮಧ್ಯಪ್ರದೇಶದ ಮಹಾಕಾಲೇಶ್ವರ ದೇವಾಲಯದಲ್ಲಿ ದೀಪಗಳನ್ನು ಬೆಳಗಲಾಯಿತು. ನೇಪಾಳದ ಪಶುಪತಿನಾಥ ದೇವಾಲಯದಲ್ಲಿ ವಿಶೇಷ ರುದ್ರಾಭಿಷೇಕ ಮಾಡಲಾಯಿತು.

Leave A Reply

Your email address will not be published.