ಹಾಲು ಉತ್ಪಾದಕರಿಗೆ ಗುಡ್ ನ್ಯೂಸ್ : ಹಾಲು ಖರೀದಿಗೆ 2 ರೂಪಾಯಿ ಹೆಚ್ಚಳ

ತುಮಕೂರು : ಹಾಲು ಉತ್ಪಾದಕರಿಗೆ ತುಮಕೂರು ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಆಡಳಿತ ಮಂಡಳಿ ಭರ್ಜರಿ ಸಿಹಿಕೊಟ್ಟಿದೆ.

Milk procurement

ಹಾಲು ಖರೀದಿಯ ಮೇಲೆ 2 ರೂಪಾಯಿ ಹೆಚ್ಚಳ ಮಾಡಿದೆ. ಈ ಮೂಲಕ ರೈತರಿಗೆ ಪ್ರತೀ ಲೀಟರ್ ಹಾಲಿಗೆ 27 ರೂಪಾಯಿ ದೊರೆಯಲಿದೆ. ಫೆಬ್ರವರಿ 1ರಿಂದಲೇ ರೈತರಿಗೆ ಈ ಲಾಭ ದೊರೆಯಲಿದೆ.

ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನೀಡುತ್ತಿರುವ ಹಾಲಿನ ದರದ ಜೊತೆಗೆ ಸರ್ಕಾರ ನೀಡುವ 5 ರೂ. ಕೂಡ ರೈತರಿಗೆ ಸಿಗಲಿದೆ. ಬೆಲೆ ಹೆಚ್ಚಳದಿಂದ ಪ್ರತಿದಿನ 14.60 ಲಕ್ಷ ರೂ. ಹೆಚ್ಚುವರಿ ಖರ್ಚು ಒಕ್ಕೂಟಕ್ಕೆ ಬೀಳಲಿದೆ ಎಂದು ಅಧ್ಯಕ್ಷ ಸಿ.ವಿ. ಮಹಾಲಿಂಗಯ್ಯ ತಿಳಿಸಿದ್ದಾರೆ.

Comments are closed.