ಹೊಸ ಕೊರೊನಾವೈರಸ್ ಪತ್ತೆ : ಸೌದಿ ಅರೇಬಿಯಾದಲ್ಲಿ ಅಂತರಾಷ್ಟ್ರೀಯ ವಿಮಾನಯಾನ ಸೇವೆ ರದ್ದು

ರಿಯಾದ್ : ಹೊಸ ತಳಿಯ ಕೊರೊನಾ ವೈರಸ್ ಸೋಂಕು ಅರಬ್ ರಾಷ್ಟ್ರಗಳನ್ನು ಕಂಗೆಡಿಸಿದೆ. ಇದೀಗ ಸೌದಿ ಅರೇಬಿಯಾದಲ್ಲಿ ಒಂದು ವಾರಗಳ ಕಾಲ ವಿಮಾನಯಾನ ಸೇವೆಯನ್ನು ರದ್ದು ಪಡಿಸಲಾಗಿದ್ದು, ಗಡಿಗಳನ್ನು ಮುಚ್ಚಲು ಆದೇಶಿಸಲಾಗಿದೆ.

ಲಂಡನ್ ನಲ್ಲಿ ಹೊಸ ಕರೋನಾ ವೈರಸ್ ತಳಿ ಪತ್ತೆಯಾದ ಹಿನ್ನೆಲೆಯಲ್ಲಿ ಸೌದಿ ಅರೇಬಿಯಾ ತನ್ನ ಭೂ ಗಡಿಗಳನ್ನು ಮುಚ್ಚಲು ಮತ್ತು ಅಂತರರಾಷ್ಟ್ರೀಯ ವಿಮಾನಯಾನಗಳನ್ನು ಒಂದು ವಾರ ಸ್ಥಗಿತಗೊಳಿಸಲು ನಿರ್ಧರಿಸಿದೆ ಎಂದು ಅರಬ್ ಮಾಧ್ಯಮಗಳು ವರದಿ ಮಾಡಿವೆ.
ಪ್ರಮುಖವಾಗಿ ಲಂಡನ್, ಡೆನ್ಮಾರ್ಕ್, ನೆದರ್ಲ್ಯಾಂಡ್ಸ್ ಮತ್ತು ದಕ್ಷಿಣ ಆಫ್ರಿಕಾದ ವಿಮಾನಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗು ತ್ತಿದೆ. ಹೊಸ ತಳಿಯ ಕೊರೊನಾ ವೈರಸ್ ಸೋಂಕು ತೀವ್ರವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಹಲವು ರಾಷ್ಟ್ರಗಳು ಎಚ್ಚೆತ್ತುಕೊಂಡಿವೆ.

ಇನ್ನು ಟರ್ಕಿ ಕೂಡ ಹಲವು ರಾಷ್ಟ್ರಗಳ ನಡುವಿನ ಅಂತರಾಷ್ಟ್ರೀಯ ವಿಮಾನಯಾನ ಸೇವೆಯನ್ನು ರದ್ದುಗೊಳಿಸಿವೆ. ಸೌದಿ ಅರೇಬಿಯಾದಲ್ಲಿ, ಯುರೋಪಿಯನ್ ದೇಶಗಳಿಂದ ಸೌದಿ ಅರೇಬಿಯಾಕ್ಕೆ ಆಗಮಿಸಿದ ಜನರನ್ಜು ಕೊರೊನಾ ತಪಾಸಣೆಗೆ ಒಳಪಡಿಸಲಾಗುತ್ತಿದ್ದು, ಕಡ್ಡಾಯವಾಗಿ ಕ್ವಾರಂಟೈನ್ ಗೆ ಒಳಪಡಿಸಲಾಗುತ್ತಿದೆ. ಅಲ್ಲದೇ ಕಳೆದ ಮೂರು ತಿಂಗಳಲ್ಲಿ ಈ ದೇಶಗಳಿಗೆ ಭೇಟಿ ನೀಡಿದವರು ಕೋವಿಡ್ -19 ಪರೀಕ್ಷೆಗೆ ಒಳಗಾಗಬೇಕಾಗುತ್ತದೆ ಎಂದು ಎಸ್‌ಪಿಎ ತಿಳಿಸಿದೆ.

ತಾತ್ಕಾಲಿಕವಾಗಿ ಒಂದು ವಾರಗಳ ಕಾಲ ವಿಮಾನಯಾನ ಸೇವೆಯನ್ನು ರದ್ದುಪಡಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ನಿರ್ಬಂಧದ ಮಿತಿಯನ್ನು ಇನ್ನಷ್ಟು ದಿನಗಳ ವರೆಗೆ ವಿಸ್ತರಣೆ ಮಾಡುವ ಸಾಧ್ಯೆತೆಯೂ ಇದೆ ಎನ್ನಲಾಗುತ್ತಿದೆ.

Comments are closed.