ಹೊಸ ಕೊರೊನಾ ವೈರಸ್ ಪತ್ತೆ : ಇಂಗ್ಲೆಂಡ್ ನಲ್ಲಿ ಮತ್ತೆ ಜಾರಿಯಾಯ್ತು ಲಾಕ್ ಡೌನ್ : ಭಾರತದಲ್ಲಿಯೂ ಆತಂಕ, ತುರ್ತು ಸಭೆ ಕರೆದ ಕೇಂದ್ರ ಸರಕಾರ

ನವದೆಹಲಿ : ಕೊರೊನಾ ವೈರಸ್ ಸೋಂಕಿನ ಪ್ರಮಾಣ ತಗ್ಗುತ್ತಿರುವ ಬೆನ್ನಲ್ಲೇ ಇದೀಗ ಇಂಗ್ಲೆಂಡ್ ನಲ್ಲಿ ಹೊಸ ಅಲೆಯ ಕೊರೊನಾ ವೈರಸ್ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಯು.ಕೆ.ಯಲ್ಲಿ ಇಂದಿನಿಂದಲೇ ಲಾಕ್ ಡೌನ್ ಜಾರಿ ಮಾಡಲಾಗಿದೆ.

ಹೊಸ ಕೊರೊನಾ ವೈರಸ್ ಸೋಂಕು ತೀವ್ರವಾಗಿ ಹರಡುತ್ತಿದ್ದು, ಸೋಂಕು ನಿಯಂತ್ರಣ ಮೀರಿದೆ ಎಂದು ಬ್ರಿಟಿಷ್ ಸರ್ಕಾರ ಎಚ್ಚರಿಸಿದೆ. ಈ ಹಿನ್ನೆಲೆಯಲ್ಲಿ ಹಲವು ಯುರೋಪಿಯನ್ ದೇಶಗಳು ಯುಕೆಯಿಂದ ವಿಮಾನಗಳಿಗೆ ನಿಷೇಧ ಹೇರಿವೆ. ಕೊರೊನಾ ವೈರಸ್ ಸೋಂಕಿನ ರೂಪಾಂತರದಿಂದ ಉಂಟಾಗುವ ಸೋಂಕಿನ ಪ್ರಮಾಣದಲ್ಲಿನ ಹೆಚ್ಚಳವು ಲಕ್ಷಾಂತರ ಜನರು ಮನೆಯಲ್ಲಿಯೇ ಉಳಿದುಕೊಳ್ಳುವಂತೆ ಸೂಚಿಸಲಾಗಿದೆ. ಅಲ್ಲದೇ ಅಂಗಡಿಗಳು ಮತ್ತು ವ್ಯವಹಾರಗಳನ್ನು ಸಂಪೂರ್ಣವಾಗಿ ಮುಚ್ಚಲಾಗಿದ್ದು, ಯುಕೆ ಪ್ರಧಾನಿ ಬೋರಿಸ್ ಜಾನ್ಸನ್ ಅವರು ಲಾಕ್ ಡೌನ್ ನಿಯಮಗಳನ್ನು ಪ್ರಕಟಿಸಿದ್ದಾರೆ.

ಹೊಸ ಕೊರೊನಾ ವೈರಸ್ ಮಾರಣಾಂತಿಕವಾಗಿರುವುದರಿಂದಾಗಿ ಸೋಂಕಿನ ನಿಯಂತ್ರಣಕ್ಕೆ ಐದು ದಿನಗಳ ಕ್ರಿಸ್ ಮಸ್ ಬಬಲ್ ಅನ್ನು ಕೂಡ ರದ್ದು ಮಾಡಲಾಗಿದೆ. ವೈರಸ್ನ ಹೊಸ ರೂಪಾಂತರದಿಂದ ಈಗ ಹರಡುವಿಕೆಯ ಪ್ರಮಾಣದಲ್ಲಿ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಅಲ್ದಲೇ ಇಂಗ್ಲೆಂಡ್ ಈಗಾಗಲೇ ಹೊಸ ಅಲೆಯ ಕುರಿತು ವಿಶ್ವ ಆರೋಗ್ಯ ಸಂಸ್ಥೆಯನ್ನೂ ಎಚ್ಚರಿಸಿದೆ. ಪರಿಸ್ಥಿತಿಯನ್ನು ಹತೋಟಿ ತರಲು ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ ಎಂದು ಇಂಗ್ಲೆಂಡ್‌ನ ಮುಖ್ಯ ವೈದ್ಯಕೀಯ ಅಧಿಕಾರಿ ಪ್ರೊಫೆಸರ್ ಕ್ರಿಸ್ ವಿಟ್ಟಿ ಹೇಳಿದ್ದಾರೆ.

ಹೊಸ ರೂಪದ ಕೊರೊನಾ ಸೋಂಕು ಮರಣದ ಪ್ರಮಾಣವನ್ನು ಹೆಚ್ಚಿಸುತ್ತದೆ ಅನ್ನೋದಕ್ಕೆ ಸಾಕ್ಷ್ಯಗಳು ಲಭ್ಯವಾಗಿಲ್ಲ. ಮಾತ್ರವಲ್ಲ ಯಾವ ಲಸಿಕೆ ಕೊರೊನಾ ಸೋಂಕನ್ನು ತಡೆಯುತ್ತದೆ ಅನ್ನೋ ಬಗ್ಗೆಯೂ ನಿಖರ ಮಾಹಿತಿ ಲಭ್ಯವಾಗಿಲ್ಲ. ಈಗಾಗಲೇ ಹೊಸ ಅಲೆಯ ಕೊರೊನಾ ಸೋಂಕಿನಿಂದಾಗಿ ಇಂಗ್ಲೆಂಡ್ ನಲ್ಲಿ ಪರಿಸ್ಥಿತಿ ಈಗಾಗಲೇ ಕೈ ಮೀರಿ ಹೋಗಿದೆ ಅನ್ನೋದನ್ನು ಯುಕೆ ಆರೋಗ್ಯ ಕಾರ್ಯದರ್ಶಿ ಮ್ಯಾಟ್ ಹ್ಯಾನ್‌ಕಾಕ್ ತಿಳಿಸಿರುವ ಕುರಿತು ಸ್ಕೈ ನ್ಯೂಸ್‌ ವರದಿ ಮಾಡಿದೆ.

ಕೊರೊನಾ ವೈರಸ್ ಸೋಂಕಿಗೆ ಹೋಲಿಸಿದ್ರೆ ಹೊಸ ರೂಪದ ಕೊರೊನಾ ಸೋಂಕು ಹೆಚ್ಚು ಅಪಾಯಕಾರಿಯಾಗಿದ್ದು, ಮುಂದಿನ ಸಂಪ್ಟೆಂಬರ್ ವೇಳೆಗೆ ಇಂಗ್ಲೆಂಡ್ ನ ಸುಮಾರು 70 ಶೇಕಡಾರಷ್ಟು ಜನರಿಗೆ ಕೊರೊನಾ ಸೋಂಕು ಹರಡುವ ಸಾಧ್ಯತೆಯಿದೆ ಅನ್ನೋ ಆಘಾತಕಾರಿ ಸುದ್ದಿ ಹೊರಬಿದ್ದಿದೆ. ಈ ಹಿನ್ನೆಲೆಯಲ್ಲಿ ಇಂಗ್ಲೆಂಡ್ ಸರಕಾರ ಕೂಡ ಹೊಸ ಕೊರೊನಾ ವೈರಸ್ ಸೋಂಕನ್ನು ಗಂಭೀರವಾಗಿ ಪರಿಗಣಿಸಿದೆ.

ಇಂಗ್ಲೆಂಡ್ ನಲ್ಲಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿ ಈಗಾಗಲೇ ಲಾಕ್ ಡೌನ್ ಹೇರಿಕೆಯಾಗಿರುವ ಬೆನ್ನಲ್ಲೇ ವಿಶ್ವದ ಹಲವು ರಾಷ್ಟ್ರಗಳಲ್ಲಿಯೂ ಲಾಕ್ ಡೌನ್ ಮಾತುಗಳು ಕೇಳಿಬರುತ್ತಿದೆ. ಈ ನಿಟ್ಟಿನಲ್ಲಿ ಭಾರತದಲ್ಲಿಯೂ ಆತಂಕ ಶುರುವಾಗಿದ್ದು, ಕೇಂದ್ರ ಆರೋಗ್ಯ ಇಲಾಖೆ ಇಂದು ತುರ್ತು ಸಭೆಯನ್ನು ಕರೆದಿದೆ. ದೇಶಕ್ಕೆ ಹೊಸ ಅಲೆಯ ಕೊರೊನಾ ಸೋಂಕು ಬಾರದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

Comments are closed.