ಕೋಟಿ ಒಡತಿ ಕೊಡಗಿನ ಬೆಡಗಿ…!! ರಶ್ಮಿಕಾ ಮಂದಣ್ಣ ಆಸ್ತಿಯ ಮೊತ್ತ ಎಷ್ಟು ಗೊತ್ತಾ?!

ಸದ್ಯ ದಕ್ಷಿಣ ಭಾರತದ ಸಿನಿಮಾ ರಂಗದಲ್ಲಿ ಮಿಂಚುತ್ತಿರುವ ಕನ್ನಡತಿ ರಶ್ಮಿಕಾ ಮಂದಣ್ಣ ಬಾಲಿವುಡ್ ನಲ್ಲೂ ಒಂದಾದ ಮೇಲೊಂದು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಹೀಗಾಗಿ ಸಂಭಾವನೆಯನ್ನು ಏರಿಸಿಕೊಂಡಿರುವ ರಶ್ಮಿಕಾಮಂದಣ್ಣ ಕೋಟಿ ಒಡತಿಯಾಗಿದ್ದಾಳೆ.

ಬಾಲಿವುಡ್ ನ ಬಿಗ್ ಬಿ ಅಮಿತಾಬ್ ಬಚ್ಚನ್ ಜೊತೆ ನಟಿಸುತ್ತಿರುವ ರಶ್ಮಿಕಾ ಮಂದಣ್ಣ ಚೊಚ್ಚಲ ಸಿನಿಮಾದಲ್ಲಿ  ಮಿಷನ್ ಮಜ್ನುವಿನಲ್ಲಿ ಸಿದ್ಧಾರ್ಥ್ ಮಲ್ಹೋತ್ರಾಗೆ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

ಈಗಾಗಲೇ ಅಲ್ಲೂ ಅರ್ಜುನ್  ಜೊತೆ ಫ್ಯಾನ್ ಇಂಡಿಯಾ ಸಿನಿಮಾ ಪುಷ್ಪಾದಲ್ಲಿ ನಟಿಸಿದ ರಶ್ಮಿಕಾ ಆಸ್ತಿ ಪಾಸ್ತಿಯಲ್ಲಿ ದೀಢೀರ್ ಏರಿಕೆಯಾಗಿದೆ.  ಈಗ  ಚಲನಚಿತ್ರಗಳು,ಬ್ರಾಂಡ್,ಅನುಮೋದನೆಗಳು ಮತ್ತು ಟಿವಿ ಜಾಹೀರಾತಿನ ಆಧಾರದ ಮೇಲೆ ನೆಟ್ ವರ್ತ್ ಆಧಾರದ ಮೇಲೆ ಸದ್ಯ ಕೊಡವಿನ ಕುವರಿ ರಶ್ಮಿಕಾ ಒಟ್ಟು ಆಸ್ತಿ ಅಂದಾಜು 35 ಕೋಟಿ ಎನ್ನಲಾಗಿದೆ.

https://kannada.newsnext.live/karnataka-byelection-duty-30-teachers-death-corona/

ದಕ್ಷಿಣ ಭಾರತದ ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ನಟಿಯಾಗಿರುವ ರಶ್ಮಿಕಾ, ತಮ್ಮ ಪ್ರತಿತಿಂಗಳ ಆದಾಯವನ್ನು 30 ರಿಂದ 40 ಲಕ್ಷ ರೂಪಾಯಿ ಎಂದು ಉಲ್ಲೇಖಿಸಿದ್ದಾರೆ. ಬಾಲಿವುಡ್ ನ ಸಿನಿಮಾಕ್ಕೆ ರಶ್ಮಿಕಾ 5 ಕೋಟಿ ರೂಪಾಯಿ ಪಡೆಯುತ್ತಾರಂತೆ.

https://kannada.newsnext.live/taukte-cyclone-heavy-rain-udupi/

ಇತ್ತೀಚಿಗೆ ತಮ್ಮ ಹುಟ್ಟುಹಬ್ಬದಂದು ರಶ್ಮಿಕಾ, 1 ಕೋಟಿ ಬೆಲೆಬಾಳುವ ರೇಂಜ್ ರೋವರ್ ಎಸ್ಯುವಿಯನ್ನು ಖರೀದಿಸಿದ್ದು, ಈಗಾಗಲೇ ರಶ್ಮಿಕಾ ಬಳಿ 60 ಲಕ್ಷದ ಮರ್ಸಿಡಿಸ್ ಬೆಂಜ್, 30 ಲಕ್ಷದ ಮರ್ಸಿಡಿಸ್ ಸಿ ಕ್ಲಾಸ್ ಬೆಂಜ್ ಹಾಗೂ 20 ಲಕ್ಷದ ಟೊಯೋಟಾ ಇನ್ನೋಉವಾ ಜಾರಿಗೆ.

https://kannada.newsnext.live/sandalwood-jaggesh-tweet-pa-madegwoda-son-corona-covid-19/

ಇದಲ್ಲದೇ ಹುಂಡೈಕ್ರೆಟಾ ಕಾರುಗಳು ರಶ್ಮಿಕಾ ಮಾಲಿಕತ್ವದಲ್ಲಿದೆ. ಹೈದ್ರಾಬಾದ್ ಹಾಗೂ ಮುಂಬೈನಲ್ಲಿ ರಶ್ಮಿಕಾ ಫ್ಲ್ಯಾಟ್ ಕೂಡ ಹೊಂದಿದ್ದಾರಂತೆ. ಒಟ್ಟಿನಲ್ಲಿ ಪೊಗರು ಬೆಡಗಿಯ ಆಸ್ತಿ ಮೊತ್ತ ಕೋಟಿ ಗಡಿದಾಟಿದೆ.ರಶ್ಮಿಕಾ ಹೆತ್ತವರು ಸಾಕಷ್ಟು ಶ್ರೀಮಂತರಾಗಿದ್ದು ಉದ್ಯಮಿಯಾಗಿರುವ ರಶ್ಮಿಕಾ ತಂದೆಗೆ ಸೇರಿದ ಕಾಫಿ ಎಸ್ಟೇಟ್ ಹಾಗೂ ಹೊಟೇಲ್ ಇದೆ. ಕಳೆದ ವರ್ಷದ ಹಿಂದೆ ರಶ್ಮಿಕಾ ಹೆತ್ತವರ ಮೇಲೆ ಐಟಿ ದಾಳಿ ನಡೆದಿತ್ತು.

Comments are closed.