ಪ್ರೇಮಿಗಳ ದಿನದಂದು ಹಲ್ಲೋ ಎನ್ನಲಿದ್ದಾರೆ ಜ್ಯೂನಿಯರ್ ಚಿರು…! ವಿಡಿಯೋ ಮೂಲಕ ಸಿಹಿಸುದ್ದಿ ಕೊಟ್ರು ಮೇಘನಾ ರಾಜ್..!!

ತಮ್ಮ ಸೋಷಿಯಲ್ ಮೀಡಿಯಾ ಪೋಸ್ಟ್ ನಿಂದ ಅಭಿಮಾನಿಗಳಿಗೆ ಸಪ್ರೈಸ್ ಹಾಗೂ ಕುತೂಹಲ ಮೂಡಿಸಿದ್ದ ನಟಿ ಹಾಗೂ ಜ್ಯೂನಿಯರ್ ಚಿರು ಲವ್ಲೀ ಮದರ್ ಮೇಘನಾ ರಾಜ್ ಹೇಳಿದ ಮಾತಿನಂತೆ ಫೆ.12  ಬೆಳಗ್ಗೆ 9 ಗಂಟೆಗೆ ಚಿರು ಹಾಗೂ ಮೇಘನಾ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ್ದಾರೆ.

ತಮ್ಮ ಹಾಗೂ ಚಿರಂಜೀವಿ ಸರ್ಜಾರ ಸವಿನೆನಪುಗಳ ಪೋಟೋಗಳನ್ನು ಜೋಡಿಸಿದ ವಿಡಿಯೋ ಹಂಚಿಕೊಂಡಿರುವ ಮೇಘನಾ ರಾಜ್, ಕೊನೆಯಲ್ಲಿ ನಮ್ಮ ಪ್ರೀತಿಯ ಜ್ಯೂನಿಯರ್ ಚಿರು ನಿಮಗೆಲ್ಲ ಹೆಲ್ಲೋ ಹೇಳಲು ಬರುತ್ತಿದ್ದಾನೆ ಎಂದಿದ್ದಾರೆ.

https://instagram.com/stories/meghana_raj_official/2507203522558034730?igshid=d6raj18mg5in

ಶ್ಯಾಡೋದಲ್ಲಿ ಮಗುವನ್ನು ಎತ್ತಿಕೊಂಡಿರುವ ತಮ್ಮ ಪೋಟೋವನ್ನು ವಿಡಿಯೋದಲ್ಲಿ ಹಂಚಿಕೊಂಡಿರುವ ಮೇಘನಾ ರಾಜ್, ನಿಮಗೆಲ ಹೆಲ್ಲೋ ಹೇಳಲು ಜ್ಯೂನಿಯರ್ ಚಿರು ಫೆ.14 ರಂದು ಬರುತ್ತಿದ್ದಾನೆ. ನೀವೆಲ್ಲಾ ಕಾಯ್ತಾ ಇರಿ ಎಂದಿದ್ದಾರೆ.

ಆದರೆ ಫೆ.14 ಪ್ರೇಮಿಗಳ ದಿನದಂದು ಮೇಘನಾ ರಾಜ್ ತಮ್ಮ ಮಗುವಿನ ಪೋಟೋ ರಿವೀಲ್ ಮಾಡಲಿದ್ದಾರಾ? ಅಥವಾ ಸಪ್ರೈಸ್ ಆಗಿ ತಮ್ಮ ಮಗುವಿನ ನಾಮಕರಣ ನಡೆಸಲಿದ್ದಾರಾ? ಅಥವಾ ಮಗುವಿನ ತುಂಟಾಟದ ಆಡಿಯೋ-ವಿಡಿಯೋ ರಿಲೀಸ್ ಮಾಡಲಿದ್ದಾರಾ? ಎನ್ನೋದು ಸ್ಪಷ್ಟವಾಗಿಲ್ಲ.

ಎರಡು ದಿನಗಳ ಹಿಂದೆ ಮೇಘನಾ ರಾಜ್ ಸೋಷಿಯಲ್ ಮೀಡಿಯಾದಲ್ಲಿ ಫೆ.12 ರಂದು ಎಕ್ಸೈಟಿಂಗ್ ನ್ಯೂಸ್ ಕಾದಿದೆ ಎಂದು ಪೋಸ್ಟ್ ಮಾಡಿದಾಗ ಅಭಿಮಾನಿಗಳ ಮೊದಲ ನೀರಿಕ್ಷೆ ಇದ್ದಿದ್ದು, ಮೇಘನಾ ರಾಜ್ ತಮ್ಮ ಮಗುವಿನ ನಾಮಕರಣದ ಡೇಟ್ ಘೋಷಿಸುತ್ತಾರೆ ಎಂಬುದಾಗಿ. ಅಥವಾ ಪೋಟೋ ರೀವಿಲ್ ಮಾಡಬಹುದು ಎಂಬುದಾಗಿತ್ತು.

ಫೆಬ್ರವರಿ ತಿಂಗಳಿನಲ್ಲೇ ಮೇಘನಾ ರಾಜ್ ಮಗುವಿಗೆ ನಾಮಕರಣ ನಡೆಯಲಿದೆ ಎನ್ನಲಾಗಿತ್ತು. ಆದರೆ ಧ್ರುವ್ ಸರ್ಜಾ ತಮ್ಮ ಬಹುನೀರಿಕ್ಷಿತ ಚಿತ್ರ ಪೊಗರು ಸಿನಿಮಾದ ಪ್ರಮೋಶನ್ ಹಾಗೂ ರಿಲೀಸ್ ಕೆಲಸದಲ್ಲಿ ಬ್ಯುಸಿಯಾಗಿರೋದರಿಂದ ನಾಮಕರಣ ಸಧ್ಯ ನಡೆಯೋದು ಅನುಮಾನ ಎನ್ನಲಾಗ್ತಿದೆ.

ಆದರೆ ಮೇಘನಾ ರಾಜ್ ಈಗ ಮತ್ತಷ್ಟು ಕ್ಯೂರಿಯಾಸಿಟಿ ಹೆಚ್ಚಿಸುವ ಪೋಸ್ಟ್ ಹಾಕಿದ್ದು, ಫೆ.14 ರಂದು ಮೇಘನಾ ಕೊಡುವ ಮತ್ತೊಂದು ಸಪ್ರೈಸ್ ಗೆ ಅಭಿಮಾನಿಗಳು ಕುತೂಹಲದಿಂದ ಕಾಯುವಂತಾಗಿದೆ. ನಾಮಕರಣವಾಗಲಿ ಅಥವಾ ಜ್ಯೂನಿಯರ್ ಚಿರು ಪೋಟೋ, ವಿಡಿಯೋ ರೀಲಿಸ್ ಆಗಲಿ ಎರಡೂ ಅಭಿಮಾನಿಗಳಿಗೆ ಹಬ್ಬವಾಗೋದರಲ್ಲಿ ಅನುಮಾನವೇ ಇಲ್ಲ.

Comments are closed.