Jacqueline fernandez :ವಿಕ್ರಾಂತ್ ರೋಣಕ್ಕೆ ಬಾಲಿವುಡ್ ಬೆಡಗಿ ಎಂಟ್ರಿ…! ಸಿನಿಮಾ ಮೇಕಿಂಗ್ ನೋಡಿ ದಂಗಾದ ಜಾಕ್ವಲಿನ್ ಫರ್ನಾಂಡಿಸ್…!!

ಸ್ಯಾಂಡಲ್ ವುಡ್ ನಲ್ಲಿ ಸಾರ್ಥಕ 25 ವಸಂತಗಳನ್ನು ಪೊರೈಸಿರುವ ನಟ ಸುದೀಪ್ ಬಹುನೀರಿಕ್ಷಿತ ಚಿತ್ರ ವಿಕ್ರಾಂತ್ ರೋಣ. ಫ್ಯಾಂಟಮ್ ನಿಂದ ವಿಕ್ರಾಂತ ರೋಣ ಎಂದು ಬದಲಾಗಿರುವ ಸಿನಿಮಾದ ಗ್ಲಾಮರ್ ಹೆಚ್ಚಿಸಲು ಬಾಲಿವುಡ್ ನಟಿ ಸಿನಿಮಾ ತಂಡ ಸೇರಿಕೊಂಡಿದ್ದಾರೆ. ಅಷ್ಟೇ ಅಲ್ಲ ಸಿನಿಮಾ ಮೇಕಿಂಗ್ ನೋಡಿ ದಂಗಾಗಿದ್ದಾರೆ.

ಬಾಲಿವುಡ್ ನಟಿ, ಶ್ರೀಲಂಕಾ ಸುಂದರಿ ಜಾಕ್ವಲಿನ್ ಫರ್ನಾಂಡಿಸ್ ಸಿಲಿಕಾನ್ ಸಿಟಿಗೆ ಎಂಟ್ರಿ ಕೊಟ್ಟಿದ್ದಾರೆ. ವಿಕ್ರಾಂತ್ ರೋಣ ಸಿನಿಮಾದ ಹಾಡೊಂದಕ್ಕೆ ಜಾಕ್ವಲಿನ್ ಮಾದಕವಾಗಿ ಹೆಜ್ಜೆ ಹಾಕಲಿದ್ದು, ನಟಿಗೆ ಸಿನಿಮಾ ತಂಡ ಸ್ವಾಗತ ಕೋರಿದೆ.

ಸಿನಿಮಾದ ನಿರ್ಮಾಪಕ ಜಾಕ್ ಮಂಜು ಜಾಕ್ವಲಿನ್ ಫರ್ನಾಂಡಿಸ್ ರನ್ನು ವಿಮಾನ ನಿಲ್ದಾಣದಲ್ಲೇ ಸ್ವಾಗತಿಸಿದ್ದಾರೆ. ಇದೇ ಮೊದಲ ಬಾರಿಗೆ ಜಾಕ್ವಲಿನ್ ಕನ್ನಡದಲ್ಲಿ ಕಾಣಿಸಿಕೊಳ್ಳಲಿದ್ದು, ಐಟಂ ಸಾಂಗ್ ವೊಂದರಲ್ಲಿ ನಟಿಸಲಿದ್ದಾರೆ.

ಮೂಲಗಳ ಮಾಹಿತಿ ಪ್ರಕಾರ ವಿಕ್ರಾಂತ್ ರೋಣದ ಒಂದು ಐಟಂ ಸಾಂಗ್ ಗಾಗಿ ನಿರ್ಮಾಪಕರು 3 ಕೋಟಿ ರೂಪಾಯಿ ಖರ್ಚು ಮಾಡಲು ಮುಂದಾಗಿದ್ದು, ಜಾಕ್ವಲಿನ್ ಬರೋಬ್ಬರಿ 1 ಕೋಟಿ ರೂಪಾಯಿ ಸಂಭಾವನೆ ಪಡೆಯಲಿದ್ದಾರಂತೆ.

ಇನ್ನು ಸಿನಿಮಾ ನಿರ್ದೇಶಕ ಅನೂಪ್ ಭಂಡಾರಿ ಜೊತೆ  ಜಾಕ್ವಲಿನ್ ಹಾಡಿನ ಬಗ್ಗೆ ವಿವರಣೆ ಪಡೆದುಕೊಂಡಿದ್ದು, ಸಿನಿಮಾದ ಮೇಕಿಂಗ್ ನೋಡಿ ಸಖತ್ ಖುಷಿಯಾಗಿದ್ದಾರಂತೆ.

ಅಷ್ಟೇ ಅಲ್ಲ ವಿಕ್ರಾಂತ್ ರೋಣ ಸಿನಿಮಾದ ಮೇಕಿಂಗ್, ಸೆಟ್ ಸೇರಿದಂತೆ ಸಿನಿಮಾ ನೋಡಿ ಬೆರಗಾಗಿದ್ದಾರಂತೆ.

ಒಟ್ಟಿನಲ್ಲಿ ಈಗಾಗಲೇ ಸಾಕಷ್ಟು ಕುತೂಹಲ ಮೂಡಿಸಿದ್ದ ವಿಕ್ರಾಂತ್ ರೋಣ ಜಾಕ್ವಲಿನ್ ಎಂಟ್ರಿಯಿಂದ ಮತ್ತಷ್ಟು ಕುತೂಹಲ ಹೆಚ್ಚಿಸಿದ್ದು, ಸುದೀಪ್ ಪ್ಯಾನ್ಸ್ ಸಿನಿಮಾ ರಿಲೀಸ್ ಗಾಗಿ ಕಾಯ್ತಿದ್ದಾರೆ.

Comments are closed.