Sudeep: ಸುದೀಪ್ ಜೊತೆ ಸಖತ್ ಪೋಸ್ ಕೊಟ್ಟ ಹುಡುಗಿ…! ಸುಂದರಾಂಗಿ ಯಾರು ಅನ್ನೋ ಹುಡುಕಾಟಕ್ಕೆ ಬಿದ್ದ ಅಭಿಮಾನಿಗಳು…!

ನಟರಾಗಲಿ, ಸೆಲೆಬ್ರೆಟಿಗಳಾಗಿ,ಅಭಿಮಾನಿಗಳಾಗಲಿ ಎಲ್ಲರ ಜೊತೆಗೂ ಒಂದಷ್ಟು ರಿಸರ್ವ್ ಆಗೇ ಇರ್ತಾರೆ ನಟ ಸುದೀಪ್. ಆದರೆ ನಿನ್ನೆಯಿಂದ ಸೋಷಿಯಲ್ ಮೀಡಿಯಾದಲ್ಲಿ ಪೋಟೋವೊಂದು ವೈರಲ್ ಆಗಿದ್ದು, ಸುದೀಪ್ ಹುಡುಗಿಯೊಬ್ಬರ ಜೊತೆ ಸಖತ್ ಪೋಸ್ ನೀಡಿದ್ದರು. ಇಷ್ಟಕ್ಕೂ ಸುದೀಪ್ ಜೊತೆ ಕಾಣಿಸಿಕೊಂಡಿದ್ಯಾರೋ ಅನ್ನೋ ಕುತೂಹಲಕ್ಕೆ ಬಿದ್ದಿದ್ದಾರೆ ಫ್ಯಾನ್ಸ್.

ತಮ್ಮ ಬಹುನೀರಿಕ್ಷೆಯ ವಿಕ್ರಾಂತ್ ರೋಣಾ ಚಿತ್ರದ ಡಬ್ಬಿಂಗ್ ಮುಗಿಸಿರುವ ಸುದೀಪ್ ರಿಲ್ಯಾಕ್ಸ್ ಮೂಡನಲ್ಲಿದ್ದಾರೆ. ಚಿತ್ರದ ಐಟಂ ಸಾಂಗ್ ವೊಂದಕ್ಕೆ ಶ್ರೀಲಂಕಾ ಬೆಡಗಿ ಜಾಕ್ವಲಿನ್ ಫರ್ನಾಂಡಿಸ್ ಹೆಜ್ಜೆ ಹಾಕಿದ್ದು ಹಾಡು ಕೂಡ ಸಖತ್ ಆಗಿ ಮೂಡಿ ಬಂದಿದೆ.

ಈ ಮಧ್ಯೆ ಸುದೀಪ್ ಜೊತೆ ಹುಡುಗಿಯೊಬ್ಬಳು ಕ್ಲೋಸ್ ಆಗಿ ನಿಂತಿರೋ ಪೋಟೋಗಳು ಸಖತ್ ವೈರಲ್ ಆಗಿದ್ದು, ಹುಡುಗಿ ಯಾರು ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ. ಈ ಹುಡುಗಿ ಬೇರ್ಯಾರು ಅಲ್ಲ  ಜ್ಯೂಯಿಲಿ ವೈದ್ಯ. ಈಕೆ ವಿಕ್ರಾಂತ್ ರೋಣಾ ಸಿನಿಮಾದ ಡ್ಯಾನ್ಸ್ ಕೋರಿಯೋಗ್ರಾಫರ್.

ಜ್ಯೂಯಿಲಿ ವೈದ್ಯ ` ಹಿಂದಿಯ ಬಹುಬೇಡಿಕೆಯ ಯುವ ಡ್ಯಾನ್ಸ್ ಕೊರಿಯೋಗ್ರಾಫರ್. ವಿಕ್ರಾಂತ್ ರೋಣಾದ ಜಾಕ್ವಲಿನ್ ಫರ್ನಾಂಡಿಸ್ ನಟನೆಯ ಐಟಂ ಸಾಂಗ್ ಗೆ ಡ್ಯಾನ್ಸ್ ಕೊರಿಯೋಗ್ರಾಫ್ ಮಾಡಿದ್ದು ಇದೇ ಜ್ಯೂಯಿಲಿ ವೈದ್ಯ.

ಸುದೀಪ್ ನಟನೆಯ ಈಗ ಚಿತ್ರ ಹಿಂದಿಯಲ್ಲಿ ಮಕ್ಕಿ ಎಂದು ರಿಮೇಕ್ ಆಗಿದೆ. ಈ ಸಿನಿಮಾ ನೋಡಿದಾಗಿನಿಂದ  ಜ್ಯೂಯಿಲಿ ವೈದ್ಯ ಸುದೀಪ್ ಫ್ಯಾನ್ ಆಗಿದ್ದು, ಒಮ್ಮೆ ಭೇಟಿ ಮಾಡಬೇಕೆಂಬ  ಕನಸು ಕಟ್ಟಿದ್ದರಂತೆ. ವಿಕ್ರಾಂತ ರೋಣ ಕೊರಿಯೋಗ್ರಫಿ ಯಿಂದ ಅದು ನನಸಾಗಿದೆ.

ಈ ಖುಷಿಯನ್ನು ಡ್ಯಾನ್ಸ್ ಮಾಸ್ಟರ್ ಜ್ಯೂಯಿಲಿ ವೈದ್ಯ ತಮ್ಮ ಇನ್ ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿದ್ದು, ಸುದೀಪ್ ಅವರ ಮಕ್ಕಿ ಸಿನಿಮಾ ನೋಡಿದ ಮೇಲೆ ಅವರ ಆಕ್ಟಿಂಗ್ ಫ್ಯಾನ್ ಆದೆ. ವಿಕ್ರಾಂತ್ ರೋಣ ಹಾಡು ನೋಡಲು ಕಾಯುತ್ತಿದ್ದೇನೆ. ಜಾನಿ ಮಾಸ್ಟರ್ ಗೆ ಥ್ಯಾಂಕ್ಸ್ ಎಂದಿದ್ದಾರೆ.

ಹಲವು ರಿಯಾಲಿಟಿ ಶೋಗಳಲ್ಲಿ ಗೆದ್ದು ಬಾಲಿವುಡ್ ನಲ್ಲಿ ಸದ್ದು ಮಾಡುತ್ತಿರುವ ಜ್ಯೂಯಿಲಿ ವೈದ್ಯ ಭರತನಾಟ್ಯ,ಟ್ರೆಡಿಷನಲ್, ಕ್ಲಾಸಿಕಲ್,ವೆಸ್ಟರ್ನ್ ಡ್ಯಾನ್ಸ್ ನಲ್ಲೂ ಪರಿಣಿತಿ ಹೊಂದಿದ್ದು, ಹಲವು ಸಿನಿಮಾದಲ್ಲಿ ಕೆಲಸ ಮಾಡಿದ್ದಾರೆ.  

ಒಟ್ಟಿನಲ್ಲಿ ಈ ಯುವ ಕೋರಿಯೋಗ್ರಾಫರ್ ಸುದೀಪ್ ಪೋಟೋ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿದ್ದು, ಸುದೀಪ್ ಅಭಿಮಾನಿಗಳು ಪೋಟೋ ಶೇರ್ ಮಾಡಿಕೊಂಡು ಸಂಭ್ರಮಿಸುತ್ತಿದ್ದಾರೆ.

Comments are closed.