ಪುಟ್ಟ ಕಂದನಿಗೂ ಕೊರೋನಾ….! ಆತಂಕಬೇಡ ಅಂತ ಧೈರ್ಯ ಹೇಳ್ತಿದ್ದಾರೆ ಮಹಾತಾಯಿ ಮೇಘನಾ ರಾಜ್…!!

ಮೇಘನಾ ರಾಜ್ ರಂತ ಹೆಣ್ಣುಮಗಳು ಬಲುಅಪರೂಪ. ಕಷ್ಟದ ಮೇಲೆ ಕಷ್ಟ ಬಂದರೂ ಮೇಘನಾ ನಗು ಹಾಗೂ ಧೈರ್ಯ ಕೊಂಚವೂ ಮಾಸಿಲ್ಲ. ಚಿರು ಅಗಲಿಕೆ ನಡುವೆ ಹೇಗೋ ದಿನ ದೂಡುತ್ತಿದ್ದ ಕುಟುಂಬಕ್ಕೆ ಕೊರೋನಾ ಶಾಕ್ ನೀಡಿದೆ.

ಮೇಘನಾ ರಾಜ್, ಸುಂದರ ರಾಜ್,ಪ್ರಮೀಳಾ ಜೋಷಾಯ್ ಹಾಗೂ ಮೇಘನಾ ಪುತ್ರ ಜ್ಯೂನಿಯರ್ ಚಿರುಗೆ ಕೊರೋನಾ ಪಾಸಿಟಿವ್ ಬಂದಿದೆ. ಸುಂದರ ರಾಜ್ ಹಾಗೂ ಪ್ರಮೀಳಾ ಜೋಷಾಯ್ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮೇಘನಾ ಮಗುವಿನ ಜೊತೆ ಮನೆಯಲ್ಲೇ ಕ್ವಾರಂಟೈನ್ ಆಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ಒಂದಾದ ಮೇಲೆ ಒಂದರಂತೆ ಬರ್ತಿರೋ ಈ ಸಂಕಷ್ಟಗಳಿಂದ ಮೇಘನಾರಾಜ್ ಕಂಗಾಲಾಗುವ ಸ್ಥಿತಿ ಇದೆ. ಆದರೇ ಗಟ್ಟಿಗಿತ್ತಿ ಮೇಘನಾ ರಾಜ್ ಮಾತ್ರ ಈ ಕಷ್ಟಗಳಿಂದ ಮತ್ತಷ್ಟು ಸ್ಟ್ರಾಂಗ್ ಆಗಿದ್ದಾರೆ. ಅಷ್ಟೇ ಅಲ್ಲ ಎಲ್ಲರೂ ಧೈರ್ಯವಾಗಿರಿ ಎಂದು ಅಭಿಮಾನಿಗಳಿಗೆ ಧೈರ್ಯ ತುಂಬಿದ್ದಾರೆ.

ತಮಗೆ ಹಾಗೂ ಮಗುವಿಗೆ ಕೊರೋನಾ ಬಂದಿರೋ ಸಂಗತಿಯನ್ನು ಮುಚ್ಚಿಡದೇ ಮುಕ್ತವಾಗಿ ಅಭಿಮಾನಿಗಳ ಜೊತೆ ಹಂಚಿಕೊಂಡಿರೋ ಮೇಘನಾ, ಟ್ವೀಟ್ ಮಾಡಿದ್ದು ನಮ್ಮ ಮನೆಯ ಎಲ್ಲ ಸದಸ್ಯರಿಗೆ ಕೊರೋನಾ ಟೆಸ್ಟ್ ಪಾಸಿಟಿವ್ ಬಂದಿದೆ ಎಂದಿದ್ದಾರೆ.

ಆದರೆ ಚಿರು ಮತ್ತು ನನ್ನ ಅಭಿಮಾನಿಗಳಲ್ಲಿ ಮನವಿ ಮಾಡುತ್ತೇನೆ. ಯಾರು ಹೆದರುವ ಅಗತ್ಯವಿಲ್ಲ. ಜ್ಯೂನಿಯರ್ ಚಿರು ಆರೋಗ್ಯವಾಗಿ ದ್ದು, ಪ್ರತಿಕ್ಷಣ ನಾನು ಬ್ಯುಸಿಯಾಗಿರುವಂತೆ ನೋಡಿಕೊಳ್ಳುತ್ತಿದ್ದಾನೆ. ನಿಮ್ಮೆಲ್ಲರ ಹಾರೈಕೆಯಿಂದ ನಾನು ಈ ಯುದ್ಧವನ್ನು ಗೆದ್ದು ಬರುತ್ತೇನೆ ಎಂಬ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.

ಕೆಲ ದಿನಗಳಿಂದ ನಮ್ಮ ಸಂಪರ್ಕಕ್ಕೆ ಬಂದವರು ಕೊರೋನಾ ಟೆಸ್ಟ್ ಗೆ ಒಳಗಾಗಿ ಆರೋಗ್ಯ ಕಾಪಾಡಿಕೊಳ್ಳಿ ಎಂದು ಮೇಘನಾ ಮನವಿ‌ಮಾಡಿದ್ದಾರೆ.ಕಳೆದ ಜೂನ್ 7 ರಂದು ಚಿರು ಹೃದಯಾಘಾತದಿಂದ ಸಾವನ್ನಪ್ಪಿದ್ದು, ಬಳಿಕ ಅಕ್ಟೋಬರ್ 22 ರಂದು ಮೇಘನಾ ಗಂಡುಮಗುವಿಗೆ ಜನ್ಮ ನೀಡಿದ್ದರು.

ಕೆಲದಿನಗಳ ಹಿಂದೆ ನಟ ಧ್ರುವ ಹಾಗೂ ಪ್ರೇರಣಾ ದಂಪತಿಗಳು ಕೂಡ ಕೊರೋನಾ ಗೆ ತುತ್ತಾಗಿ ಚೇತರಿಸಿಕೊಂಡಿದ್ದರು.

Comments are closed.