ಮದುವೆಯಾಗಿ ವರ್ಷಕ್ಕೆ ಮುರಿತಾ ಮದುವೆ…?! ಬಿಗ್ ಬಾಸ್ ಮನೆಯಲ್ಲಿರೋ ನಿಧಿ ಬಗ್ಗೆ ಹೊರಗಡೆ ಬಿಸಿ ಬಿಸಿ ಚರ್ಚೆ…!!

ಬಿಗ್ ಬಾಸ್ ಕನ್ನಡ ಸೀಸನ್-8 ರಲ್ಲಿ ಅದಾಗಲೇ ಹಲವು ಸುತ್ತಿನ ಎಲಿಮಿನೇಶನ್ ಮುಗಿದಿದ್ದು, ಆಟ ರಂಗೇರುತ್ತಿದೆ. ಹೀಗಿರುವಾಗಲೇ ಬಿಗ್ ಬಾಸ್ ಮನೆಯೊಳಗೆ ಟಫ್ ಕಾಂಪಿಟೇಶನ್ ಕೊಡ್ತಿರೋ ನಿಧಿಸುಬ್ಬಯ್ಯ ಬಗ್ಗೆ ಮನೆಯ ಹೊರಗೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಜೋರಾಗಿದೆ. ಇಷ್ಟಕ್ಕೂ ಈ ಚರ್ಚೆಯ ವಿಷ್ಯ ಏನು ಗೊತ್ತಾ ಈ ಸ್ಟೋರಿ ಓದಿ.

ನಿಧಿ ಸುಬ್ಬಯ್ಯ ಬಿಗ್ ಬಾಸ್ ಮನೆಯೊಳಗೆ ಇದ್ದರೂ ಸ್ನೇಹಿತರ ಮೂಲಕ ತಮ್ಮ ಸೋಷಿಯಲ್ ಮೀಡಿಯಾದಲ್ಲೂ ಓಟಿಂಗ್ ಕ್ಯಾಂಪೇನ್ ಮುಂದುವರೆಸಿದ್ದಾರೆ. ಆದರೆ ಈಗ ನಿಧಿ ಸುಬ್ಬಯ್ಯ್ ಸೋಷಿಯಲ್ ಮೀಡಿಯಾ ಅಕೌಂಟ್ ಗಳೇ ಅವರ ಬದುಕಿನ ಕತೆ ಹೇಳ್ತಿದ್ದು, ಅಭಿಮಾನಿಗಳು ಎಲ್ಲೋ ಏನೋ ಮಿಸ್ ಹೊಡಿತಾ ಇದ್ಯಲ್ಲ ಅಂತಿದ್ದಾರೆ.

ಹೌದು ಅಭಿಮಾನಿ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಬಂದು ಪಂಚರಂಗಿ ಸಿನಿಮಾದಲ್ಲಿ ಮೋಡಿ ಮಾಡುವ ಅಭಿನಯ ನೀಡಿ ಪ್ರಶಸ್ತಿ ಗೆದ್ದಿದ್ದ ನಿಧಿ 2017 ರಲ್ಲೇ ಪ್ರೀತಿಸಿದ ಉದ್ಯಮಿ ಜೊತೆ  ಸಪ್ತಪದಿ ತುಳಿದಿದ್ದರು. ಆದರೆ ಈಗ   ಈ ಮದುವೆ ಸಂಬಂಧ ಉಳಿದಿದ್ಯಾ ಅನ್ನೋ ಪ್ರಶ್ನೆ ಅಭಿಮಾನಿಗಳನ್ನು ಕಾಡೋಕೆ ಶುರುವಾಗಿದೆ.

ಇದಕ್ಕೆ ಕಾರಣ ನಿಧಿ ಸುಬ್ಬಯ್ಯ,  ತಮ್ಮ ಪತಿ ಲವೇಶ್ ಜೊತೆಗಿನ ಎಲ್ಲ ಪೋಟೋಗಳನ್ನು ತಮ್ಮ ಫೇಸ್ ಬುಕ್ ಸೇರಿದಂತೆ ಸೋಷಿಯಲ್ ಮೀಡಿಯಾ ಅಕೌಂಟ್ ನಿಂದ ತೆಗೆದಿದ್ದಾರೆ. ಹೀಗಾಗಿ ನಿಧಿ ಮದುವೆಯಾಗಿ ಒಂದೇ ವರ್ಷಕ್ಕೆ ಡಿವೋರ್ಸ್ ಪಡ್ಕೊಂಡು ತವರಿಗೆ ವಾಪಸ್ಸಾಗಿದ್ದಾರೆ ಎನ್ನಲಾಗ್ತಿದೆ. ಇದಕ್ಕೆ ಪೂರಕ ಎಂಬಂತೆ ನಿಧಿ ಸುಬ್ಬಯ್ಯ, ಆಟದಲ್ಲಿ ನನಗೂ ಲವರ್ ಬೇಕು ಎಂದು ಹೇಳಿದ್ದು, ಮದುವೆ ಮುರಿದುಕೊಂಡಿದ್ದಾರೆ ಅಂತ ಪ್ರೇಕ್ಷಕರು ಗೆಸ್ ಮಾಡ್ತಿದ್ದಾರೆ.

ಮೂಲಗಳ ಮಾಹಿತಿ ಪ್ರಕಾರ 2017 ರಲ್ಲಿ  ಫೆಬ್ರವರಿ 11 ರಂದು ವಿರಾಜಪೇಟೆಯ ರೆಸಾರ್ಟ್ ನಲ್ಲಿ ಅದ್ದೂರಿಯಾಗಿ ಮದುವೆಯಾಗಿದ್ದ ನಿಧಿ, ಬಳಿಕ ಪತಿಯೊಂದಿಗೆ ವಿದೇಶಕ್ಕೆ ತೆರಳಿದ್ದರಂತೆ. ಆದರೆ ಕೆಲಕಾಲ ಅಲ್ಲೇ ವಾಸವಾಗಿದ್ದ ನಿಧಿ ಸ್ಯಾಂಡಲ್ ವುಡ್ ನಿಂದಲೂ ದೂರ ಉಳಿದಿದ್ದರು. ಆದರೆ ಬಳಿಕ ಹೊಂದಾಣಿಕೆ ಸಮಸ್ಯೆಯಿಂದ ನಿಧಿ ಪತಿ ತೊರೆದಿದ್ದಾರೆ ಎನ್ನಲಾಗಿದೆ. ಒಟ್ಟಿನಲ್ಲಿ ನಿಧಿ ಸುಬ್ಬಯ್ಯ ಮದುವೆ ಸೋಷಿಯಲ್ ಮೀಡಿಯಾದ ಸಧ್ಯದ ಹಾಟ್ ಟಾಪಿಕ್ ಆಗಿರೋದಂತು ಸತ್ಯ.

Comments are closed.