ಕೋಟ : ಅಂದರ್‌ – ಬಾಹರ್‌ : ಏಳು ಮಂದಿ ಅರೆಸ್ಟ್‌

Udupi News : ಕೋಟ : ಅಂದರ್‌ – ಬಾಹರ್‌ ಆಡುತ್ತಿದ್ದ ಏಳು ಮಂದಿಯನ್ನು ಪೊಲೀಸರು ಬಂಧಿಸಿರುವ ಘಟನೆ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಬಿಲ್ಲಾಡಿ ಗ್ರಾಮದ ಮೆತ್ತಗೋಳಿ ಎಂಬಲ್ಲಿ ನಡೆದಿದೆ.

ಪೊಲೀಸ್‌ ಇಲಾಖೆಗೆ ದೊರೆತ ಖಚಿತ ಮಾಹಿತಿಯ ಮೇಲೆ ಕೋಟ ಠಾಣೆಯ ಉಪನಿರೀಕ್ಷಕರಾದ ರಾಘವೇಂದ್ರ ಸಿ ಅವರು ದಾಳಿ ನಡೆಸಿದ್ದಾರೆ.

ಬ್ರಹ್ಮಾವರ ತಾಲೂಕು ಬಿಲ್ಲಾಡಿ ಗ್ರಾಮದ ಮೆತ್ತಗೊಳಿ ಎಂಬಲ್ಲಿ ನಿಲೇಶ್ ಎಂಬುವವರ ಕೋಳಿ ಶೆಡ್ ಬಳಿ ಅಂದರ್-ಬಾಹರ್ ಇಸ್ಪೀಟ್ ಆಟ ಆಡುತ್ತಿದ್ದ ಏಳು ಜನರನ್ನು ಕೋಟ ಪೊಲೀಸರು ಬಂಧಿಸಿದ್ದಾರೆ.

Also Read : ಬೃಹತ್‌ ವೇಶ್ಯಾವಾಟಿಕೆ ಜಾಲ ಪತ್ತೆ: ಶೌಚಾಲಯದಲ್ಲಿ ರಹಸ್ಯ ಸುರಂಗ !

ದಾಳಿ ಸಮಯದಲ್ಲಿ ಇಸ್ಪೀಟ್ ಆಡುತ್ತಿದ್ದ ಕೆಲವು ಜನರು ಓಡಿ ಹೋಗಿದ್ದು, ಪೊಲೀಸರು ಜಯಕರ, ಚಕ್ರಪಾಣಿ, ನಿಲೇಶ್, ಜಗದೀಶ, ಗೋಪಾಲ, ಸದಾಶಿವ ಮತ್ತು ಕಾಳಪ್ಪ ಎಂಬುವವರನ್ನು ವಶಕ್ಕೆ ಪಡೆದಿದ್ದಾರೆ.

ಅಂದರ್‌ ಬಾಹರ್‌ ಆಟಕ್ಕೆ ಬಳಸಿದ್ದ 9880 ರೂಪಾಯಿ ಜೊತೆಗೆ 8 ಮೊಬೈಲ್‌, 1 ಕಾರು, 3 ಸ್ಕೂಟರ್‌ 1 ರೌಂಡ್‌ ಟೇಬಲ್‌, 8 ಪ್ಲಾಸ್ಟಿಕ್‌ ಚೇರ್‌ ಜೊತೆಗೆ ಇಸ್ಪೀಟ್‌ ಕಾರ್ಡ್‌ ಗಳನ್ನು ವಶಕ್ಕೆ ಪಡೆಯಲಾಗಿದೆ.

ಈ ಕುರಿತು ಸೆಕ್ಷನ್‌ 28/2025, ಕಲಂ 87 ಕೆಪಿ ಆಕ್ಟ್‌ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿರುವ ಕೋಟ ಠಾಣೆಯ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

Also Read : ಉಡುಪಿ, ದಕ 21 ಸಾವಿರ ರೇಷನ್‌ ಕಾರ್ಡ್‌ ರದ್ದು : ನಿಮ್ಮ ಹೆಸರು ಇದೆಯಾ ಚೆಕ್‌ ಮಾಡಿ

Udupi News : Kota Police station Andar-Bahar Gambling Arrest 7 persons in Kannada news

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories