ಕರ್ನಾಟಕ ಬಜೆಟ್ 2026: ಅನ್ನಭಾಗ್ಯ’ಕ್ಕೆ ಹೊಸ ರೂಪ: ಇಂದಿರಾ ಆಹಾರ ಕಿಟ್ ‘ಇಂದಿರಾ ಆಹಾರ ಕಿಟ್’ ಮತ್ತು 50 ಹೊಸ ಹಾಸ್ಟೆಲ್‌ಗಳ ಘೋಷಣೆ
ಹಿಂದುಳಿದ ವರ್ಗಗಳ ಶೈಕ್ಷಣಿಕ ಪ್ರಗತಿ, ಕಾರ್ಮಿಕರ ಕ್ಷೇಮಾಭಿವೃದ್ಧಿ ಮತ್ತು ಬಡವರ ಹಸಿವು ನೀಗಿಸಲು 'ಇಂದಿರಾ ಆಹಾರ ಕಿಟ್' ಎಂಬ ಹೊಸ ಯೋಜನೆಯನ್ನು ಘೋಷಿಸುವ ಮೂಲಕ ಸಿಎಂ ಗಮನ ಸೆಳೆದಿದ್ದಾರೆ.
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ 2026-27ನೇ ಸಾಲಿನ ಬಜೆಟ್‌ನಲ್ಲಿ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಆರ್ಥಿಕ ಭದ್ರತೆ ನೀಡುವ ಗುರಿ ಹೊಂದಲಾಗಿದೆ. ಹಿಂದುಳಿದ ವರ್ಗಗಳ ಶೈಕ್ಷಣಿಕ ಪ್ರಗತಿ, ಕಾರ್ಮಿಕರ ಕ್ಷೇಮಾಭಿವೃದ್ಧಿ ಮತ್ತು ಬಡವರ ಹಸಿವು ನೀಗಿಸಲು ‘ಇಂದಿರಾ ಆಹಾರ ಕಿಟ್’ ಎಂಬ ಹೊಸ ಯೋಜನೆಯನ್ನು ಘೋಷಿಸುವ ಮೂಲಕ ಸಿಎಂ ಗಮನ ಸೆಳೆದಿದ್ದಾರೆ.
ಹಿಂದುಳಿದ ವರ್ಗಗಳ ಕಲ್ಯಾಣ : ಶಿಕ್ಷಣ ಮತ್ತು ಉದ್ಯೋಗಕ್ಕೆ ಒತ್ತು
ಹೊಸ ವಸತಿ ನಿಲಯಗಳು : ಬೆಂಗಳೂರು, ಮೈಸೂರು, ಮಂಗಳೂರು ಸೇರಿದಂತೆ ಪ್ರಮುಖ ಜಿಲ್ಲೆಗಳಲ್ಲಿ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗಾಗಿ 50 ಹೊಸ ಮೆಟ್ರಿಕ್ ನಂತರದ ವಸತಿ ನಿಲಯಗಳನ್ನು ಪ್ರಾರಂಭಿಸಲಾಗುವುದು.
- ಸ್ವಂತ ಕಟ್ಟಡ : ಬಾಡಿಗೆ ಕಟ್ಟಡದಲ್ಲಿರುವ 50 ಹಾಸ್ಟೆಲ್‌ಗಳಿಗೆ ತಲಾ 5 ಕೋಟಿ ರೂ. ವೆಚ್ಚದಲ್ಲಿ ಹೊಸ ಕಟ್ಟಡ ನಿರ್ಮಿಸಲಾಗುವುದು.
- ತಾಂತ್ರಿಕ ತರಬೇತಿ : 250 ಇಂಜಿನಿಯರಿಂಗ್ ಪದವೀಧರರಿಗೆ NIT/IIT/IIM ಗಳಲ್ಲಿ AI (ಕೃತಕ ಬುದ್ಧಿಮತ್ತೆ) ತರಬೇತಿ ಪಡೆಯಲು ತಲಾ 2 ಲಕ್ಷ ರೂ. ಸಾಲ ನೀಡಲಾಗುವುದು.
- ಸಮುದಾಯಗಳ ಅಭಿವೃದ್ಧಿ: ಕುಂಬಾರ, ತಿಗಳ, ಗಾಣಿಗ, ಕೊಡವ, ಉಪ್ಪಾರ, ಈಡಿಗ ಹಾಗೂ ಕಾಡುಗೊಲ್ಲ ಸಮುದಾಯಗಳ ಏಳಿಗೆಗಾಗಿ ಪ್ರತ್ಯೇಕ ನಿಗಮಗಳ ಮೂಲಕ ಯೋಜನೆಗಳ ಜಾರಿ.
- ಅಲ್ಪಸಂಖ್ಯಾತರ ಅಭಿವೃದ್ಧಿ: ಸಂತ ಶಿಶುನಾಳ ಶರೀಫರ ಹೆಸರಲ್ಲಿ ಶಾಲೆ
- ಶರೀಫರ ಹೆಸರಿನ ಶಾಲೆ: ಅಲ್ಪಸಂಖ್ಯಾತರಿಗಾಗಿ ಸಂತ ಶಿಶುನಾಳ ಶರೀಫರ ಹೆಸರಿನಲ್ಲಿ 25 ಹೊಸ ವಸತಿ ಶಾಲೆಗಳನ್ನು ಸಿಬಿಎಸ್‌ಇ (CBSE) ಮಾದರಿಯಲ್ಲಿ ಆರಂಭಿಸಲಾಗುವುದು.
- ಡಿಜಿಟಲ್ ಕ್ರಾಂತಿ: 5,000 ಪ್ರತಿಭಾವಂತ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ತಲಾ 50,000 ರೂ. ಮೌಲ್ಯದ ಲ್ಯಾಪ್‌ಟಾಪ್ ವಿತರಣೆ.
- ಮಹಿಳಾ ಸಬಲೀಕರಣ: ಬೆಂಗಳೂರಿನಲ್ಲಿ ದುಡಿಯುವ ಮಹಿಳೆಯರಿಗಾಗಿ 4 ಹೊಸ ವಸತಿ ನಿಲಯಗಳ ಸ್ಥಾಪನೆ.
ಅನ್ನಭಾಗ್ಯ’ಕ್ಕೆ ಹೊಸ ರೂಪ: ಇಂದಿರಾ ಆಹಾರ ಕಿಟ್
ಬಡವರ ಹಸಿವು ನೀಗಿಸಲು ಸರ್ಕಾರ ಹೊಸ ಹೆಜ್ಜೆ ಇಟ್ಟಿದೆ. ಅನ್ನಭಾಗ್ಯ ಯೋಜನೆಯಡಿ ನೀಡಲಾಗುವ ಹೆಚ್ಚುವರಿ 5 ಕೆಜಿ ಅಕ್ಕಿಯ ಬದಲಾಗಿ, ಇನ್ಮುಂದೆ ತೊಗರಿಬೇಳೆ, ಸಕ್ಕರೆ, ಉಪ್ಪು ಮತ್ತು ಅಡುಗೆ ಎಣ್ಣೆ ಒಳಗೊಂಡ ‘ಇಂದಿರಾ ಆಹಾರ ಕಿಟ್’ ನೀಡಲು ನಿರ್ಧರಿಸಲಾಗಿದೆ. ಇದಕ್ಕಾಗಿ 6,200 ಕೋಟಿ ರೂ. ಮೀಸಲಿಡಲಾಗಿದೆ.
ಇದನ್ನೂ ಓದಿ: ಕರ್ನಾಟಕ ಬಜೆಟ್ 2026: ನಿರುದ್ಯೋಗಿಗಳಿಗೆ ಸಿಕ್ಕಿತು ಆನೆಬಲ : ನಗರ ಬೀದಿ ಬದಿ ವ್ಯಾಪಾರಿಗಳಿಗೆ ₹7 ಕೋಟಿ ಮೀಸಲು
ವಸತಿ ಯೋಜನೆ: ‘ಕೆ.ಹೆಚ್.ಬಿ ಸೈಯದ್ ಕಿರಿಡಾ ಗ್ರಾಮ’
- ಅಂತರಾಷ್ಟ್ರೀಯ ಕ್ರೀಡಾಂಗಣ: ಬೆಂಗಳೂರಿನ ಆನೇಕಲ್ ತಾಲ್ಲೂಕಿನಲ್ಲಿ 80,000 ಆಸನ ಸಾಮರ್ಥ್ಯದ ಕ್ರಿಕೆಟ್ ಕ್ರೀಡಾಂಗಣ ಹಾಗೂ ಅಂತರಾಷ್ಟ್ರೀಯ ಕ್ರೀಡಾಕೂಟಗಳಿಗಾಗಿ ಅತ್ಯಾಧುನಿಕ ‘ಕಿರಿಡಾ ಗ್ರಾಮ’ ನಿರ್ಮಾಣ ಮಾಡಲಾಗುವುದು.
- ಮನೆಗಳ ಹಂಚಿಕೆ: ಈ ವರ್ಷ 3 ಲಕ್ಷ ಮನೆಗಳನ್ನು ಪೂರ್ಣಗೊಳಿಸುವ ಗುರಿ ಹೊಂದಲಾಗಿದ್ದು, ಸಾಮಾನ್ಯ ವರ್ಗದ ಸಹಾಯಧನವನ್ನು 2 ಲಕ್ಷ ರೂ.ಗೆ ಹಾಗೂ ಎಸ್‌ಸಿ/ಎಸ್‌ಟಿ ಸಹಾಯಧನವನ್ನು 3 ಲಕ್ಷ ರೂ.ಗೆ ಏರಿಸಲಾಗಿದೆ.
- ಕಾರ್ಮಿಕರ ಕಲ್ಯಾಣ: ವೇತನ ಸಹಿತ ರಜೆ ಮತ್ತು ಹೈಟೆಕ್ ಅಕಾಡೆಮಿ
- ಋತುಚಕ್ರದ ರಜೆ: ಸರ್ಕಾರಿ ಮತ್ತು ಖಾಸಗಿ ವಲಯದ ಮಹಿಳಾ ಕಾರ್ಮಿಕರಿಗೆ ಋತುಚಕ್ರದ ಸಮಯದಲ್ಲಿ ಒಂದು ದಿನದ ವೇತನ ಸಹಿತ ರಜೆ ನೀಡಲು ಅವಕಾಶ ಕಲ್ಪಿಸಲಾಗಿದೆ.
- ಕೌಶಲ್ಯ ತರಬೇತಿ: ಹುಬ್ಬಳ್ಳಿ-ಧಾರವಾಡದಲ್ಲಿ 200 ಕೋಟಿ ರೂ. ವೆಚ್ಚದಲ್ಲಿ ಅತ್ಯಾಧುನಿಕ ಕೌಶಲ್ಯ ತರಬೇತಿ ಅಕಾಡೆಮಿ ಸ್ಥಾಪನೆ.
- ಶಾರ್ಮಿಕ್ ವಸತಿ ಶಾಲೆ: ಕಾರ್ಮಿಕರ ಮಕ್ಕಳ ಶಿಕ್ಷಣಕ್ಕಾಗಿ ಹೊಸದಾಗಿ 62 ಶ್ರಮಿಕ ವಸತಿ ಶಾಲೆಗಳನ್ನು ಬಾಡಿಗೆ ಕಟ್ಟಡದಲ್ಲಿ ಆರಂಭಿಸಲಾಗುವುದು.
- ESI ಆಸ್ಪತ್ರೆಗಳ ಉನ್ನತೀಕರಣ: ರಾಯಚೂರು, ವಿಜಯಪುರ, ಬಾಗಲಕೋಟೆ ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳ ಇಎಸ್‌ಐ ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸಲಾಗುವುದು.



