ಆರ್ಬಿಐನಲ್ಲಿ ಕೊಳೆಯುತ್ತಿದೆ ವಾರಸುದಾರರಿಲ್ಲದ ಹಣ..!
ಭಾರತದ ವಿವಿಧ ಬ್ಯಾಂಕುಗಳಲ್ಲಿ ವಾರಸುದಾರರೇ ಇಲ್ಲದ ಠೇವಣಿಗಳು, ಷೇರುಗಳು, ವಿಮೆಗಳು ಹಾಗೂ ನಿವೃತ್ತ ನಿಧಿಗಳ ಒಟ್ಟೂ ಮೊತ್ತ 2.2 ಲಕ್ಷ ಕೋಟಿ ರೂಪಾಯಿಗಳಾಗಿವೆ ಎಂದು ಹಣಕಾಸು ನಿಯತಕಾಲಿಕೆ ವರದಿ ಮಾಡಿದೆ. ಕಳೆದ ಐದು ವರ್ಷಗಳಲ್ಲಿಯೇ ಅಂಕಿ – ಅಂಶಗಳು ಅತ್ಯಂತ ತೀವ್ರವಾಗಿ ಬೆಳೆದಿದೆ ಎಂದು ನಿಯತಕಾಲಿಕೆಯಲ್ಲಿ ಮಾಹಿತಿ ನೀಡಲಾಗಿದೆ.
ಭಾರತೀಯ ರಿಸರ್ವ್ ಬ್ಯಾಂಕ್ ನ ಠೇವಣಿದಾರರ ಶಿಕ್ಷಣ ಮತ್ತು ಜಾಗೃತಿ ನಿಧಿಯಲ್ಲಿ ಸುಮಾರು 97,545 ಕೋಟಿ ರೂ.ಗಳು ಸಂಗ್ರಹವಾಗಿದ್ದು, ವಾರ್ಷಿಕವಾಗಿ ಶೇ. 24ರ ದರದಲ್ಲಿ ಇದು ಬೆಳೆಯುತ್ತಿದೆ ಎನ್ನಲಾಗಿದೆ. ಡಾರ್ಮಂಟ್ ಖಾತೆಗಳನ್ನು ಸ್ಥಿರವಾಗಿ ಈ ನಿಧಿಗೆ ವರ್ಗಾಯಿಸಲಾಗುತ್ತಿದೆ. ಅಲ್ಲಿ ಹಣ ಉಳಿದರೂ ವಾರಸುಧಾರರನ್ನು ಪತ್ತೆ ಹಚ್ಚುವುದು ಕಷ್ಟವಾಗಿಬಿಡುತ್ತದೆ.
ಕಾಲ ಕಳೆದಂತೆ ಮಾಲೀಕರು ಮತ್ತು ಅವರ ಆಸ್ತಿಯ ನಡುವಿನ ಸಂಪರ್ಕ ಕಡಿದು ಹೋಗಿ ಅಂತಿಮವಾಗಿ ಚಾಲನೆಯಿಲ್ಲದ ಆಸ್ತಿಯಾಗಿಬಿಡುತ್ತವೆ. ಬಹುತೇಕ ಈ ಹಣಗಳೆಲ್ಲವೂ ಹಿಂದಿನ ತಲೆಮಾರಿನಿಂದ ಬಂದಿದ್ದು, ಆಗೆಲ್ಲ ಭೌತಿಕ ದಾಖಲೆಯೇ ಬ್ಯಾಂಕ್ ಖಾತೆತೆರೆಯಲು ಬಳಕೆಯಾಗುತ್ತಿದ್ದರಿಂದ ಇವುಗಳ ದಾಖಲೆ ಲಭ್ಯವಿಲ್ಲ. 10 ವರ್ಷಗಳಿಂದ ನಿಷ್ಕ್ರಿಯಗೊಂಡ ಬ್ಯಾಂಕ್ ಖಾತೆಯಲ್ಲಿರುವ ಹಣವನ್ನು ಆರ್ಬಿಐ ತನ್ನ ಸುಪರ್ದಿಗೆ ಪಡೆದುಕೊಳ್ಳುತ್ತದೆ. ಹಾಗೆಂದ ಮಾತ್ರಕ್ಕೆ ಈ ಹಣ ವಾರಸುದಾರ ಕುಟುಂಬಕ್ಕೆ ಸಿಗುವುದಿಲ್ಲ ಎಂದೇನಿಲ್ಲ. ಸೂಕ್ತ ದಾಖಲೆಗಳೊಂದಿಗೆ ಆರ್ಬಿಐನಿಂದ ಈ ಹಣವನ್ನು ಯಾವ ಸಮಯದಲ್ಲಿಯೂ ವಾಪಸ್ ಪಡೆಯುವ ಅಧಿಕಾರ ಆ ಕುಟುಂಬಕ್ಕೆ ಇರುತ್ತದೆ.
ಇದನ್ನೂ ಓದಿ: LPG ದರ ಏರಿಕೆ ಭೀತಿ ಬೇಡ ! ಇರಾನ್-ಅಮೆರಿಕ ಮಾತುಕತೆ ವಿಫಲವಾದ್ರೂ ಮೋದಿ ‘ಮಾಸ್ಟರ್‌ಸ್ಟ್ರೋಕ್ ‘
ವಾರಸುದಾರ ಕುಟುಂಬಗಳು ಹಣಕ್ಕಾಗಿ ಪ್ರಸ್ತಾವನೆ ಸಲ್ಲಿಸುವವರೆಗೂ 3 ಪ್ರತಿಶತ ಬಡ್ಡಿದರದೊಂದಿಗೆ ಈ ಹಣವನ್ನು ಕ್ರೋಢೀಕರಿಸಿ ಇಡಲಾಗುತ್ತದೆ. ಈ ಠೇವಣಿ ಹಣವನ್ನು ವಿವಿಧ ಜಾಗೃತಿ ಕಾರ್ಯಕ್ರಮಗಳಿಗೆ ಬಳಕೆ ಮಅಡಲಾಗುತ್ತದೆ. ಷೇರು ಮಾರುಕಟ್ಟೆಗಳಲ್ಲಿಯೂ ಇದೇ ಮಾದರಿಯ ಕ್ರಮ ಅನ್ವಯಿಸಲಾಗುತ್ತದೆ. ಅದೇ ರೀತಿ 20,063 ಕೋಟಿ ರೂ.ಗಳಷ್ಟು ವಿಮೆಗಳು ಮೆಚ್ಯೂರಿಟಿಗೊಂಡರೂ ಅದನ್ನು ಕ್ಲೇಮ್ ಮಾಡಲಾಗಿಲ್ಲ. ಮರಣದ ಲಾಭಗಳು ಮತ್ತು ಶರಾಣತಗಿ ಪಾಲಿಸಿಗಳಲ್ಲಿ ಕ್ಲೇಮ್ಗಳಿಲ್ಲದ ಹಣ Rಕ್ಲೇಮ್ ಮಾಡದೆ ಇದ್ದ ಹಣ 10 ವರ್ಷಗಳ ಕಾಲ ವಿಮಾದಾರರ ಹೆಸರಿನಲ್ಲಿರುತ್ತದೆ. ನಂತರ ಸರ್ಕಾರಿ ನಿಧಿಗೆ ವರ್ಗಾವಣೆಯಾಗುತ್ತದೆ.



