ಐಪಿಎಲ್ನಿಂದ ಕೊಹ್ಲಿ ಔಟ್..!? ಆರ್ಸಿಬಿಗೆ ತಲೆನೋವು ತಂದ ಕೊಹ್ಲಿ ಫಿಟ್‌ನೆಸ್ ಸಮಸ್ಯೆ
ಪ್ರಸಕ್ತ ಐಪಿಎಲ್ ಟೂರ್ನಿಯಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಇದೀಗ ಹೊಸ ತಲೆನೋವು ಎದುರಾಗಿದೆ. ಆರ್ಸಿಬಿಯ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅವರ ಫಿಟ್‌ನೆಸ್ ಚಿಂತೆ ಆರಂಭವಾಗಿದೆ. ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಬಿಗ್ ಫೈಟ್‌ಗೂ ಮುನ್ನ ಕೊಹ್ಲಿ ಅವರ ಎಡಗಾಲಿನ ಗಾಯ ತಂಡಲ್ಲೆ ಹೊಸ ತಲೆನೋವು ತಂದಿದೆ.
ಇತ್ತೀಚಿನ ಅಭ್ಯಾಸ ಅವಧಿಯಲ್ಲಿ ವಿರಾಟ್ ಕೊಹ್ಲಿ ಕಾಲಿಗೆ ಬ್ಯಾಂಡೇಜ್ ಹಾಕಿಕೊಂಡು ಕಾಣಿಸಿಕೊಳ್ಳುತ್ತಿದೆ. ಮೂಲಗಳ ಪ್ರಕಾರ, ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲೂ ಅವರು ಸಂಪೂರ್ಣ ಫಿಟ್ ಆಗಿರಲಿಲ್ಲ. ಆ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದರೂ, ಓಡುವಾಗ ಮತ್ತು ಬ್ಯಾಟಿಂಗ್ ಮಾಡುವಾಗ ಎಂದಿನ ಚುರುಕುತನ ಕಂಡುಬಂದಿರಲಿಲ್ಲ. ಮುನ್ನೆಚ್ಚರಿಕಾ ಕ್ರಮವಾಗಿ ಎರಡನೇ ಇನ್ನಿಂಗ್ಸ್‌ನಲ್ಲಿ ಅವರಿಗೆ ವಿಶ್ರಾಂತಿ ನೀಡಲಾಗಿತ್ತು.
ಕೊಹ್ಲಿ ಈ ಸೀಸನ್‌ನಲ್ಲಿ ಅದ್ಭುತ ಫಾರ್ಮ್‌ನಲ್ಲಿದ್ದು, 4 ಪಂದ್ಯಗಳಿಂದ 179 ರನ್ ಗಳಿಸಿದ್ದಾರೆ. ಆದರೆ, ಅರೆಬರೆ ಫಿಟ್‌ನೆಸ್‌ನೊಂದಿಗೆ ಆಡುವುದು ದೀರ್ಘಾವಧಿಯಲ್ಲಿ ಪೆಟ್ಟು ನೀಡುವ ಸಾಧ್ಯತೆಯಿದೆ. ಹೀಗಾಗಿ, ಲಕ್ನೋ ವಿರುದ್ಧದ ಪಂದ್ಯದಲ್ಲಿ ಅವರಿಗೆ ವಿಶ್ರಾಂತಿ ನೀಡಿ, ಸಂಪೂರ್ಣ ಗುಣಮುಖರಾಗಲು ಅವಕಾಶ ನೀಡುವ ಬಗ್ಗೆ ಮ್ಯಾನೇಜ್‌ಮೆಂಟ್ ಚಿಂತಿಸುತ್ತಿದೆ.
ಇದನ್ನೂ ಓದಿ: ಮುಂಬೈ ಇಂಡಿಯನ್ಸ್ ವಿರುದ್ಧ ಆರ್ಸಿಬಿಗೆ ದಿಗ್ವಿಜಯ..!
ಒಂದು ಕಾಲದಲ್ಲಿ ಕೊಹ್ಲಿ ಮೇಲೆಯೇ ಹೆಚ್ಚು ಅವಲಂಬಿತವಾಗಿದ್ದ ಬೆಂಗಳೂರು ತಂಡ, ಈ ಬಾರಿ ಸಾಮೂಹಿಕ ಪ್ರದರ್ಶನ ನೀಡುತ್ತಿದೆ. ಮುಂಬೈ ವಿರುದ್ಧ ಕೊಹ್ಲಿ ನಿಧಾನಗತಿಯ ಬ್ಯಾಟಿಂಗ್ ನಡೆಸಿದರೂ, ಇತರ ಬ್ಯಾಟರ್‌ಗಳ ಅಬ್ಬರದಿಂದ ತಂಡ 240 ರನ್‌ಗಳ ಬೃಹತ್ ಮೊತ್ತ ಪೇರಿಸಿತ್ತು. ಈ ಸಮತೋಲನವು ಕೊಹ್ಲಿ ಅನುಪಸ್ಥಿತಿಯಲ್ಲೂ ಲಕ್ನೋ ವಿರುದ್ಧ ಹೋರಾಡುವ ಆತ್ಮವಿಶ್ವಾಸವನ್ನು ತಂಡಕ್ಕೆ ನೀಡಿದೆ.



