18 ವರ್ಷ ಮೇಲ್ಪಟ್ಟವರಿಗೆಲ್ಲ ಸಿಗಲಿದೆ 3 ಲಕ್ಷ ! ಕೇಂದ್ರ ಸರ್ಕಾರದ ಯೋಜನೆ ಬಗ್ಗೆ ತಿಳಿಯಿರಿ

ಕೇಂದ್ರ ಸರ್ಕಾರವು ಸಾಮಾನ್ಯ ಜನರಿಗೆ ಅನೂಕೂಲವಾಗುವಂತೆ ಹಲವಾರು ಯೋಜನೆಗಳನ್ನು ಪ್ರಾರಂಭಿಸಿದೆ. ಮುಂಬರುವ ದಿನಗಳಲ್ಲಿ, ಜನರಿಗೆ ಹೆಚ್ಚು ಅನುಕೂಲವಾಗುವಂತೆ, ಹಾಗೆಯೇ ಜನರ ಹಿತಾಸಕ್ತಿಯನ್ನು ಬೆಂಬಲಿಸುವ ದೃಷ್ಟಿಯಿಂದ ಹೆಚ್ಚಿನ ಯೋಜನೆಗಳನ್ನು ಪರಿಚಯಿಸುವತ್ತ ಗಮನ ಹರಿಸಿದೆ. ಪ್ರತಿಯೊಂದು ಯೋಜನೆಯೂ ಸಹ ಜನರನ್ನು ಸ್ವಾವಲಂಬಿಗಳನ್ನಾಗಿ ಮಾಡುವ ಉದ್ದೇಶವನ್ನು ಹೊತ್ತು ಬರುತ್ತಿದೆ. ಸರ್ಕಾರವು ನಗದು ರೂಪದಲ್ಲಿ ಅಥವಾ ಇತರ ವಿಧಾನಗಳ ಮೂಲಕ ಸಹಾಯವನ್ನು ನೀಡುತ್ತಿದೆ.

ಹೊಸ ಯೋಜನೆಯಾದ ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ (ಪಿಎಂ ವಿಶ್ವಕರ್ಮ ಯೋಜನೆ);

ಈ ಯೋಜನೆಯನ್ನು ಕಳೆದ ವರ್ಷ ಸ್ವಾತಂತ್ರ್ಯ ದಿನದಂದು ಘೋಷಿಸಲಾಯಿತು. ನಂತರ ವಿಶ್ವಕರ್ಮ ಪೂಜೆಯಂದು ಜಾರಿಗೆ ತರಲಾಯಿತು.

ಯೋಜನೆಯ ಉದ್ದೇಶ:

ವಿವಿಧ ಕೈಗಾರಿಕೆಗಳಲ್ಲಿ ಕೆಲಸ ಮಾಡುವ ಜನರಿಗೆ ಈ ಯೋಜನೆಯು ಸಹಾಯಕವಾಗಿದೆ. ಇದರ ಮುಖ್ಯ ಗುರಿಯೆಂದರೆ, ಕೆಲಸದ ವಿಧಾನಗಳನ್ನು ಸುಧಾರಿಸುವುದು, ಜನರ ಜೀವನ ಮಟ್ಟವನ್ನು ಹೆಚ್ಚಿಸುವುದು ಮತ್ತು ಅವರ ಕೆಲಸಕ್ಕೆ ಹೆಚ್ಚಿನ ಮಾನ್ಯತೆ ನೀಡುವಂತೆ ಮಾಡುವುದು.

ಜನರ ಜೀವನ ಮಟ್ಟವು ಆದಾಯವನ್ನು ಅವಂಬಿಸಿರುತ್ತದೆ. ಮತ್ತು ಆದಾಯವು ದಕ್ಷತೆಯನ್ನು ಅಲವಂಬಿಸಿರುತ್ತದೆ. ದಕ್ಷತೆಯನ್ನು ಹೆಚ್ಚಿಸಲು, ಸರಿಯಾದ ತರಬೇತಿ ಮತ್ತು ಹೂಡಿಕೆಯ ಅಗತ್ಯವಿದೆ. ಅರ್ಜಿದಾರರು ಪಧಾನ ಮಂತ್ರಿ ವಿಶ್ವಕರ್ಮ ಯೋಜನೆಯಡಿಯಲ್ಲಿ ಈ ಪ್ರಯೋಜನಗಳನ್ನು ಪಡೆದುಕೊಳ್ಳಬಹುದಾಗಿದೆ.

ಯೋಜನೆಯ ವಿವರಗಳು;

ಈ ಯೋಜನೆಯಡಿಯಲ್ಲಿ ಕೇವಲ 7% ಬಡ್ಡಿಯಲ್ಲಿ 3 ಲಕ್ಷ ರೂ. ಗಳ ವರೆಗೆ ಸಾಲವನ್ನು ನೀಡಲಾಗವುದು.

ಸಾಲವನ್ನು ಎರಡು ಹಂತಗಳಲ್ಲಿ ನೀಡಲಾಗುವುದು.

ಫಲಾನುಭವಿಗಳಿಗೆ ಸಾಲವನ್ನು ಮರು ಪಾವತಿಸಲು 5 ವರ್ಷಗಳ ಕಾಲಾವಕಾಶ ಇರುತ್ತದೆ.

ತರಬೇತಿಗೆ ಅರ್ಜಿ ಸಲ್ಲಿಸುವವರಿಗೆ 15,000 ರೂ. ಗಳ ಒಂದು ಬಾರಿಯ ಅನುದಾನ ಸಿಗುತ್ತದೆ.

ತಾಂತ್ರಿಕ ತರಬೇತಿಯನ್ನು ಪೂಣಗೊಳಿಸಿದ ನಂತರ, ಜನರು ಕೇಂದ್ರ ಸರ್ಕಾರದಿಂದ ಪ್ರಮಾಣಪತ್ರವನ್ನು ಪಡೆಯುತ್ತಾರೆ.

ಯಾರು ಅರ್ಜಿ ಸಲ್ಲಿಸಲು ಅರ್ಹರು?

ಚರ್ಮದ ಕೆಲಸಗಾರರು, ದರ್ಜಿಗಳು, ಬಡಗಿಗಳು, ಮೇಸ್ತ್ರಿಗಳು, ಕಮ್ಮಾರರು, ಕುಂಬಾರರು ಮತ್ತು ಅಕ್ಕಸಾಲಿಗರು ಸೇರಿದಂತೆ 18 ವೃತ್ತಿಗಳಲ್ಲಿ ಕೆಲಸ ಮಾಡುವ ಜನರು ಅರ್ಜಿ ಸಲ್ಲಿಸಬಹುದು. ಅರ್ಜಿದಾರರಿಗೆ ಸರ್ಕಾರಿ ಸೌಲಭ್ಯಗಳು, ಸರಿಯಾದ ತರಬೇತಿ ಮತ್ತು ಆದಾಯವನ್ನು ಹೆಚ್ಚಿಸುವ ಮೂಲಕ ಅವರ ಜೀವನ ಮಟ್ಟವನ್ನು ಸುಧಾರಿಸಲು ಅನುಕೂಲವಾಗುತ್ತದೆ.

ಅರ್ಜಿ ಸಲ್ಲಿಸುವ ವಿಧಾನ;

ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಗೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿಸಲ್ಲಿಸಲು ಇಚ್ಛಿಸುವವರು https://pmvishwakarma.gov.in/  ಗೆ ಭೇಟಿ ನೀಡಿ, ಅಗತ್ಯವಿರುವ ಎಲ್ಲಾ ಮಾಹಿತಿಗಳೊಂದಿಗೆ ಫಾರ್ಮ್‌ಅನ್ನು ಭರ್ತಿ ಮಾಡಿ. ಯೋಜನೆಗೆ ಸಂಬಂಧಿಸಿದ ಎಲ್ಲಾ ಮಾಹಿತಿಗಳು ಈ ವೆಬ್‌ಸೈಟ್‌ನಲ್ಲಿ ಲಭ್ಯವಿದೆ.

ಈ ವಿಡಿಯೋ ಲಿಂಕ್‌ ಕ್ಲಿಕ್‌ ಮಾಡಿ: https://www.youtube.com/watch?v=1MA04SOPwXI


Vidhya | ವಿದ್ಯಾಶ್ರೀ

ವಿದ್ಯಾಶ್ರೀ ಅವರು ನ್ಯೂಸ್‌ ನೆಕ್ಸ್ಟ್‌ ಕನ್ನಡ ( Kannada News Next) ದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಕನ್ನಡದ ನ್ಯೂಸ್‌ ಚಾನೆಲ್‌, ದಿನ ಪತ್ರಿಕೆ ಹಾಗೂ ಡಿಜಿಟಲ್‌ ಮಾಧ್ಯಮದಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

Related Stories