ಯುದ್ಧದ ಭೀತಿಯ ನಡುವೆಯೇ ದುಬೈನಿಂದ ನೀವು ಎಷ್ಟು ಚಿನ್ನ ಖರೀದಿಸಿ ತರಬಹುದು ಎಂಬುದು ನಿಮಗೆ ತಿಳಿದಿದೆಯೇ ?

ದುಬೈ ಚಿನ್ನಕ್ಕೆ ಭಾರೀ ರಿಯಾಯಿತಿ ದೊರಕಿದೆ. 10 ಗ್ರಾಂ ಚಿನ್ನದ ದರ 1.60 ಲಕ್ಷ ರೂಪಾಯಿ ಆಗಿದ್ದು ಭಾರತೀಯರು ಅರಬ್​ ರಾಷ್ಟ್ರಗಳಿಂದ ಚಿನ್ನ ಆಮದು ಮಾಡಿಕೊಳ್ಳುವ ಪ್ರಯತ್ನದಲ್ಲಿದ್ದಾರೆ.

ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧದ ಸಂಘರ್ಷಗಳ ನಡುವೆಯೇ ದುಬೈ ಚಿನ್ನಕ್ಕೆ ಭಾರೀ ರಿಯಾಯಿತಿ ದೊರಕಿದೆ. 10 ಗ್ರಾಂ ಚಿನ್ನದ ದರ 1.60 ಲಕ್ಷ ರೂಪಾಯಿ ಆಗಿದ್ದು ಭಾರತೀಯರು ಅರಬ್​ ರಾಷ್ಟ್ರಗಳಿಂದ ಚಿನ್ನ ಆಮದು ಮಾಡಿಕೊಳ್ಳುವ ಪ್ರಯತ್ನದಲ್ಲಿದ್ದಾರೆ. ನೀವೇನಾದರೂ ದುಬೈನಿಂದ ಚಿನ್ನ ಖರೀದಿಸಲು ಬಯಸಿದರೆ ಭಾರತೀಯರು ಪಾಲಿಸಬೇಕಾದ ಕಾನೂನುಗಳ ಬಗ್ಗೆ ವಿವರಣೆ ಇಲ್ಲಿದೆ.

ಬಹಳ ವರ್ಷಗಳಿಂದ ಭಾರತೀಯ ಪ್ರಯಾಣಿಕರ ಚಿನ್ನ ವಿಲೇವಾರಿಗೆ ಎರಡು ಮಾದರಿಯಲ್ಲಿ ಕಾನೂನು ವಿಧಿಸಲಾಗಿತ್ತು. 2016ರ ಹಳೆಯ ನಿಯಮಾವಳಿಗಳನ್ನು ನೋಡುವುದಾದರೆ, ಓರ್ವ ಮಹಿಳೆ 40 ಗ್ರಾಂ ಚಿನ್ನ ತರಬಹುದಿತ್ತು. ಆದರೆ ಇದರ ಮೌಲ್ಯ 1,00,000 ರೂಪಾಯಿ ಮೀರಿರಬಾರದು. ಆದರೆ 2026ರ ವೇಳೆಗೆ 10 ಗ್ರಾಂ ಚಿನ್ನದ ಮೌಲ್ಯವೇ 1,50,000 ರೂಪಾಯಿಗಳ ಆಸುಪಾಸಿನಲ್ಲಿದೆ. ಹೀಗಾಗಿ 7 ಗ್ರಾಂಗಿಂತ ಹೆಚ್ಚಿನ ಚಿನ್ನ ಸಾಗಿಸುವುದು ಅಪರಾಧದ ಪಟ್ಟಿಯಲ್ಲಿ ಬರಲಿದೆ.

ಆದ್ದರಿಂದ ಈ ಹಳೆಯ ನಿಯಮದಲ್ಲಿ ಬದಲಾವಣೆ ತರಲಾಗಿದೆ. ಈ ಮೌಲ್ಯ ಮಿತಿಗಳನ್ನು ರದ್ದು ಮಾಡಲಾಗಿದ್ದು ಭಾರತೀಯ ಅರ್ಹ ಪ್ರಯಾಣಿಕರು ಅಂದರೆ ಒಂದು ವರ್ಷಕ್ಕೂ ಅಧಿಕ ಕಾಲ ವಿದೇಶದಲ್ಲಿ ನೆಲೆಸಿರುವ ಭಾರತೀಯ ಮೂಲದ ಪ್ರವಾಸಿಗರಿಗೆ ಈ ಕೆಳಗಿನ ಅನುಮತಿ ನೀಡಲಾಗಿದೆ.

ಮಹಿಳಾ ಪ್ರಯಾಣಿಕರು : 40 ಗ್ರಾಂ
ಪುರುಷ ಪ್ರಯಾಣಿಕರು : 20 ಗ್ರಾಂ

15 ವರ್ಷದೊಳಗಿನ ಮಕ್ಕಳು : 40 ಗ್ರಾಂ ಚಿನ್ನದ ಆಭರಣಗಳನ್ನು ತರಲು ಅನುಮತಿ ನೀಡಲಾಗಿದೆ. ಇದರಿಂದ ಪ್ರಸ್ತುತ ಮಹಿಳೆಯರು ದುಬೈನಿಂದ ಬರೋಬ್ಬರಿ 6 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ತರುವ ಅವಕಾಶ ಹೊಂದಿದ್ದಾರೆ. ಒಂದು ವೇಳೆ ನೀವು 1 ಗ್ರಾಂ ಚಿನ್ನದ ನಾಣ್ಯ ಅಥವಾ 100 ಗ್ರಾಂ ಬಿಸ್ಕತ್​ಗಳನ್ನು ಹೊಂದಿದ್ದರೆ ಅದನ್ನು ವಿಮಾನ ನಿಲ್ದಾಣದ ರೆಡ್ ಚಾನೆಲ್‌ನಲ್ಲಿ ಘೋಷಿಸಬೇಕು. ಕಚ್ಚಾ ಚಿನ್ನದ ಮೇಲಿನ ಸುಂಕ ರಚನೆಯನ್ನು ನೀವು ವಿದೇಶದಲ್ಲಿ ಉಳಿಯುವ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ.

ಆರು ತಿಂಗಳುಗಳಿಂತ ಹೆಚ್ಚು ಕಾಲ ಉಳಿದವರಿಗೆ : ಅರಬ್​ ರಾಷ್ಟ್ರಗಳಲ್ಲಿ ನೀವು 6 ತಿಂಗಳಿಗಿಂತ ಹೆಚ್ಚು ಕಾಲ ಉಳಿದಿದ್ದರೆ ಅರ್ಹ ಪ್ರಯಾಣಿಕರು ಸುಮಾರು 6 % ರಿಯಾಯಿತಿ ಸುಂಕವನ್ನು ಪಾವತಿಸುವ ಮೂಲಕ 1 ಕೆಜಿ ಚಿನ್ನವನ್ನು ತರಬಹುದಾಗಿದೆ.

ಇದನ್ನೂ ಓದಿ: ಇರಾನ್​ ಯುದ್ಧದ ಎಫೆಕ್ಟ್​ : ಎಲ್​ಪಿಜಿ ಸಿಲಿಂಡರ್​ ಪೂರೈಕೆಯಲ್ಲಿ ಮಾಡಲಾಗಿದೆ ಈ ಬಹುಮುಖ್ಯ ಬದಲಾವಣೆ

ಆರು ತಿಂಗಳಿಗಿಂತ ಕಡಿಮೆ ಕಾಲ ಉಳಿಯುವವರಿಗೆ : ಕಡಿಮೆ ಅವಧಿಯ ಕಾಲ ವಾಸವಿರುವ ಪ್ರಯಾಣಿಕರಿಗೆ ಹೆಚ್ಚಿನ “ಹ್ಯಾಂಡ್ ಬ್ಯಾಗೇಜ್” ದರವನ್ನು ವಿಧಿಸಲಾಗುತ್ತದೆ, ಸಾಮಾನ್ಯವಾಗಿ ಸುಮಾರು 38.5%.ವರೆಗೆ ಇವರು ಸುಂಕ ಪಾವತಿ ಮಾಡಬೇಕಾಗಿ ಬರಲಿದೆ.

ಎಲ್ಲಾ ಚಿನ್ನದ ವಸ್ತುಗಳಿಗೆ ಅದರ ಬಿಲ್​ ಕೊಂಡೊಯ್ಯುವುದು ಕಡ್ಡಾಯವಾಗಿರಲಿದೆ. ಒಂದು ವೇಳೆ ತೂಕದ ಮಿತಿಗಿಂತ ಹೆಚ್ಚಿನ ಚಿನ್ನ ಕೊಂಡೊಯ್ಯುವ ಪ್ರಯತ್ನ ಮಾಡಿರುವುದುಪತ್ತೆಯಾದರೆ ಭಾರೀ ದಂಡ ಹಾಗೂ ಸಂಪೂರ್ಣ ಬಂಗಾರವನ್ನು ಕಸ್ಟಮ್ಸ್​ ಅಧಿಕಾರಿಗಳು ವಶಪಡಿಸಿಕೊಳ್ಳುತ್ತಾರೆ. ಹಾಗೂ ಕಸ್ಟಮ್ಸ್​ ಕಾಯ್ದೆ 1962ರ ಅಡಿಯಲ್ಲಿ ಕಠಿಣ ಕಾನೂನು ಕ್ರಮ ಜರುಗಿಸಲಾಗುತ್ತದೆ.

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories