ಆಧಾರ್ ಕಾರ್ಡ್ ಇದ್ರೆ ಸಿಗುತ್ತೆ 50000 ಸಾಲ : ಪ್ರಧಾನ ಮಂತ್ರಿ ಸ್ವಾನಿಧಿ ಯೋಜನೆಗೆ ಅರ್ಜಿ ಸಲ್ಲಿಸಿ
PM Swanidhi Yojana 2025 : ಭಾರತ ಸರ್ಕಾರ ಆರ್ಥಿಕವಾಗಿ ಹಿಂದುಳಿದ ಜನರಿಗೆ ನೆರವು ನೀಡಲು ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ.
ಅದರಲ್ಲೂ ತಮ್ಮದೇ ಆದ ಒಂದು ಸಣ್ಣ ವ್ಯಾಪಾರವನ್ನು ಆರಂಭಿಸಬೇಕೆಂದು ಬಯಸುವ ಆದರೆ ಹಣದ ಕೊರತೆಯಿಂದಾಗಿ ಪ್ರಾರಂಭಿಸಲು ಹಿಂಜರಿಯುತ್ತಿರುವ ಜನರಿಗೆ, ಮೋದಿ ಸರ್ಕಾರದ ಯೋಜನೆಯ ಅಡಿಯಲ್ಲಿ ಸಾಲ ತೆಗೆದುಕೊಂಡು ಸ್ವತಂತ್ರವಾಗಿ ಕೆಲಸವನ್ನು ಪ್ರಾರಂಭಿಸಬಹುದಾದ ಉತ್ತಮ ಅವಕಾಶವನ್ನು ಪಿಎಮ್ ಸ್ವಾನಿಧಿ ಯೋಜನೆ ನೀಡುತ್ತದೆ.
ಈ ಪಿಎಮ್ ಸ್ವಾನಿಧಿ ಯೋಜನೆಯ ಮೈಕ್ರೋ ಕ್ರೆಡಿಟ್ ಯೋಜನೆಯಾಗಿದೆ. ಇದರಲ್ಲಿ ಸರ್ಕಾರ 3 ಬಾರಿಗೆ ಸಾಲವನ್ನು ನೀಡುತ್ತದೆ. ವಿಶೇಷವೆಂದರೆ ಈ ಸಾಲದ ಯೋಜನೆಗೆ ಯಾವುದೇ ಗ್ಯಾರಂಟಿಯ ಅವಶ್ಯಕತೆ ಇರುವುದಿಲ್ಲ.
ಪಿಎಮ್ ಸ್ವಾನಿಧಿ ಯೋಜನೆಯಲ್ಲಿ ಭಾಗಿಯಾಗಿ ಸಾಲ ಪಡೆದು ಸ್ವಂತ ವ್ಯಾಪಾರ ಆರಂಭಿಸುವುದು ಹೇಗೆ ಎಂದು ತಿಳಿದುಕೊಳ್ಳೋಣ.
ಇದನ್ನೂ ಓದಿ: EPFO : ಇಪಿಎಫ್ಒ ನೌಕರರಿಗೆ ಸಿಹಿ ಸುದ್ದಿ: ಸಾವಿನ ಪರಿಹಾರ ನಿಧಿ ದ್ವಿಗುಣ, ₹15 ಲಕ್ಷಕ್ಕೆ ಏರಿಕೆ
PM Swanidhi Yojana: ಎಷ್ಟು ಸಾಲ ನೀಡುತ್ತದೆ?
ದೇಶವು ಕರೋನಾ ಸಂಕ್ರಾಮಿಕ ರೋಗದೊಂದಿಗೆ ಹೋರಾಡುತ್ತಿರುವ ವೇಳೆಯಲ್ಲಿ ಅನೇಕರು ಉದ್ಯೋಗವನ್ನು ಕಳೆದುಕೊಂಡಿದ್ದರು. ಅದರಲ್ಲೂ ಬೀದಿ ಬದಿಯಲ್ಲಿ ಚಿಕ್ಕಪುಟ್ಟ ವ್ಯಾಪಾರಗಳನ್ನು ಮಾಡುವವರಿಗೆ ಜೀವನ ನಡೆಸುವುದು ಕಷ್ಟವೆನಿಸುತ್ತಿತ್ತು.
ಅಂತಹ ಸಂದರ್ಭದಲ್ಲಿ ನರೇಂದ್ರ ಮೋದಿ ಸರ್ಕಾರವು ಬೀದಿ ವ್ಯಾಪಾರಿಗಳಿಗೆ ಆರ್ಥಿಕವಾಗಿ ನೆರವು ನೀಡಿ ಅವರಿಗೆ ಒಂದು ಜೀವನೋಪಾಯವನ್ನು ಒದಗಿಸುವ ಉದ್ದೇಶದಿಂದ ಈ ಯೋಜನೆಯನ್ನು ಪ್ರಾರಂಭಿಸಿತು.
ಇದರಲ್ಲಿ ಸಣ್ಣ ವ್ಯಾಪಾರ ಪ್ರಾರಂಭಿಸಲು ಮೂರು ಹಂತಗಳಲ್ಲಿ 10, 20 ಹಾಗೂ 50 ಸಾವಿರಗಳ ಸಾಲದ ನೆರವನ್ನು ನೀಡಲಾಗುತ್ತದೆ. ಆರಂಭದಲ್ಲಿ ವ್ಯಾಪಾರಿಗಳಿಗೆ 10,000 ರೂ. ವರೆಗೆ ಸಾಲ ನೀಡಲಾಗುತ್ತದೆ.
ಅದನ್ನು ಅವರು ಸಮಯಕ್ಕೆ ಸರಿಯಾಗಿ ಮರುಪಾವತಿಸಿದರೆ, ಮುಂದಿನ ಬಾರಿ ಅವರು 20,000 ರೂ. ಸಾಲ ಪಡೆಯಬಹುದು. ಹಿಂದಿನ ಸಾಲವನ್ನು ಸಕಾಲಕ್ಕೆ ಮರುಪಾವತಿಸಿದರೆ ಮೂರನೇ ಹಂತದಲ್ಲಿ 50,000 ರೂ. ಪಡೆಯಬಹುದಾಗಿದೆ.
ಈ ಯೋಜನೆಯಲ್ಲಿ ಸಾಲ ಮರುಪಾವತಿ ಮಾಡಲು 12 ತಿಂಗಳುಗಳ ಒಳಗೆ ಕಂತುಗಳ ರೂಪದಲ್ಲಿ ಅವಕಾಶ ನೀಡಲಾಗುತ್ತದೆ.
ಪಿಎಮ್ ಸ್ವಾನಿಧಿ ಯೋಜನೆಯಲ್ಲಿ ಸಾಲ ಪಡೆಯುವುದು ಹೇಗೆ?
ತಮ್ಮದೇ ಸ್ವಂತ ವ್ಯಾಪಾರವನ್ನು ಆರಂಭಿಸುವ ವ್ಯಾಪಾರಿಗಳು ತಮ್ಮ ಆಧಾರ ಕಾರ್ಡ್ ಅನ್ನು ಬಳಸಿ ಸರ್ಕಾರಿ ಬ್ಯಾಂಕ್ಗಳಲ್ಲಿ ಪಿಎಮ್ ಸ್ವಾನಿಧಿ ಯೋಜನೆಗೆ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಕೆ ಕಡ್ಡಾಯವಾಗಿದೆ.
ಸಾಲದ ಅರ್ಜಿ ನಮೂನೆಗೆ ಅಗತ್ಯವಿರುವ ದಾಖಲೆಗಳನ್ನು ನೀಡಬೇಕಾಗುತ್ತದೆ. ಈ ಆನ್ಲೈನ್ ಅರ್ಜಿ ಪ್ರಕ್ರಿಯೆ ಸಮಯದಲ್ಲಿ ಇ–ಕೆವೈಸಿ ಮಾಡಿಸುವುದು ಕಡ್ಡಾಯವಾಗಿದೆ.
ಸರ್ಕಾರದ ಈ ಕಲ್ಯಾಣ ಯೋಜನೆಗೆ ಭವಿಷ್ಯದ ಪ್ರಯೋಜನಕ್ಕಾಗಿ ನಗರ/ಸ್ಥಳೀಯ ಸಂಸ್ಥೆಗಳಿಂದ ಶಿಫಾರಸು ಪತ್ರವನ್ನು ಪಡೆಯಬೇಕಾಗುತ್ತದೆ.
ಅರ್ಹತಾ ಪರಿಶೀಲನೆ ಹಂತ ಮುಗಿದ ನಂತರ ಸಾಲ ಪಡೆದು ವ್ಯಾಪಾರ ಪ್ರಾರಂಭ ಮಾಡಬಹುದಾಗಿದೆ.
ಇದನ್ನೂ ಓದಿ: ಭಾಗ್ಯಲಕ್ಷ್ಮಿ ಯೋಜನೆ ಗುಡ್ನ್ಯೂಸ್ : ಫಲಾನುಭವಿಗಳ ಖಾತೆಗೆ ಮೆಚ್ಯುರಿಟಿ ಹಣ
(How to get 50 thousand loan without guagantee in pm swanidhi yojana in kannada)



