ಬಣ್ಣ ಬದಲಿಸುತ್ತಿದೆ ಕಾಸ್ಮಿಕ್ ಕೇಸರಿ ಬಣ್ಣದ ಐಫೋನ್ 17 ಪ್ರೋ ಮ್ಯಾಕ್ಸ್ : ಇದರ ಹಿಂದಿದೆ ಈ ಕಾರಣ
IPhone 17: ಯಾವಾಗಿಂದ ಐಫೋನ್ 17 ಪ್ರೋ ಮ್ಯಾಕ್ಸ್ ಮಾರುಕಟ್ಟೆಗೆ ಲಗ್ಗೆ ಇಟ್ಟಿತೋ ಅಂದಿನಿಂದಲೂ ಒಂದಿಲ್ಲೊಂದು ಕಾರಣದಿಂದ ಈ ಫೋನ್ಗಳು ಸುದ್ದಿಯಲ್ಲಿವೆ. ಇದೇ ಮೊದಲನೇ ಬಾರಿ ಐಫೋನ್ ಕಂಪನಿಯು ಕೇಸರಿ ಬಣ್ಣದ ಫೋನುಗಳನ್ನು ಮಾರುಕಟ್ಟೆಗೆ ಪರಿಚಯಿಸಿತ್ತು.
ಹೊಸ ಬಣ್ಣದ ಫೋನ್ ಆದ್ದರಿಂದ ಬಹುತೇಕರು ಐಫೊನ್ 17 ಸರಣಿ ಖರೀದಿಸುವಾಗ ಈ ಬಣ್ಣಕ್ಕೆ ಹೆಚ್ಚು ಆದ್ಯತೆ ನೀಡಿದ್ದರು. ಆದರೆ ಇದೀಗ ಈ ಬಣ್ಣವು ಹೊಸದೊಂದು ಸಂಚಲನ ಮೂಡಿಸಿದೆ.
ಏನೆಂದರೆ ಐಫೋನ್ 17 ಪ್ರೋ ಮ್ಯಾಕ್ಸ್ ಬಣ್ಣ ಬಿಡುತ್ತಿದೆ ಎನ್ನಲಾಗಿದ್ದು ಹಲವರ ಮೊಬೈಲ್ಗಳು ಕೇಸರಿ ಬಣ್ಣದಿಂದ ಗುಲಾಬಿ ಬಣ್ಣಕ್ಕೆ ತಿರುಗಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಮಾತಿಗೆ ಪುರಾವೆ ನೀಡುವಂತಹ ಫೋಟೋಗಳು ವೈರಲ್ ಆಗುತ್ತಿದೆ.
ಸಾಮಾಜಿಕ ಜಾಲತಾಣಗಳ ವೇದಿಕೆಗಳ ಪೈಕಿ ಒಂದಾದ ರೆಡ್ಡಿಟ್ನಲ್ಲಿ ಬಳಕೆದಾರರೊಬ್ಬರು ತನ್ನ ಐಫೋನ್ 17 ಪ್ರೋ ಮ್ಯಾಕ್ಸ್ ಗುಲಾಬಿ ಬಣ್ಣಕ್ಕೆ ತಿರುಗಿರುವ ಬಗ್ಗೆ ಫೋಟೋ ಪೋಸ್ಟ್ ಮಾಡು್ತ್ತಿದ್ದಂತೆಯೇ ಈ ಚರ್ಚೆ ಆರಂಭಗೊಂಡಿದೆ.
ಫೋನ್ ಕೆಲ ಭಾಗಗಳು ಗುಲಾಬಿ ಛಾಯೆ ಹೊಂದಿರುವುದನ್ನು ಕಾಣಬಹುದಾಗಿದೆ. ಅನೇಕರು ಇದೇನಪ್ಪಾ ಹೀಗಾಯ್ತು ಎಂದರೆ ಇನ್ನೂ ಕೆಲವರು ಇದು ಎಐ ಎಡಿಟ್ ಮಾಡಿರುವ ಫೋಟೋ ಎಂದು ಅಭಿಪ್ರಾಯ ಹೊರಹಾಕಿದ್ದಾರೆ. ಇನ್ನೂ ಕೆಲವರು ಕೇಸರಿ ಬಣ್ಣಕ್ಕಿಂತ ಗುಲಾಬಿ ಬಣ್ಣವೇ ಚೆನ್ನಾಗಿದೆ ಎಂದು ತಮಾಷೆ ಮಾಡಿದ್ದಾರೆ.
Also Read: ಅನ್ನದಾತರಿಗೆ ಇಲ್ಲಿದೆ ಗುಡ್ ನ್ಯೂಸ್ : ಶೀಘ್ರದಲ್ಲೇ ನಿಮ್ಮ ಖಾತೆಗೆ ಬರಲಿದೆ ₹2000
ಯಾಕೆ ಐಫೋನ್ ಪ್ರೋ ಮ್ಯಾಕ್ಸ್ 17 ಪ್ರೋ ಬಣ್ಣ ಬದಲಿಸಿದೆ ?
ಐಫೋನ್ ಎಂದಿಗೂ ತನ್ನ ಗುಣಮಟ್ಟದ ವಿಚಾರದಲ್ಲಿ ರಾಜಿಮಾಡಿಕೊಂಡ ಇತಿಹಾಸವೇ ಇಲ್ಲ. ಹೀಗಿರುವಾಗ ಯಾಕೆ ಐಫೋನ್ಗಳು ಬಣ್ಣ ಬದಲಿಸಿದೆ ಎಂಬ ವಿಚಾರದ ಬಗ್ಗೆ ಸಂಶೋಧನೆ ನಡೆಸಿದಾಗ ತಿಳಿದುಬಂದ ನಿಜವಾದ ಕಾರಣ ಅನೇಕರಿಗೆ ಆಶ್ಚರ್ಯವನ್ನುಂಟು ಮಾಡಿದೆ.
ಇದು ಐಫೋನ್ನ ವಿನ್ಯಾಸದ ಸಮಸ್ಯೆಯಲ್ಲ ಬದಲಾಗಿ ಜನರು ತಮ್ಮ ಮೊಬೈಲ್ ಫೋನ್ ಸ್ವಚ್ಛಗೊಳಿಸುವ ವಿಧಾನದಲ್ಲಿ ಸಮಸ್ಯೆಯಿದೆ ಎಂದು ತಿಳಿದುಬಂದಿದೆ. ಐಫೋನ್ 17 ಪ್ರೋ ಸೀರಿಸ್ಗಳನ್ನು ಆನೋಡೈಸ್ಡ್ ಆಲ್ಯೂಮಿನಿಯಂನಿಂದ ಮಾಡಲಾಗಿದೆ.
ಈ ಲೋಹಗಳನ್ನು ಶುದ್ಧಗೊಳಿಸಲು ಕೆಲ ರಾಸಾಯನಿಕಗಳನ್ನು ಬಳಕೆ ಮಾಡಿದಾಗ ತನ್ನ ಮೇಲೆ ಕೃತಕ ಆಕ್ಸೈಡ್ ಪದರಗಳು ಕುಳಿತುಕೊಳ್ಳುವಂತೆ ಮಾಡುತ್ತದೆ. ಆಗ ಇದರ ಬಣ್ಣ ಬದಲಾಗುತ್ತದೆ. ಇನ್ನೂ ಸ್ಪಷ್ಟವಾಗಿ ಹೇಳುವುದಾದರೆ ಆಕ್ಸೈಡ್ ಪದರಗಳು ಪೆರಾಕ್ಸೈಡ್ ಆಧಾರಿತ ಕ್ಲೀನರ್ಗಳಿಗೆ ಪ್ರತಿಕ್ರಿಯಿಸುತ್ತದೆ. ಹೀಗಾಗಿ ಕೇಸರಿ ಬಣ್ಣದಿಂದ ಗುಲಾಬಿ ಬಣ್ಣಕ್ಕೆ ತಿರುಗಿದೆ ಎಂದು ತಿಳಿದುಬಂದಿದೆ.
Also Read: ಅಮೆಜಾನ್, ಫ್ಲಿಪ್‌ಕಾರ್ಟ್‌ನಲ್ಲಿ ವರ್ಷದ ಅತಿದೊಡ್ಡ ಹಬ್ಬದ ಮಾರಾಟ ಪ್ರಾರಂಭ
ಆ್ಯಪಲ್ ಫೋನ್ಗಳನ್ನು ಯಾವ ರೀತಿ ಶುಚಿಗೊಳಿಸಬೇಕು :
ಆ್ಯಪಲ್ ಫೋನ್ನ ಬಣ್ಣದಲ್ಲಿ ಯಾವುದೇ ರೀತಿಯ ಬದಲಾವಣೆಗಳು ಆಗದಂತೆ, ಲೋಹಕ್ಕೆ ಏನೇ ತೊಂದರೆಯಾಗದಂತೆ ನೋಡಿಕೊಳ್ಳಲು ನಿಮ್ಮ ಫೋನ್ಗಳನ್ನು ಈ ರೀತಿ ಸ್ವಚ್ಛಗೊಳಿಸಿ ,
- 70 ಪ್ರತಿಶತ ಐಸೊಪ್ರೊಪಿಲ್ ಆಲ್ಕೋಹಾಲ್ ವೈಪ್‌ಗಳು, 70 ಪ್ರತಿಶತ ಈಥೈಲ್ ಆಲ್ಕೋಹಾಲ್ ವೈಪ್‌ಗಳು ಅಥವಾ ಕ್ಲೋರಾಕ್ಸ್ ಸೋಂಕುನಿವಾರಕ ವೈಪ್‌ಗಳನ್ನು ಬಳಸಿ.
- ಫೋನಿನ ಹೊರಭಾಗವನ್ನು ನಿಧಾನವಾಗಿ ಸ್ವಚ್ಛಗೊಳಿಸಿ, ಆದರೆ ಬ್ಲೀಚ್ ಅಥವಾ ಹೈಡ್ರೋಜನ್ ಪೆರಾಕ್ಸೈಡ್ ಹೊಂದಿರುವ ಉತ್ಪನ್ನಗಳನ್ನು ಬಳಸಬೇಡಿ.
- ಐಫೋನ್ ಅನ್ನು ಯಾವುದೇ ಶುಚಿಗೊಳಿಸುವ ಏಜೆಂಟ್‌ನಲ್ಲಿ ಮುಳುಗಿಸಬೇಡಿ.
- ಐಫೋನ್ ಅನ್ನು ಸ್ವಚ್ಛಗೊಳಿಸಿದ ನಂತರ ಯಾವಾಗಲೂ ಸ್ವಚ್ಛವಾದ, ಒಣ ಬಟ್ಟೆಯಿಂದ ಒಣಗಿಸಿ.



