ಕರ್ನಾಟಕ ಬಜೆಟ್ 2026: ಗೃಹಲಕ್ಷ್ಮಿಯರಿಗೆ ಸಿಎಂ ಸಿದ್ದರಾಮಯ್ಯ ಭರ್ಜರಿ ಗಿಫ್ಟ್

ಬಜೆಟ್‌ನಲ್ಲಿ ಗೃಹಲಕ್ಷ್ಮಿ ಯೋಜನೆಗಾಗಿ ಬರೋಬ್ಬರಿ 28,608 ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿದೆ. ಈ ಯೋಜನೆ ಅಡಿಯಲ್ಲಿ ಮನೆಯ ಯಜಮಾನಿಗೆ ಪ್ರತಿ ತಿಂಗಳು ನೀಡಲಾಗುವ 2,000 ರೂಪಾಯಿಗಳ ನೆರವು ಯಾವುದೇ ಅಡೆತಡೆಯಿಲ್ಲದೆ ಮುಂದುವರಿಯಲಿದೆ.

karnataka budget 2026 gruhalakshmi scheme  : ಬೆಂಗಳೂರು: ರಾಜ್ಯದ ಕೋಟ್ಯಂತರ ಗೃಹಿಣಿಯರ ಆರ್ಥಿಕ ಶಕ್ತಿಯಾಗಿರುವ ‘ಗೃಹಲಕ್ಷ್ಮಿ’ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ 2026-27ನೇ ಸಾಲಿನ ಬಜೆಟ್‌ನಲ್ಲಿ ಬೃಹತ್ ಕೊಡುಗೆ ನೀಡಿದ್ದಾರೆ. ದಾಖಲೆಯ 17ನೇ ಬಜೆಟ್ ಮಂಡಿಸಿರುವ ಸಿಎಂ, ಗೃಹಲಕ್ಷ್ಮಿ ಯೋಜನೆಗೆ ಅತಿ ಹೆಚ್ಚು ಅನುದಾನ ಮೀಸಲಿಡುವ ಮೂಲಕ ಮಹಿಳಾ ಸಬಲೀಕರಣಕ್ಕೆ ಸರ್ಕಾರ ಬದ್ಧವಾಗಿದೆ ಎಂಬ ಸಂದೇಶ ರವಾನಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ವಿಧಾನಸಭೆಯಲ್ಲಿ 2026-27ನೇ ಸಾಲಿನ ಐತಿಹಾಸಿಕ ಬಜೆಟ್ ಮಂಡಿಸಿದ್ದಾರೆ. ಇದು ಸಿದ್ದರಾಮಯ್ಯ ಅವರ ದಾಖಲೆಯ 17ನೇ ಬಜೆಟ್ ಆಗಿದ್ದು, ಮಹಿಳೆಯರ ಸಬಲೀಕರಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ.

ಗೃಹಿಣಿಯರ ಆರ್ಥಿಕ ಸ್ಥಿತಿ ಸುಧಾರಿಸಲು ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಗೃಹಲಕ್ಷ್ಮಿ ಯೋಜನೆಗೆ ಬೃಹತ್ ಮೊತ್ತದ ಅನುದಾನ ಘೋಷಿಸಿರುವುದು ಮಹಿಳೆಯರಲ್ಲಿ ಹರ್ಷ ತಂದಿದೆ.

Also Read : ವಾಹನ ಸವಾರರೇ ಗಮನಿಸಿ; ರಾಜ್ಯಾದ್ಯಂತ ‘mVahan’ ಮೊಬೈಲ್ ಆಪ್ ಜಾರಿ

karnataka budget 2026 gruhalakshmi scheme : ಗೃಹಲಕ್ಷ್ಮಿ ಯೋಜನೆಗೆ ₹28,608 ಕೋಟಿ ಮೀಸಲು

ಬಜೆಟ್‌ನಲ್ಲಿ ಗೃಹಲಕ್ಷ್ಮಿ ಯೋಜನೆಗಾಗಿ ಬರೋಬ್ಬರಿ 28,608 ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿದೆ. ಈ ಯೋಜನೆ ಅಡಿಯಲ್ಲಿ ಮನೆಯ ಯಜಮಾನಿಗೆ ಪ್ರತಿ ತಿಂಗಳು ನೀಡಲಾಗುವ 2,000 ರೂಪಾಯಿಗಳ ನೆರವು ಯಾವುದೇ ಅಡೆತಡೆಯಿಲ್ಲದೆ ಮುಂದುವರಿಯಲಿದೆ. “ಗ್ಯಾರಂಟಿ ಯೋಜನೆಗಳು ಕೇವಲ ಚುನಾವಣಾ ಭರವಸೆಗಳಲ್ಲ, ಅವು ಜನರ ಆರ್ಥಿಕ ಶಕ್ತಿಯಾಗಿ ಬದಲಾಗಿವೆ” ಎಂದು ಸಿಎಂ ಈ ವೇಳೆ ಪುನರುಚ್ಚರಿಸಿದರು.

Also Read : ಬಾಡಿಗೆದಾರರಿಗೆ ಗುಡ್ ನ್ಯೂಸ್: ಇನ್ಮುಂದೆ ಲೀಸ್ ಅಗ್ರಿಮೆಂಟ್‌ಗೆ ಅಲೆದಾಟ ಬೇಕಿಲ್ಲ, ಮನೆಯಲ್ಲೇ ಕುಳಿತು ಮಾಡಿಕೊಳ್ಳಿ ಒಪ್ಪಂದ

ಮಹಿಳೆಯರಿಗೆ ಈ ಬಜೆಟ್‌ನಿಂದ ಆಗುವ ಲಾಭಗಳೇನು ?

  • ಸ್ಥಿರ ಆದಾಯ: ಬಜೆಟ್‌ನಲ್ಲಿ ಹಣ ಮೀಸಲಿಟ್ಟಿರುವುದರಿಂದ ಮುಂದಿನ ಒಂದು ವರ್ಷದವರೆಗೆ ಗೃಹಲಕ್ಷ್ಮಿ ಹಣ ಪಾವತಿಯಲ್ಲಿ ಯಾವುದೇ ತಾಂತ್ರಿಕ ಅಡೆತಡೆಗಳು ಉಂಟಾಗುವುದಿಲ್ಲ.
  • ಆರ್ಥಿಕ ಸ್ವಾತಂತ್ರ್ಯ: ಪ್ರತಿ ತಿಂಗಳು ಖಾತೆಗೆ ನೇರವಾಗಿ ಜಮೆಯಾಗುವ ₹2,000 ಹಣದಿಂದ ಗೃಹಿಣಿಯರು ಮನೆಯ ಸಣ್ಣಪುಟ್ಟ ಖರ್ಚು ಮತ್ತು ಮಕ್ಕಳ ಶಿಕ್ಷಣಕ್ಕೆ ನೆರವಾಗುತ್ತಿದೆ.
  • ಬೆಲೆ ಏರಿಕೆಗೆ ಮದ್ದು: ಅಡುಗೆ ಅನಿಲ ಮತ್ತು ದಿನಸಿ ಬೆಲೆ ಏರಿಕೆಯ ನಡುವೆ, ಈ ಆರ್ಥಿಕ ನೆರವು ಮಧ್ಯಮ ಮತ್ತು ಕೆಳವರ್ಗದ ಮಹಿಳೆಯರಿಗೆ ದೊಡ್ಡ ಆಸರೆಯಾಗಿದೆ.

ಆರೋಗ್ಯ ಕ್ಷೇತ್ರದಲ್ಲೂ ಗಿಫ್ಟ್

  • ಕೇವಲ ನಗದು ಮಾತ್ರವಲ್ಲದೆ, ಮಹಿಳೆಯರ ಆರೋಗ್ಯ ದೃಷ್ಟಿಯಿಂದ ಬೆಂಗಳೂರಿನಲ್ಲಿ ಸ್ತನ ಮತ್ತು ಗರ್ಭಕೋಶ ಕ್ಯಾನ್ಸರ್ ಲಸಿಕಾ ಕೇಂದ್ರ ಸ್ಥಾಪಿಸುವುದಾಗಿ ಸಿಎಂ ಘೋಷಿಸಿದ್ದಾರೆ.
  • ರಾಯಚೂರು, ಬಾಗಲಕೋಟೆ, ಮಂಡ್ಯ ಸೇರಿದಂತೆ 9 ಜಿಲ್ಲೆಗಳ ESI ಆಸ್ಪತ್ರೆಗಳ ಉನ್ನತೀಕರಣ.
  • ವಿಜಯಪುರದಲ್ಲಿ ರೈತರಿಗಾಗಿ 12,000 ಮೆಟ್ರಿಕ್ ಟನ್ ಸಾಮರ್ಥ್ಯದ ಶೀತಲ ಗೃಹ ನಿರ್ಮಾಣ ಘಟಕ ಸ್ಥಾಪನೆ.

karnataka budget 2026 gruhalakshmi scheme fund hike kannada news

Arun Gundmi | ಅರುಣ್ ಗುಂಡ್ಮಿ

Arun Gundmi Editor In Chief News Next Kannada. Working in more than 20 Years in Kannada News Media (Print, Digital and News Channels) Kannada News Next Live brings latest news from Karnataka, India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021 More »

Related Stories