ವಾಹನ ಸವಾರರೇ ಗಮನಿಸಿ; ರಾಜ್ಯಾದ್ಯಂತ ‘mVahan’ ಮೊಬೈಲ್ ಆಪ್ ಜಾರಿ
mVahan mobile app launched across the Karnataka: ಬೆಂಗಳೂರು: ಕರ್ನಾಟಕ ರಾಜ್ಯದ ಸಾರಿಗೆ ಇಲಾಖೆಯಲ್ಲಿ ಪಾರದರ್ಶಕತೆ ಮತ್ತು ಸುರಕ್ಷತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ, ವಾಣಿಜ್ಯ ವಾಹನಗಳ ಅರ್ಹತಾ ಪತ್ರ (Fitness Certificate) ವಿತರಣೆಗಾಗಿ Geo-fencing ಆಧಾರಿತ ‘mVahan Fitness’ ಮೊಬೈಲ್ ಅಪ್ಲಿಕೇಶನ್ ಅನ್ನು ರಾಜ್ಯದ ಎಲ್ಲಾ 66 ಆರ್.ಟಿ.ಒ (RTO) ಕಚೇರಿಗಳಲ್ಲಿ ಜಾರಿಗೆ ತರಲಾಗಿದೆ ಎಂದು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರು ತಿಳಿಸಿದ್ದಾರೆ.
ಈ ಹೊಸ ವ್ಯವಸ್ಥೆಯ ಪ್ರಮುಖ ಅಂಶಗಳು ಈ ಕೆಳಗಿನಂತಿವೆ:
* ದೋಷಮುಕ್ತ ವ್ಯವಸ್ಥೆ: ವಾಹನಗಳು ಭೌತಿಕವಾಗಿ ಹಾಜರಿಲ್ಲದೆಯೇ ಫಿಟ್ನೆಸ್ ಪ್ರಮಾಣಪತ್ರ ಪಡೆಯುತ್ತಿದ್ದ ದೋಷಪೂರಿತ ಕ್ರಮಗಳನ್ನು ತಡೆಯಲು ಈ ಆಪ್ ಸಹಕಾರಿಯಾಗಿದೆ.
- ಜಿಯೋ-ಫೆನ್ಸಿಂಗ್ (Geo-fencing): ಪ್ರತಿಯೊಂದು ಆರ್.ಟಿ.ಒ ಕಚೇರಿಯಲ್ಲಿ ವಾಹನಗಳನ್ನು ಪರೀಕ್ಷಿಸಲು ನಿರ್ದಿಷ್ಟ ಸ್ಥಳಗಳನ್ನು ಗುರುತಿಸಿ ಜಿಯೋ-ಫೆನ್ಸಿಂಗ್ ಮಾಡಲಾಗಿದೆ. ನಿಗದಿಪಡಿಸಿದ ಈ ಪ್ರದೇಶದ ಒಳಗೆ ವಾಹನ ಹಾಜರಾದಾಗ ಮಾತ್ರ ಪರೀಕ್ಷಾ ಪ್ರಕ್ರಿಯೆ ಆರಂಭವಾಗುತ್ತದೆ.
-
ಕಡ್ಡಾಯ ಛಾಯಾಚಿತ್ರಗಳು: ಪರೀಕ್ಷೆಯ ಸಮಯದಲ್ಲಿ ವಾಹನದ ವಿವಿಧ 6 ದಿಕ್ಕುಗಳ ಫೋಟೋಗಳನ್ನು ತೆಗೆದು ಆಪ್‌ನಲ್ಲಿ ಅಪ್‌ಲೋಡ್ ಮಾಡುವುದು ಕಡ್ಡಾಯ. ಇವು ಅನುಮೋದನೆಗೊಂಡ ನಂತರವೇ ಪ್ರಮಾಣಪತ್ರ ನೀಡಲಾಗುವುದು.
-
ಮರು ತಪಾಸಣೆ: ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಫಿಟ್ನೆಸ್ ಕೋರಿ ಬರುವ ವಾಹನಗಳಲ್ಲಿ ಕನಿಷ್ಠ 20% ವಾಹನಗಳನ್ನು ಕಡ್ಡಾಯವಾಗಿ ಮರು ತಪಾಸಣೆ ಮಾಡಬೇಕೆಂದು ಸೂಚಿಸಲಾಗಿದೆ.
-
ಸುರಕ್ಷತೆಗೆ ಒತ್ತು: ರಾಜ್ಯದಲ್ಲಿ ಸುಮಾರು 30 ಲಕ್ಷಕ್ಕೂ ಹೆಚ್ಚು ವಾಣಿಜ್ಯ ವಾಹನಗಳಿದ್ದು, ವೈಜ್ಞಾನಿಕ ತಪಾಸಣೆಯ ಮೂಲಕ ರಸ್ತೆ ಸುರಕ್ಷತೆಯನ್ನು ಸುಧಾರಿಸುವುದು ಮತ್ತು ಅಪಘಾತಗಳನ್ನು ನಿಯಂತ್ರಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.
Karnataka Budget 2026 : ಪ್ರಯಾಣಿಕರಿಗೊಂದು ಗುಡ್ ನ್ಯೂಸ್: ಬಸ್ ನಿಲ್ದಾಣಗಳಲ್ಲಿ ಸಿದ್ದರಾಮಯ್ಯ ಬಜೆಟ್ ಲೈವ್ ವೀಕ್ಷಿಸಿ
NIC ಅಭಿವೃದ್ಧಿಪಡಿಸಿರುವ ಈ ತಂತ್ರಜ್ಞಾನವು ಈಗಾಗಲೇ ದೇಶದ ಕೆಲವು ರಾಜ್ಯಗಳಲ್ಲಿ ಯಶಸ್ವಿಯಾಗಿ ಜಾರಿಯಲ್ಲಿದ್ದು, ಈಗ ಕರ್ನಾಟಕದಾದ್ಯಂತ ಅಳವಡಿಸಿಕೊಳ್ಳಲಾಗಿದೆ. ಇದರಿಂದ ಸಾರ್ವಜನಿಕರಿಗೆ ಸಾರಿಗೆ ಇಲಾಖೆಯ ಮೇಲೆ ನಂಬಿಕೆ ಹೆಚ್ಚಲಿದ್ದು, ಭ್ರಷ್ಟಾಚಾರಕ್ಕೆ ಕಡಿವಾಣ ಬೀಳಲಿದೆ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.



