LPG ದರ ಏರಿಕೆ ಭೀತಿ ಬೇಡ ! ಇರಾನ್-ಅಮೆರಿಕ ಮಾತುಕತೆ ವಿಫಲವಾದ್ರೂ ಮೋದಿ ‘ಮಾಸ್ಟರ್‌ಸ್ಟ್ರೋಕ್ ‘

lpg price update : ವಲಸೆ ಕಾರ್ಮಿಕರು ಮತ್ತು ಕಡಿಮೆ ಆದಾಯದ ಕುಟುಂಬಗಳಿಗೆ ತೊಂದರೆಯಾಗದಂತೆ 5 ಕೆಜಿಯ ಸಣ್ಣ ಎಲ್‌ಪಿಜಿ ಸಿಲಿಂಡರ್‌ಗಳ ಪೂರೈಕೆಯನ್ನು ಹೆಚ್ಚಿಸಲಾಗಿದೆ.

lpg price update : ನವದೆಹಲಿ : ಜಾಗತಿಕ ರಾಜಕೀಯದಲ್ಲಿ ಮತ್ತೆ ಸಂಚಲನ ಶುರುವಾಗಿದೆ. ಪಾಕಿಸ್ತಾನದಲ್ಲಿ ನಡೆದ ಇರಾನ್ ಮತ್ತು ಅಮೆರಿಕ ನಡುವಿನ ಕದನ ವಿರಾಮ ಮಾತುಕತೆ ಸಂಪೂರ್ಣವಾಗಿ ವಿಫಲವಾಗಿವೆ. ಆದರೆ ಈ ಬೆಳವಣಿಗೆ ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲ ಮತ್ತು ಎಲ್‌ಪಿಜಿ (LPG) ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಬಹುದು ಎಂಬ ಆತಂಕ ಮನೆಮಾಡಿತ್ತು. ಆದರೆ, ಭಾರತದ ಜನಸಾಮಾನ್ಯರ ಮೇಲೆ ಇದರ ಬಿಸಿ ತಟ್ಟದಂತೆ ಪ್ರಧಾನಿ ಮೋದಿ ಸರ್ಕಾರ ಅತಿದೊಡ್ಡ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ.

ಏನಿದು ಮೋದಿ ಸರ್ಕಾರದ ಪ್ಲಾನ್ ?

ಇಂಧನ ಆಮದಿನ ಮೇಲೆ ಹೆಚ್ಚಿನ ಅವಲಂಬನೆ ಹೊಂದಿರುವ ಭಾರತಕ್ಕೆ ಇಂತಹ ಯುದ್ಧ ಸದೃಶ್ಯ ಪರಿಸ್ಥಿತಿಗಳು ಸವಾಲೊಡ್ಡುತ್ತವೆ. ಆದರೆ ಈ ಬಾರಿ ಕೇಂದ್ರ ಸರ್ಕಾರವು ಜನಸಾಮಾನ್ಯರನ್ನು ರಕ್ಷಿಸಲು ಮೂರು ಪ್ರಮುಖ ಹಂತಗಳಲ್ಲಿ ಕಾರ್ಯಪ್ರವೃತ್ತವಾಗಿದೆ:

5 ಕೆಜಿ ಸಿಲಿಂಡರ್‌ಗಳ ದಾಸ್ತಾನು: ವಲಸೆ ಕಾರ್ಮಿಕರು ಮತ್ತು ಕಡಿಮೆ ಆದಾಯದ ಕುಟುಂಬಗಳಿಗೆ ತೊಂದರೆಯಾಗದಂತೆ 5 ಕೆಜಿಯ ಸಣ್ಣ ಎಲ್‌ಪಿಜಿ ಸಿಲಿಂಡರ್‌ಗಳ ಪೂರೈಕೆಯನ್ನು ಹೆಚ್ಚಿಸಲಾಗಿದೆ.

PNG ಸಂಪರ್ಕ ವಿಸ್ತರಣೆ: ಸಿಲಿಂಡರ್ ಮೇಲಿನ ಅವಲಂಬನೆ ಕಡಿಮೆ ಮಾಡಲು ಮನೆ ಮನೆಗೆ ಪೈಪ್ ಮೂಲಕ ಅನಿಲ (PNG) ಒದಗಿಸುವ ಪ್ರಕ್ರಿಯೆಯನ್ನು ವೇಗಗೊಳಿಸಲಾಗಿದೆ.

ದೇಶೀಯ ಉತ್ಪಾದನೆಗೆ ಒತ್ತು: ಹಿಂದೆ ನಾವು ಆಮದನ್ನೇ ನೆಚ್ಚಿಕೊಂಡಿದ್ದೆವು. ಆದರೆ ಈಗ ಭಾರತವು ತನ್ನ ಒಟ್ಟು ಬೇಡಿಕೆಯ ಶೇ. 60ರಷ್ಟು ಎಲ್‌ಪಿಜಿಯನ್ನು ದೇಶದೊಳಗೇ ಉತ್ಪಾದಿಸುತ್ತಿದೆ. ಇದರಿಂದ ಅಂತರಾಷ್ಟ್ರೀಯ ಬಿಕ್ಕಟ್ಟು ಉಂಟಾದ್ರೂ ನಮಗೆ ತೊಂದರೆ ಕಡಿಮೆ.

Also Read : 14 ಲಕ್ಷ ಬಿಪಿಎಲ್‌ ಕಾರ್ಡು ರದ್ದು…! ಬಿಪಿಎಲ್‌ನಿಂದ ಎಪಿಎಲ್‌ ಆಗಿ ಪರಿವರ್ತನೆ

ತೈಲ ಕಂಪನಿಗಳಿಗೆ ಹೈ ಅಲರ್ಟ್

ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಂಪನಿಗಳು ರಾಜ್ಯ ಸರ್ಕಾರಗಳೊಂದಿಗೆ ನಿರಂತರ ಸಂಪರ್ಕದಲ್ಲಿವೆ. ಭಾರತದ ತೈಲ ಶುದ್ಧೀಕರಣ ಘಟಕಗಳು (Refineries) ಈಗ ಗರಿಷ್ಠ ಸಾಮರ್ಥ್ಯದಲ್ಲಿ ಕೆಲಸ ಮಾಡುತ್ತಿದ್ದು, ದೇಶದಲ್ಲಿ ಸಾಕಷ್ಟು ಪ್ರಮಾಣದ ಕಚ್ಚಾ ತೈಲ ಸಂಗ್ರಹವಿದೆ ಎಂದು ಸರ್ಕಾರ ಭರವಸೆ ನೀಡಿದೆ.

Also Read : ಗುಡ್ ನ್ಯೂಸ್: ಗ್ಯಾಸ್‌ ಚಿಂತೆ ಬಿಡಿ, ಕೇವಲ 5 ನಿಮಿಷದಲ್ಲಿ ಸಿಗಲಿದೆ 5 ಕೆಜಿ ಎಲ್‌ಪಿಜಿ ಸಿಲಿಂಡರ್ ! ಹೇಗೆ ಗೊತ್ತಾ?

ಸಾಮಾನ್ಯ ಜನರ ಮೇಲೇನು ಪರಿಣಾಮ ?

ಸದ್ಯದ ಪರಿಸ್ಥಿತಿಯಲ್ಲಿ ಎಲ್‌ಪಿಜಿ ದರದಲ್ಲಿ ಭಾರಿ ಏರಿಕೆಯಾಗದಂತೆ ತಡೆಯಲು ಸರ್ಕಾರ ‘ಬಫರ್ ಸ್ಟಾಕ್’ ಬಳಸಿ ಕೊಳ್ಳುತ್ತಿದೆ. ಇದರಿಂದಾಗಿ ಗೃಹಿಣಿಯರಿಗೆ ಮತ್ತು ಸಣ್ಣ ಉದ್ಯಮಿಗಳಿಗೆ ಇಂಧನ ಪೂರೈಕೆಯಲ್ಲಿ ಯಾವುದೇ ವ್ಯತ್ಯಯ ಉಂಟಾಗುವುದಿಲ್ಲ. “ಸಂಕಷ್ಟವನ್ನೇ ಅವಕಾಶವನ್ನಾಗಿ ಬಳಸಿಕೊಳ್ಳುತ್ತಿರುವ ಭಾರತ, ಇಂಧನ ಭದ್ರತೆಯಲ್ಲಿ ಸ್ವಾವಲಂಬನೆಯತ್ತ ದಿಟ್ಟ ಹೆಜ್ಜೆ ಇಡುತ್ತಿದೆ” ಎಂದು ಆರ್ಥಿಕ ತಜ್ಞರು ವಿಶ್ಲೇಷಿಸುತ್ತಿದ್ದಾರೆ.

ಯುದ್ಧದ ಕಾರ್ಮೋಡಗಳ ನಡುವೆಯೂ ಭಾರತದ ಅಡುಗೆ ಮನೆಗಳಲ್ಲಿ ಗ್ಯಾಸ್ ಪೂರೈಕೆ ಸ್ಥಿರವಾಗಿರಲಿದೆ. ಇದು ಮೋದಿ ಸರ್ಕಾರದ ದೂರದೃಷ್ಟಿಯ ಫಲವಾಗಿದೆ.

lpg price update modi govt steps iran us talks fail domestic production kannada News

 

Arun Gundmi | ಅರುಣ್ ಗುಂಡ್ಮಿ

Arun Gundmi Editor In Chief News Next Kannada. Working in more than 20 Years in Kannada News Media (Print, Digital and News Channels) Kannada News Next Live brings latest news from Karnataka, India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021 More »

Related Stories