
ಹೊಸದಾಗಿ ಪಡಿತರ ಚೀಟಿಗೆ (Ration Card) ಅರ್ಜಿ ಸಲ್ಲಿಸುವವರಿಗೆ ಕರ್ನಾಟಕ ಸರಕಾರ ಅವಕಾಶ ಕಲ್ಪಿಸಿದೆ. ಹೊಸ ರೇಷನ್ ಕಾರ್ಡ್ ತಿದ್ದುಪಡಿಯನ್ನು ಕೂಡ ಮಾಡಿಸಬಹುದಾಗಿದೆ. ಹಾಗಾದ್ರೆ ಹೊಸ ಕಾರ್ಡ್‌ಗೆ ಅರ್ಜಿ ಸಲ್ಲಿಸುವುದು ಹೇಗೆ ಅನ್ನೋ ಸಂಪೂರ್ಣ ಮಾಹಿತಿ ಇಲ್ಲಿದೆ.
Ration Card : ರೇಷನ್ ಕಾರ್ಡ್ ತಿದ್ದುಪಡಿ
ಕಳೆದ ಕೆಲವು ತಿಂಗಳಿನಿಂದಲೂ ಹೊಸ ಪಡಿತರ ಚೀಟಿ ಹಾಗೂ ತಿದ್ದುಪಡಿಗೆ ಸರಕಾರ ಅವಕಾಶ ನೀಡುತ್ತಿರಲಿಲ್ಲ. ಆದ್ರೀಗ ತಿದ್ದುಪಡಿಗೆ ಅವಕಾಶ ಕಲ್ಪಿಸಿದೆ.
ಸದಸ್ಯರ ಸೇರ್ಪಡೆ: ಕುಟುಂಬಕ್ಕೆ ಹೊಸ ಸದಸ್ಯರನ್ನು ಸೇರಿಸಬಹುದು (ಉದಾ: ನವಜಾತ ಶಿಶು, ವಿವಾಹಿತ ಸದಸ್ಯರು).
ಹೆಸರು ತೆಗೆದುಹಾಕುವುದು: ಕುಟುಂಬದಲ್ಲಿ ಮೃತಪಟ್ಟವರ ಅಥವಾ ಬೇರೆ ಕುಟುಂಬಕ್ಕೆ ಸೇರ್ಪಡೆಯಾದವರ ಹೆಸರನ್ನು ತೆಗೆದುಹಾಕಬಹುದು.
ಹೆಸರು ತಿದ್ದುಪಡಿ: ಪಡಿತರ ಚೀಟಿಯಲ್ಲಿ ಕುಟುಂಬದ ಸದಸ್ಯರ ಹೆಸರು ತಪ್ಪಾಗಿದ್ದಲ್ಲಿ ಸರಿಪಡಿಸಬಹುದು.
ವಿಳಾಸ ಬದಲಾವಣೆ: ವಿಳಾಸ ತಪ್ಪಾಗಿದ್ದರೆ ಅಥವಾ ಬದಲಾಗಿದ್ದರೆ ಅದನ್ನು ನವೀಕರಿಸಬಹುದು.
ಫೋಟೋ ಮತ್ತು ಬಯೋಮೆಟ್ರಿಕ್ ಅಪ್‌ಡೇಟ್.
ಮನೆ ಯಜಮಾನರ ಬದಲಾವಣೆ.
ಅಂಗಡಿ ಸಂಖ್ಯೆ ಬದಲಾವಣೆ.
Ration Card : ತಿದ್ದುಪಡಿಗಾಗಿ ಅರ್ಜಿ ಸಲ್ಲಿಸುವುದು ಹೇಗೆ ?
ಈ ಯೋಜನೆಯಡಿಯಲ್ಲಿ ಕರ್ನಾಟಕ ಒನ್ , ಗ್ರಾಮ ಒನ್ ಬೆಂಗಳೂರು ಒನ್ (Bangalore One) ಅಥವಾ ಸರಕಾರ ಮಾನ್ಯತೆ ನೀಡಿದ ಆನ್‌ಲೈನ್ ಕೇಂದ್ರಗಳಿಗೆ ಭೇಟಿ ನೀಡಿ ಅಗತ್ಯ ದಾಖಲೆ ಸಲ್ಲಿಸಿ ಅರ್ಜಿ ಸಲ್ಲಿಸಬಹುದು.
ಆರಂಭ ದಿನಾಂಕ: ಜುಲೈ 08, 2025
ಕೊನೆಯ ದಿನಾಂಕ: ಜುಲೈ 31, 2025 (ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ)
ಆಹಾರ ಇಲಾಖೆಯು ಇನ್ಮುಂದೆ ಪ್ರತಿ ತಿಂಗಳು ತಿದ್ದುಪಡಿಗೆ ಅವಕಾಶ ಕಲ್ಪಿಸುವುದಾಗಿ ಹೇಳಿದೆ. ಇದರಿಂದಾಗಿ ಕೊನೆಯ ದಿನಾಂಕದ ನಂತರವೂ ಕೂಡ ನಿಮಗೆ ಅವಕಾಶ ಸಿಗಬಹುದು.
Also Read : ಕಾರ್ಕಳ ಪರಶುರಾಮನ ಮೂರ್ತಿ ಹಿತ್ತಾಳೆ, ಫೈಬರ್ ಅಂದವರಿಗೆ ಹಿನ್ನೆಡೆ : ಪೊಲೀಸರಿಂದ ಚಾರ್ಜ್‌ಶೀಟ್ ಸಲ್ಲಿಕೆ
ಪಡಿತರ ಚೀಟಿ ತಿದ್ದುಪಡಿಗೆ ಅಗತ್ಯ ದಾಖಲೆಗಳು :
ಕುಟುಂಬ ಸದಸ್ಯರ ಆಧಾರ್ ಕಾರ್ಡ್.
ಕುಟುಂಬದ ಸದಸ್ಯರ ಜಾತಿ ಮತ್ತು ಆದಾಯ ಪ್ರಮಾಣಪತ್ರ (ಅಗತ್ಯವಿದ್ದರೆ).
ಮಗು ಸೇರ್ಪಡೆಗೆ: ಜನನ ಪ್ರಮಾಣಪತ್ರ, ಪೋಷಕರ ಆಧಾರ್ ಕಾರ್ಡ್.
ವಿವಾಹಿತ ಸದಸ್ಯರ ಸೇರ್ಪಡೆಗೆ: ವಿವಾಹ ನೋಂದಣಿ ಪ್ರಮಾಣಪತ್ರ, ಹಿಂದಿನ ಪಡಿತರ ಚೀಟಿ ಡಿಲೀಟ್ ಮಾಡಿದ ಬಗ್ಗೆ ಪ್ರಮಾಣಪತ್ರ, ಆಧಾರ್ ಕಾರ್ಡ್.
ಹೊಸ ರೇಷನ್ ಕಾರ್ಡ್ (New Ration Card )
ಪಡಿತರ ಚೀಟಿಯನ್ನು ಹೊಸದಾಗಿ ಪಡೆಯಲು ಸರಕಾರ ಆನ್‌ಲೈನ್ ಮೂಲಕ ಅರಜಿ ಸಲ್ಲಿಸಲು ಸೂಚಿಸಿದೆ. ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಮೂಲಕ ಅರ್ಜಿ ಸಲ್ಲಿಸಬಹುದು.
ಹೊಸ ರೇಷನ್ ಕಾರ್ಡ್‌ಗೆ ಅರ್ಜಿ ಸಲ್ಲಿಸಲು ಹೇಗೆ ?
- ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ: ahara.kar.nic.in
- ಇ-ಪಡಿತರ ಚೀಟಿ (e-Ration Card) ಮೇಲೆ ಕ್ಲಿಕ್ ಮಾಡಿ.
- ಹೊಸ ಪಡಿತರ ಚೀಟಿ ಮೇಲೆ ಕ್ಲಿಕ್ ಮಾಡಿ.
- ಭರ್ತಿ ಮಾಡಿದ ಅರ್ಜಿಯನ್ನು, ದಾಖಲೆಗಳ ಜೊತೆಗೆ ಅಪ್‌ಲೋಡ್ ಮಾಡಿ.
ಅರ್ಜಿಯನ್ನು ಸಲ್ಲಿಸಿದ ನಂತರ ನಿಮಗೆ ಒಂದು ಉಲ್ಲೇಖ ಸಂಖ್ಯೆ (Reference Number) ಸಿಗುತ್ತದೆ. ಇದನ್ನು ಬಳಸಿಕೊಂಡು ನಿಮ್ಮ ಅರ್ಜಿಯ ಸ್ಥಿತಿಯನ್ನು ಟ್ರ್ಯಾಕ್ ಮಾಡಬಹುದು.
ನಿಮ್ಮ ಅರ್ಜಿಯನ್ನು ಪರಿಶೀಲಿಸಲಾಗುತ್ತದೆ ಮತ್ತು ನಂತರ ಅನುಮೋದಿಸಲಾಗುತ್ತದೆ.
ಹೊಸ ರೇಷನ್ ಕಾರ್ಡ್‌ಗೆ ಅಗತ್ಯವಿರುವ ದಾಖಲೆಗಳು:
- ಕುಟುಂಬದ ಎಲ್ಲಾ ಸದಸ್ಯರ ಆಧಾರ್ ಕಾರ್ಡ್.
- ಕುಟುಂಬದ ಮುಖ್ಯಸ್ಥರ ಆದಾಯ ಪ್ರಮಾಣಪತ್ರ.
- ಆರು ವರ್ಷದ ಒಳಗಿನ ಮಕ್ಕಳ ಜನನ ಪ್ರಮಾಣಪತ್ರ (ಮಕ್ಕಳಿದ್ದರೆ).
- ವಾಸಸ್ಥಳದ ಪುರಾವೆ (ಉದಾ: ವಿದ್ಯುತ್ ಬಿಲ್, ದೂರವಾಣಿ ಬಿಲ್, ಎಲ್‌ಪಿಜಿ ರಶೀದಿ, ಬ್ಯಾಂಕ್ ಪಾಸ್‌ಬುಕ್, ಬಾಡಿಗೆ ಒಪ್ಪಂದ).
- ಕುಟುಂಬದ ಮುಖ್ಯಸ್ಥರ ಪಾಸ್‌ಪೋರ್ಟ್ ಗಾತ್ರದ ಭಾವಚಿತ್ರ.
- ಬ್ಯಾಂಕ್ ಪಾಸ್‌ಬುಕ್‌ನ ಮೊದಲ ಪುಟದ ನಕಲು.
- ಯಾವುದಾದರೂ ಹಳೆಯ ರೇಷನ್ ಕಾರ್ಡ್ ರದ್ದುಪಡಿಸಿದ್ದರೆ ಅದರ ವಿವರ.
- ಕುಟುಂಬದಲ್ಲಿರುವ ಎಲ್ಲಾ ಸದಸ್ಯರ ಸಹಿ.
ಪ್ರಮುಖ ಸೂಚನೆ:
ಈಗಾಗಲೇ ಹಳೆಯ ರೇಷನ್ ಕಾರ್ಡ್‌ನಲ್ಲಿ ನಿಮ್ಮ ಹೆಸರು ಡಿಲೀಟ್ ಆಗಿದ್ದರೆ ಮಾತ್ರ ಹೊಸ ಕಾರ್ಡ್‌ಗೆ ಅರ್ಜಿ ಸಲ್ಲಿಸಬಹುದು.
ಎಲ್ಲಾ ಕುಟುಂಬ ಸದಸ್ಯರ e-KYC ಅನ್ನು ಜೂನ್ 30, 2025 ರೊಳಗೆ ಪೂರ್ಣಗೊಳಿಸಬೇಕು ಎಂದು ಕೇಂದ್ರ ಸರ್ಕಾರ ಸೂಚಿಸಿದೆ. ಆಧಾರ್ ಕಾರ್ಡ್ ಬಳಸಿಕೊಂಡು ಇಎಕೆವೈಸಿ ಮಾಡಿಸುವುದು ಕಡ್ಡಾಯ
ಕರ್ನಾಟಕ ಸರಕಾರ ಅಧಿಕೃತ ವೆಬ್‌ಸೈಟ್ ahara.kar.nic.inಗೆ ಭೇಟಿ ನೀಡಬಹುದು.
ನಿಮ್ಮ ಅಗತ್ಯಕ್ಕೆ ಅನುಗುಣವಾಗಿ ಯಾವ ಪ್ರಕ್ರಿಯೆ (ತಿದ್ದುಪಡಿ ಅಥವಾ ಹೊಸ ಅರ್ಜಿ) ನಿಮಗೆ ಸೂಕ್ತ ಎಂದು ನಿರ್ಧರಿಸಿಕೊಂಡು ಮುಂದುವರಿಯಬಹುದು.
Also Read : ಪಿಎಂ ಕಿಸಾನ್ ಸಮ್ಮಾನ ಯೋಜನೆ : 20ನೇ ಕಂತಿನ ಹಣ ಬಿಡುಗಡೆ, ಚೆಕ್ ಮಾಡುವುದು ಹೇಗೆ ?



