ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ಗ್ರಾಹಕರಿಗೆ ಶಾಕ್ : ಸೇವಾ ಶುಲ್ಕ ದರದಲ್ಲಿ ಮತ್ತೆ ಏರಿಕೆ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರಿಗೆ ಬಿಗ್ ಶಾಕ್ ನೀಡಿದೆ. ಎಟಿಎಂ ಮತ್ತು ಆಟೋಮೇಟೆಡ್ ಡೆಪಾಸಿಟ್ ಕಮ್ ವಿತ್‌ಡ್ರಾವಲ್ ಮಷಿನ್ ಸೇವಾ ಶುಲ್ಕಗಳನ್ನು ಪರಿಷ್ಕರಣೆ ಮಾಡಿದ್ದು ಗ್ರಾಹಕರ ಜೇಬು ಸುಡುವುದು ಪಕ್ಕಾ ಎನ್ನಲಾಗಿದೆ. 2025ರ ಡಿಸೆಂಬರ್ 1 ರಿಂದಲೇ ಜಾರಿಗೆ ಬಂದಿದ್ದು, 2025ರ ಫೆಬ್ರವರಿಯ ನಂತರ ಎಸ್‌ಬಿಐ ಮಾಡುತ್ತಿರುವ ಮೊದಲ ಶುಲ್ಕ ಹೆಚ್ಚಳ ಇದಾಗಿದೆ.
ಎಸ್‌ಬಿಐ ಸೇವಾ ಶುಲ್ಕ ಪರಿಷ್ಕರಣೆಯ ಅನುಸಾರ, ಉಚಿತ ಮಿತಿಯ ನಂತರ ಇತರೆ ಬ್ಯಾಂಕ್‌ಗಳ ಎಟಿಎಂನಲ್ಲಿ ಹಣ ಬಿಡಿಸಿದರೆ ಪ್ರತಿ ವ್ಯವಹಾರಕ್ಕೆ 23 ರೂಪಾಯಿ ಮತ್ತು ಜಿಎಸ್‌ಟಿ ಪಾವತಿಸಬೇಕಿದೆ. ಈ ಮೊದಲು ಈ ಶುಲ್ಕ 21 ರೂ. ಮತ್ತು ಜಿಎಸ್‌ಟಿ ಇತ್ತು. ಬ್ಯಾಲೆನ್ಸ್ ಪರಿಶೀಲನೆ ಮತ್ತು ಮಿನಿ ಸ್ಟೇಟ್‌ಮೆಂಟ್ ಪಡೆಯುವ ಶುಲ್ಕವನ್ನೂ ಏರಿಕೆ ಮಾಡಲಾಗಿದ್ದು,. ಈ ಹಿಂದಿನ 10 ರೂ. ನಿಂದ 11 ರೂ. + ಜಿಎಸ್‌ಟಿಗೆ ಮಾಡಲಾಗಿದೆ.
ಇದನ್ನೂ ಓದಿ: ಪಿಎಂ ಕಿಸಾನ್ 22ನೇ ಕಂತು: 2,000 ಪಡೆಯಲು ಹೀಗೆ ಮಾಡುವುದು ಕಡ್ಡಾಯ
ಸಾಮಾನ್ಯ ಉಳಿತಾಯ ಖಾತೆದಾರರಿಗೆ ನೀಡಲಾದ ಉಚಿತ ವಹಿವಾಟುಗಳ ಸಂಖ್ಯೆಯಲ್ಲಿ ಯಾವುದೇ ಬದಲಾವಣೆ ಉಂಟಾಗಿಲ್ಲ. 5 ಬಾರಿ ಮಿತಿ ಮೀರಿದ ನಂತರವಷ್ಟೇ ಹೊಸ ದರಗಳು ಅನ್ವಯವಾಗಲಿವೆ. ಎಟಿಎಂ ಸೇವೆಗಳಿಗೆ ಸಂಬಂಧಿಸಿದ ಇಂಟರ್‌ಚೇಂಜ್ ಶುಲ್ಕದಲ್ಲಿ ಏರಿಕೆಯಾಗಿರುವ ಕಾರಣ ಸೇವಾದರ ಪರಿಷ್ಕರಣೆ ಮಾಡಿರುವುದಾಗಿ ಬ್ಯಾಂಕ್ ತಿಳಿಸಿದೆ.



