ಮಲಯಾಳಂ ನಲ್ಲಿ ಕನ್ನಡದ ಹುಡುಗಿಯ ‘ಮಾಯಾ’ ಮಿಂಚು

0

ನ್ನಡದ ಅದೆಷ್ಟೋ ಪ್ರತಿಭೆಗಳು ಪರಭಾಷಾ ಚಿತ್ರಗಳಲ್ಲಿ ಮಿಂಚುವುದು ಹೊಸದೇನಲ್ಲಾ. ಅದೆಷ್ಟೋ ಮಂದಿ ಪ್ರತಿಭಾವಂತರು ಇತರ ಭಾಷೆಗಳಲ್ಲಿ ಮಿಂಚು ಹರಿಸುತ್ತಿದ್ದಾರೆ. ಹೀಗೆ ಕೊಡಗಿನ ಕುವರಿ ಮಲಯಾಲಂ ಆಲ್ಬಮ್ ಸಾಂಗ್ ನಲ್ಲಿ ಮಿಂಚು ಹರಿಸುತ್ತಿದ್ದಾರೆ.

ಕಾಫಿನಾಡಿನ ಹುಡುಗಿ ಸಹನಾ ಹುಟ್ಟಿದ್ದು ಕೊಡಗಿನಲ್ಲಿ. ನೆಲೆಸಿದ್ದ ಹಾಸನದಲ್ಲಿ. ಸದ್ಯ ಬೆಂಗಳೂರಿನ ಪ್ರತಿತಿಷ್ಠಿತ ಐಟಿ ಕಂಪೆನಿಯೊಂದರಲ್ಲಿ ಬ್ಯುಸಿನೆಸ್ ಡೆವಲಪ್ ಮೆಂಟ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನಟನೆಯ ಬಗ್ಗೆ ಆಸಕ್ತಿ ಹೊಂದಿದ್ದ ಸಹನಾ ಕನ್ನಡ ಚಿತ್ರಗಳಲ್ಲಿ ಅವಕಾಶಕ್ಕಾಗಿ ಕಂಡ ಕಂಡವರಲ್ಲಿ ಮೊರೆಯಿಟ್ಟಿದ್ರು, ಆದರೆ ಅವಕಾಶಗಳೆಲ್ಲಾ ತಿರಸ್ಕಾರಗೊಂಡಾಗ ಬೇಸರಿಸದೆ ತನ್ನ ಪ್ರಯತ್ನವನ್ನು ಮುಂದುವರಿಸಿದ್ದಾರೆ. ಕೊನೆಗೆ ಮಲಯಾಳಂನ ಮೇಕರ್ಸ್ ಕನ್ನಡದ ಪ್ರತಿಭೆಗೆ ಒಂದೊಳ್ಳೆ ಅವಕಾಶ ಕಲ್ಪಿಸಿದೆ.

ಸದ್ಯ ‘ಮಾಯ’ ಅನ್ನೋ ಮಲಯಾಳಂ ಆಲ್ಬಂಬ್ ಸಾಂಗ್ ನಲ್ಲಿ  ಸಹನಾ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.  ಆಲ್ಬಮ್ ನಲ್ಲಿರೋ ಹಾಡುಗಳು ಸಖತ್ ಸದ್ದು ಮಾಡುತ್ತಿದೆ. ಕನ್ನಡ ಸಿನಿಮಾಗಳಲ್ಲಿ ನಟಿಸೋ ಅಭಿಲಾಷೆಯನ್ನು ಹೊಂದಿರೋ ಸಹನಾ ಅವರಿಗೆ ಅವಕಾಶಗಳು ಲಭಿಸಬೇಕಿದೆ.

ಕನ್ನಡ ನಾಡಲ್ಲಿ ಪ್ರತಿಭಾನ್ವಿತ ಕಲಾವಿದರಿದ್ದರೂ ಕೂಡ ಕನ್ನಡ ಚಿತ್ರಗಳ ನಿರ್ಮಾಪಕರು, ನಿರ್ದೇಶಕರು ಪರಭಾಷಾ ನಟಿಯರಿಗೆ ಮಣೆ ಹಾಕುತ್ತಿದ್ದಾರೆ. ಹೀಗಾದ್ರೆ ಅದೆಷ್ಟೋ ಪ್ರತಿಭೆಗಳು ಕಮರಿ ಹೋಗುತ್ತವೆ, ಇಲ್ಲಾ ಬೇರೆ ಭಾಷೆಗಳತ್ತ ಮುಖ ಮಾಡುತ್ತಾರೆ. ತನ್ನ ಪ್ರತಿಭೆಯನ್ನು ಸಾಭೀತು ಮಾಡಿರೋ ಸಹನಾ ಅವರು ಕನ್ನಡ ಚಿತ್ರಗಳಲ್ಲಿ ಮಿಂಚುವಂತಾಗಲಿ ಅನ್ನೋದೆ ನಮ್ಮ ಆಶಯ.

Leave A Reply

Your email address will not be published.