Bedtime Yoga Benefits : ನಿದ್ರೆಯ ಕೊರತೆ ಕಾಡುತ್ತಿದೆಯೇ? ಈ ಯೋಗಾಸನಗಳನ್ನು ಟ್ರೈ ಮಾಡಿ!

ನಿದ್ರೆಯ ಸಮಸ್ಯೆ (Sleep Issues) ಯುವಕರಿಂದ ಹಿಡಿದು ಎಲ್ಲಾ ವಯೋಮಾನದವರಿಗೂ ಸಾಮಾನ್ಯವಾಗಿದೆ. ನಿದ್ರಾಹೀನತೆಯಿಂದ ಅನೇಕ ಆರೋಗ್ಯದ ತೊಂದರೆಗಳು(Health Problems) ಪ್ರಾರಂಭವಾಗುತ್ತದೆ. ನಿದ್ರೆ ಮಾಡುವ ಮೊದಲು ಮಾಡುವ ಯೋಗಾಸನಗಳು(Bedtime Yoga Benefits) ನಿಮ್ಮ ನಿದ್ರಾಹೀನತೆಗೆ ಉತ್ತಮ ಪರಿಹಾರವಾಗಬಹುದು. ಯೋಗವು ಮನಸ್ಸು ಮತ್ತು ದೇಹವನ್ನು ಉಸಿರಾಟ, ದೈಹಿಕ ಭಂಗಿ, ಮತ್ತು ಧ್ಯಾನದ ಮೂಲಕ ಸಂಪರ್ಕಿಸುವ ಸಾಧನವಾಗಿದೆ. ಅಧ್ಯಯನದ ಪ್ರಕಾರ ಯೋಗವು ನಿದ್ರೆಯನ್ನು ಹೆಚ್ಚಿಸಲು ಸಹಾಯ ಮಾಡಬಲ್ಲದು. ಇದು ಚಿಂತೆಯನ್ನು ದೂರಮಾಡಿ, ಮನಸ್ಸನ್ನು ಶಾಂತಗೊಳಿಸಿ ಉತ್ತಮ ನಿದ್ರೆ ನಿಮ್ಮದಾಗಿಸುತ್ತದೆ.

ಯೋಗ ಮತ್ತು ನಿದ್ರೆ :
ಯೋಗವು ಭಾರತದ ಪುರಾತನ ಅಭ್ಯಾಸವಾಗಿದೆ. ಇದು ದೇಹ, ಉಸಿರು ಮತ್ತು ಮನಸ್ಸುಗಳನ್ನು ಒಂದಕ್ಕೊಂದು ಸಂಪರ್ಕಿಸುತ್ತದೆ. ಬೆಡ್‌ಟೈಮ್‌ ಯೋಗವು ಒತ್ತಡ, ಆತಂಕ ಮತ್ತು ನಿದ್ರಾ ಸಮಸ್ಯೆಗಳನ್ನು ಎದುರಿಸಲು ಪ್ರಯೋಜನಕಾರಿಯಾಗಿದೆ. ಗಾಢ ನಿದ್ರೆಗೆ ಸಹಾಯಮಾಡುವ ಕೆಲವು ಆಸನಗಳ ಅಭ್ಯಾಸವು ಮನಸ್ಸಿಗೆ ವಿಶ್ರಾಂತಿ ನೀಡಲು ಪ್ರೇರೇಪಿಸುತ್ತದೆ.

ಉತ್ತಮ ನಿದ್ರೆಗೆ ಸಹಾಯಮಾಡುವ ಯೋಗಾಸನಗಳು:

ಪ್ರಾಣಾಯಾಮ :
ದಿನದ ಆಯಾಸ, ಗೊಂದಲಗಳನ್ನು ದೂರಮಾಡಲು ಮಲಗುವ ಮೊದಲು ಪ್ರಾಣಾಯಾಮ ಮಾಡುವುದನ್ನು ರೂಢಿಸಿಕೊಳ್ಳಿ. ಕ್ರಮಬದ್ಧವಾದ ಉಸಿರಾಟವು ದೇಹಕ್ಕೆ ಅಗತ್ಯವಿರುವ ವಿಶ್ರಾಂತಿ ನೀಡುವ ನರಗಳನ್ನು ಸಕ್ರೀಯಗೊಳಿಸುತ್ತದೆ. ಒತ್ತಡ ಮತ್ತು ಆತಂಕವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದರಿಂದ ನಿದ್ರಾಹೀನತೆ ನಿವಾರಣೆಯಾಗುತ್ತದೆ.

ಇದನ್ನೂ ಓದಿ : Grow Best Herbs : ನಿಮ್ಮ ಕೈತೋಟದಲ್ಲಿ ಸುಲಭವಾಗಿ ಈ ಗಿಡಮೂಲಿಕೆಗಳನ್ನು ಬೆಳೆಯಬಹುದು! ಯಾವುದು ಆ ಗಿಡಮೂಲಿಕೆಗಳು ಗೊತ್ತಾ?

ಆನಂದ ಬಾಲಾಸನ :
ಈ ಯೋಗಾಸನವು ಮನಸ್ಸು ಮತ್ತು ದೇಹಕ್ಕೆ ಸಂಬಂಧಿಸಿದ ವ್ಯಾಯಾಮವಾಗಿದೆ. ಇದು ಉಸಿರಾಟ ಮತ್ತು ಶಕ್ತಿಯ ಮೇಲೆ ಮನಸ್ಸು ಕೇಂದ್ರೀಕರಿಸುವಂತೆ ಮಾಡುತ್ತದೆ. ಮಾನಸಿಕ ಆರೋಗ್ಯವನ್ನು ಸುಧಾರಿಸುವುದು ಇದರ ಗುರಿಯಾಗಿದೆ.

ವಿಪರೀತ ಕರಣಿ ಆಸನ:
ಮಲಗುವ ಮುನ್ನ ಮಾಡುವ ಈ ಯೋಗಾಸನವು ನಿಮ್ಮ ಕತ್ತಿನ ಹಿಂಭಾಗವನ್ನು ಸ್ಟ್ರೆಚ್‌ ಮಾಡಲು ಸಹಾಯ ಮಾಡುತ್ತದೆ. ಇದು ಸೌಮ್ಯವಾದ ಆತಂಕ, ಸಂಧಿವಾತ, ಜೀರ್ಣ ಸಮಸ್ಯೆ, ತಲೆನೋವು, ಅಧಿಕ ರಕ್ತದೊತ್ತಡ, ನಿದ್ರಾಹೀನತೆ, ಮೈಗ್ರೇನ್‌, ಉಸಿರಾಟದ ತೊಂದರೆಗಳು, ಖಿನ್ನತೆಯ ಲಕ್ಷಣಗಳು ಮತ್ತು ಋತುಬಂಧದ ಲಕ್ಷಣಗಳನ್ನು ಗುಣಪಡಿಸುತ್ತದೆ.

ಶವಾಸನ :
ಇದು ನರಮಂಡಲವನ್ನು ಶಾಂತಗೊಳಿಸುತ್ತದೆ. ಜೀರ್ಣ ಶಕ್ತಿ ಮತ್ತು ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಮನಸ್ಸನ್ನು ಶಾಂತಗೊಳಿಸುವುದರಿಂದ ಒತ್ತಡವನ್ನು ನಿವಾರಿಸುತ್ತದೆ. ತಲೆನೋವು ಮತ್ತು ಆತಂಕವನ್ನು ಕಡಿಮೆ ಮಾಡುತ್ತದೆ. ಈ ಯೋಗಾಭ್ಯಾಸವು ಮನಸ್ಸನ್ನು ಜಾಗೃತಗೊಳಿಸಲು ಸಹಾಯಮಾಡುತ್ತದೆ.

ಇದನ್ನೂ ಓದಿ : 20 Minutes Yoga : ಈ ಯೋಗಾಸನಗಳನ್ನು ಮಾಡಲು ಸಾಕು ಬರೀ ಇಪ್ಪತ್ತೇ ನಿಮಿಷ !!

(Bedtime Yoga Benefits try this for better sleep)

Comments are closed.