Gilli Nata Bigg Boss Win: ಗಿಲ್ಲಿ ನಟ ಬಿಗ್‌ ಬಾಸ್‌ ಗೆದ್ರೆ ಈ ಸೇವೆ ಫ್ರೀ!

Bigg Boss 12: ‘ಬಿಗ್ ಬಾಸ್ ಕನ್ನಡ ಸೀಸನ್ 12’ರ ಅಂತಿಮ ಘಟ್ಟದ ರೋಚಕತೆ ಈಗ ಬೀದಿಗಳಿಗೂ ಹಬ್ಬಿದೆ. ಅದರಲ್ಲೂ ಪ್ರಬಲ ಸ್ಪರ್ಧಿ ಗಿಲ್ಲಿ ನಟ ಅವರ ಪರವಾಗಿ ಅಭಿಮಾನಿಗಳು ನಡೆಸುತ್ತಿರುವ ಪ್ರಚಾರ ಈಗ ಎಲ್ಲರ ಗಮನ ಸೆಳೆಯುತ್ತಿದೆ. ಗಿಲ್ಲಿ ಪರವಾಗಿ ಮತ ಯಾಚಿಸಲು ಅವರ ಬೆಂಬಲಿಗರು ವಿನೂತನ ಹಾದಿ ತುಳಿದಿದ್ದಾರೆ.

ಆಟೋ ಚಾಲಕರಿಂದ ಬಂಪರ್ ಆಫರ್!

ಗಿಲ್ಲಿ ನಟ ಬಿಗ್ ಬಾಸ್ ಟ್ರೋಫಿ ಗೆಲ್ಲಲಿ ಎಂದು ಬೆಂಗಳೂರಿನ ಕೆಲ ಆಟೋ ಚಾಲಕರು ವಿಶೇಷ ಬೆಂಬಲ ಘೋಷಿಸಿದ್ದಾರೆ. “ಒಂದೊಮ್ಮೆ ಗಿಲ್ಲಿ ನಟ ಬಿಗ್ ಬಾಸ್ ವಿಜೇತರಾಗಿ ಹೊರಹೊಮ್ಮಿದರೆ, ಆ ದಿನ ಬೆಳಿಗ್ಗೆ 5 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಸಾರ್ವಜನಿಕರಿಗೆ ಉಚಿತ ಆಟೋ ಪ್ರಯಾಣ ಸೇವೆ ನೀಡಲಾಗುವುದು” ಎಂದು ಚಾಲಕರು ಘೋಷಣೆ ಮಾಡಿದ್ದಾರೆ. ಈ ಕುರಿತ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

ರಾಜಕೀಯ ನಾಯಕರ ಬೆಂಬಲ

ಕೇವಲ ಸಾಮಾನ್ಯ ಜನ ಅಷ್ಟೇ ಅಲ್ಲದೆ, ಗಿಲ್ಲಿ ಪರವಾಗಿ ರಾಜಕೀಯ ನಾಯಕರು ಕೂಡ ಧ್ವನಿ ಎತ್ತಿದ್ದಾರೆ. ಇತ್ತೀಚೆಗೆ ಮಳವಳ್ಳಿ ಶಾಸಕ ನರೇಂದ್ರ ಸ್ವಾಮಿ ಅವರು ಖುದ್ದಾಗಿ ಗಿಲ್ಲಿ ನಟ ಅವರಿಗೆ ಮತ ಚಲಾಯಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದರು. ಗಿಲ್ಲಿಯ ಸ್ನೇಹಿತರು ಮತ್ತು ಅಭಿಮಾನಿಗಳು ಈಗಾಗಲೇ ಮೆರವಣಿಗೆಯ ಮೂಲಕ ಮತಯಾಚನೆ ಮಾಡಿ ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ.

Bigg Boss 12: ಫಿನಾಲೆ ಹೊಸ್ತಿಲಲ್ಲಿ ಧ್ರುವಂತ್ ಔಟ್; ಅಂತಿಮ ಹಣಾಹಣಿಗೆ ಈ 6 ಸ್ಪರ್ಧಿಗಳು!

ಫಿನಾಲೆ ಕದನಕ್ಕೆ ಕ್ಷಣಗಣನೆ

ಸದ್ಯ ವೋಟಿಂಗ್ ಲೈನ್ ಓಪನ್ ಆಗಿದ್ದು, ಅಶ್ವಿನಿ ಗೌಡ, ರಕ್ಷಿತಾ ಶೆಟ್ಟಿ, ಧನುಷ್ ಸೇರಿದಂತೆ ಆರು ಸ್ಪರ್ಧಿಗಳ ನಡುವೆ ಕಠಿಣ ಪೈಪೋಟಿ ಇದೆ. ಆದರೆ ಗಿಲ್ಲಿ ಪರವಾಗಿ ಸೃಷ್ಟಿಯಾಗಿರುವ ಈ ಅಲೆ, ಅವರನ್ನು ವಿಜಯದ ಹಾದಿಯತ್ತ ಕರೆದೊಯ್ಯುತ್ತದೆಯೇ ಎಂದು ಕಾದು ನೋಡಬೇಕಿದೆ.

Vidhya | ವಿದ್ಯಾಶ್ರೀ

ವಿದ್ಯಾಶ್ರೀ ಅವರು ನ್ಯೂಸ್‌ ನೆಕ್ಸ್ಟ್‌ ಕನ್ನಡ ( Kannada News Next) ದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಕನ್ನಡದ ನ್ಯೂಸ್‌ ಚಾನೆಲ್‌, ದಿನ ಪತ್ರಿಕೆ ಹಾಗೂ ಡಿಜಿಟಲ್‌ ಮಾಧ್ಯಮದಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

Related Stories