kantara 2 : ಕಾಂತಾರ 2 ಸಿನಿಮಾ ಹೇಗಿದೆ ? 1 ಗಂಟೆಯಲ್ಲಿ 30 ಸಾವಿರ ಟಿಕೆಟ್ ಸೋಲ್ಡ್‌ಔಟ್

kantara 2 : ರಿಷಬ್ ಶೆಟ್ಟಿ ಅಭಿನಯದ ಕಾಂತಾರ ಸಿನಿಮಾ ತೆರೆಗೆ ಬಂದಿದ್ದು ಅಭಿಮಾನಿಗಳಿಂದಲೂ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಕಾಂತಾರ 2 ಸಿನಿಮಾದ ಟಿಕೆಟ್ ಕೇವಲ ಒಂದು ಗಂಟೆಯಲ್ಲಿ 30 ಸಾವಿರ ಟಿಕೆಟ್ ಸೋಲ್ಡ್‌ಔಟ್ ಆಗಿದೆ.
ಕಾಂತಾರ ಸಿನಿಮಾಕ್ಕೆ ಹೋಲಿಕೆ ಮಾಡಿದ್ರೆ ಕಾಂತಾರ ಚಾಪ್ಟರ್ 1 ಸಿನಿಮಾ ಅದ್ಬುತವಾಗಿದೆ. ಮೊದಲ ಸಿನಿಮಾವನ್ನು ನೋಡಿದ್ದ ಪ್ರೇಕ್ಷಕ ಇದೀಗ ಎರಡನೇ ಸಿನಿಮಾಕ್ಕೆ ಪುಲ್ ಪಿಧಾ ಆಗಿದ್ದಾರೆ.
ಕಾಂತಾರ ಸಿನಿಮಾದ ಮೇಕಿಂಗ್, ವಿಎಫ್‌ಎಕ್ಸ್ (VFX), ಛಾಯಾಗ್ರಹಣ ಮತ್ತು ಬಿ. ಅಜನೀಶ್ ಲೋಕನಾಥ್ ಅವರ ಹಿನ್ನೆಲೆ ಸಂಗೀತವು (BGM) ಅತ್ಯುತ್ತಮವಾಗಿ ಮೂಡಿ ಬಂದಿದೆ.
kantara 2 : ರಿಷಬ್ ಶೆಟ್ಟಿ ಅಭಿನಯಕ್ಕೆ ಪುಲ್ ಮಾರ್ಕ್ಸ್
ನಟ ರಿಷಬ್ ಶೆಟ್ಟಿ ಅವರ ಅಭಿನಯಕ್ಕೆ ಪ್ರೇಕ್ಷಕರು ಪುಲ್ ಮಾರ್ಕ್ಸ್ ಕೊಟ್ಟಿದ್ದಾರೆ. ಕಾಂತಾರ ಸಿನಿಮಾದ ಮೂಲಕ ಕರಾವಳಿಯ ಸೊಗಡನ್ನು ಹೆಚ್ಚಿಸಿದ್ದ ರಿಷಬ್ ಶೆಟ್ಟಿ ಇದೀಗ ಕಾಂತಾರ ಚಾಪ್ಟರ್ 1 ಮೂಲಕ ಮತ್ತೊಮ್ಮೆ ತಮ್ಮ ತಾಕತ್ತು ಪ್ರದರ್ಶಿಸಿದ್ದಾರೆ.
ರಿಷಬ್ ಶೆಟ್ಟಿಯವರದ್ದು ‘ಕಮಾಂಡಿಂಗ್ ಪರ್ಫಾರ್ಮೆನ್ಸ್. ವಿಶೇಷವಾಗಿ ದೈವ ಆವೇಶವಾಗುವ ಮತ್ತು ದ್ವಿತೀಯಾರ್ಧದ ದೃಶ್ಯಗಳಲ್ಲಿ ಅವರ ‘ಪೀಕ್ ಮ್ಯಾಡ್ನೆಸ್’ ಅನ್ನು ನೋಡಬಹುದು ಎಂದು ಪ್ರೇಕ್ಷಕರು ಹೇಳಿದ್ದಾರೆ.
ಈಗಾಗಲೇ ಪ್ರೀಮಿಯರ್ ಶೋಗಳನ್ನು ನೋಡಿದ ಕೆಲ ಪ್ರೇಕ್ಷಕರು 5ಕ್ಕೆ 4.5 ಅಂಕಗಳು ಅಥವಾ 10ಕ್ಕೆ 9+ ಅಂಕಗಳನ್ನು ನೀಡಿ ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿದ್ದಾರೆ. ಕಾಂತಾರ ಚಾಪ್ಟರ್ 1′ (Kantara 2) ಪ್ರೇಕ್ಷಕರ ನಿರೀಕ್ಷೆಯನ್ನು ಹೆಚ್ಚಿಸಿದೆ.
kantara : ಒಂದೇ ಗಂಟೆ 30 ಸಾವಿರ ಟಿಕೆಟ್ ಸೇಲ್
ಕಾಂತಾರಾ ಚಾಪ್ಟರ್ 1 ಪೇಯ್ಡ್ ಪ್ರೀಮಿಯರ್ ಶೋ ಸಕ್ಸಸ್ ಬೆನ್ನಲ್ಲೇ ಇಂದು ಮುಂಜಾನೆಯಿಂದಲೇ ಅಭಿಮಾನಿಗಳು ಥಿಯೇಟರ್‌ನತ್ತ ಬಂದಿದ್ದಾರೆ. ಬೆಂಗಳೂರಿನಲ್ಲಿ ಬೆಳಗ್ಗೆ 6.30 ಕ್ಕೆ ಮೊದಲ ವಿಡಿಯೋ ಶುರುವಾಗಿದೆ.
ಭರ್ಜರಿ 45 ಶೋಗಳು ಹೌಸ್‌ಪುಲ್ ಪ್ರದರ್ಶನ ಕಂಡಿವೆ. ಕಾಂತಾರ ಸಿನಿಮಾದ ಟಿಕೆಟ್ ಖರೀದಿಗೆ ಪ್ರೇಕ್ಷಕರು ಮುಗಿ ಬೀಳುತ್ತಿದ್ದಾರೆ. ಕಾಂತಾರ 1 ಸಿನಿಮಾ ನಿನ್ನೆ ಒಂದು ಗಂಟೆಯಲ್ಲಿ ಬರೋಬ್ಬರಿ 30 ಸಾವಿರಕ್ಕೂ ಅಧಿಕ ಟಿಕೆಟ್ ಸೇಲ್ ಆಗುವ ಮೂಲಕ ಹೊಸ ದಾಖಲೆ ಬರೆದಿದೆ.
ಕನ್ನಡ ಮಾತ್ರವಲ್ಲದೇ ಹಿಂದಿಯಲ್ಲಿಯೂ ಕಾಂತಾರ ಸಿನಿಮಾಕ್ಕೆ ಉತ್ತಮ ರೆಸ್ಪಾನ್ಸ್ ವ್ಯಕ್ತವಾಗುತ್ತಿದೆ. ಹಿಂದಿಯಲ್ಲಿ ಮೊದಲ ದಿನ ಬರೋಬ್ಬರಿ 20 ಕೋಟಿಗೂ ಅಧಿಕ ಕಲೆಕ್ಷನ್ಸ್ ನಿರೀಕ್ಷೆಯಿದೆ.
ಕಾಂತಾರ 2 ಸಿನಿಮಾ ಭಾರತೀಯ ಸಿನಿಮಾ ಇತಿಹಾಸದಲ್ಲಿಯೇ ಹೊಸ ದಾಖಲೆ ಬರೆಯುವ ಎಲ್ಲಾ ಸೂಚನೆಯನ್ನು ನೀಡಿದೆ. ಮೊದಲ ದಿನ ಸುಮಾರು 7 ಸಾವಿರಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ ಸಿನಿಮಾ ತೆರೆಕಂಡಿದೆ.
25 ಕೋಟಿಗೂ ಅಧಿಕ ಕಲೆಕ್ಷನ್ ಮಾಡುವ ನಿರೀಕ್ಷೆಯಿದೆ. ವರದಿಗಳ ಪ್ರಕಾರ, ಸಿನಿಮಾ ಬಿಡುಗಡೆಗೆ ಕೆಲವು ದಿನಗಳ ಮೊದಲು, ‘ಕಾಂತಾರ: ಚಾಪ್ಟರ್ 1’ ಚಿತ್ರದ ಪ್ರದರ್ಶನದ 1.7 ಲಕ್ಷಕ್ಕೂ ಹೆಚ್ಚು ಟಿಕೆಟ್‌ಗಳು ಕೇವಲ ಒಂದೇ ದಿನದಲ್ಲಿ ಮಾರಾಟವಾಗಿವೆ.
ರಿಷಬ್ ಶೆಟ್ಟಿಯವರ ಮೊದಲ ಸಿನಿಮಾ ‘ಕಾಂತಾರ’ (2022), ಮೊದಲ ದಿನ ₹2 ಕೋಟಿ ಗಳಿಸಿತ್ತು. ಇದೀಗ ಮೊದಲ ಸಿನಿಮಾವನ್ನು ಮೀರಿಸುವ ಹಂತಕ್ಕೆ ಕಾಂತಾರ ಚಾಪ್ಟರ್ 1 ನಿರೀಕ್ಷೆ ಹುಟ್ಟಿಸಿದೆ.
ರಿಷಬ್ ಶೆಟ್ಟಿ ಪತ್ನಿ ಕಣ್ಣೀರು ..!
ಕಾಂತಾರ 2 ಪ್ರೀಮಿಯರ್ ಶೋ ನೋಡಿದ ಬೆನ್ನಲ್ಲೇ ರಿಷಬ್ ಶೆಟ್ಟಿ ಪತ್ನಿ ಪ್ರಗತಿ ಶೆಟ್ಟಿ ಕಣ್ಣೀರು ಹಾಕಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸದ್ಯ ಈ ವಿಡಿಯೋ ವೈರಲ್ ಆಗಿದೆ. ಅದ್ಬುತ ಕನಸೊಂದು ನನಸಾಗಿದೆ ಎಂದಿದ್ದಾರೆ ಪ್ರಗತಿ ಶೆಟ್ಟಿ.



