ಜೊತೆ ಜೊತೆಯಲಿ ಕಹಾನಿ ಮೇ ಟ್ವಿಸ್ಟ್….! ಮೀರಾ ಪಾತ್ರಧಾರಿಯೇ ರಾಜನಂದಿನಿ…!!

ಜೊತೆ ಜೊತೆಯಲಿ ಧಾರಾವಾಹಿಯ ಸುಮಧುರ ಪ್ರೇಮ ಕಹಾನಿಯಲ್ಲಿ ಆಗಾಗ ಹುಳಿಹಿಂಡೋ ಪಾತ್ರವಾಗಿ ಎಂಟ್ರಿಕೊಡೋ ಮೀರಾ ಈಗ ರಾಜನಂದಿನಿ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹಾಗಿದ್ದರೇ ಮೀರಾ ಅಲಿಯಾಸ್ ಮಾನಸಾ ಮನೋಹರ್ ದ್ವಿಪಾತ್ರನಾ ಅಂತ ಅಂದ್ಕೊಂಡ್ರಾ? ಇಲ್ಲಿದೆ ಡಿಟೇಲ್ಸ್.

ಜೊತೆ ಜೊತೆಯಲಿ ಸೀರಿಯಲ್ ನ ನೆಗೆಟಿವ್ ರೋಲ್ ಮೀರಾ ಪಾತ್ರದಾರಿ ಮಾನಸಾ ಮನೋಹರ್ ತೆಲುಗಿನಲ್ಲಿ ರಾಜನಂದಿನಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ತೆಲುಗಿನಲ್ಲೂ ಜೊತೆ ಜೊತೆಯಲಿ ಧಾರಾವಾಹಿ ಪ್ರೇಮ ಎಂಥ ಮದುರಂ ಎಂಬ ಹೆಸರಿನಲ್ಲಿ ಪ್ರಸಾರವಾಗುತ್ತಿದೆ.

ಆದರೆ ತೆಲುಗಿನಲ್ಲಿ ಕತೆಯನ್ನು ಕೊಂಚ  ಬದಲಾಯಿಸಿಕೊಳ್ಳಲಾಗಿದೆ. ಹೀಗಾಗಿ ಕನ್ನಡ ಜೊತೆ ಜೊತೆಯಲಿ ಮೀರಾ ಅಲ್ಲಿ ರಾಜನಂದಿನಿಯಾಗಿ ಕಾಣಿಸಿಕೊಳ್ಳಲಿದ್ದಾರಂತೆ. ಈ ಬಗ್ಗೆ ಸ್ವತಃ ಮಾನಸಾ ಮನೋಹರ್ ಮಾಹಿತಿ ನೀಡಿದ್ದು, ತೆಲುಗು ಜೊತೆ ಜೊತೆಯಲಿ ನಿರ್ಮಾಪಕ ಶ್ರೀರಾಮ್ ವೆಂಕಟ್ ಅವರು ನನ್ನ ಬಳಿ ರಾಜನಂದಿನಿ ಪಾತ್ರದಲ್ಲಿ ನಟಿಸುವಂತೆ ಕೇಳಿದ್ರು.

ಕನ್ನಡ ಹಾಗೂ ತೆಲುಗು ಧಾರಾವಾಹಿಗಳು ಒಂದೇ ವಾಹಿನಿಗೆ ಸಂಬಂಧಿಸಿದ್ದಾಗಿದ್ದರಿಂದ ಯಾವುದೇ ಸಮಸ್ಯೆ ಇಲ್ಲ ಎಂಬ ಕಾರಣಕ್ಕೆ ಒಪ್ಪಿಕೊಂಡಿದ್ದೇನೆ. ತೆಲುಗಿನಲ್ಲಿ ಪಾಸಿಟಿವ್ ಹಾಗೂ ಕನ್ನಡದಲ್ಲಿ ನೆಗೆಟಿವ್ ರೋಲ್ ಮಾಡ್ತಿರೋದಿಕ್ಕೆ ನನಗೆ ಖುಷಿ ಇದೆ ಎಂದಿದ್ದಾರೆ.

ತೆಲುಗಿನಲ್ಲಿ ಹೆಚ್ಚಿನ ಡೇಟ್ಸ್ ನೀಡೋ ಅಗತ್ಯವೇನೂ ಇಲ್ಲ. ಹೀಗಾಗಿ ಕನ್ನಡ ಸೀರಿಯಲ್ ಗೆ ಯಾವುದೇ ರೀತಿಯಲ್ಲೂ ತೊಂದರೆಯಾಗಲ್ಲ. ಯಾಕೆಂದ್ರೆ ನನಗೊಂದು ಐಡೆಂಟಿಟಿ ತಂದುಕೊಟ್ಟ ಕನ್ನಡ ಜೊತೆ ಜೊತೆಯಲಿ ಸೀರಿಯಲ್ ಎಂದಿಗೂ ನನ್ನ ಮೊದಲ ಆದ್ಯತೆ ಎಂದಿದ್ದಾರೆ.

ಮಾನಸಾ ಮನೋಹರ್ ಮೀರಾ ಪಾತ್ರದ ಮೂಲಕ ಜನಪ್ರಿಯತೆ ಗಳಿಸಿದ್ದು, ವೆಬ್ ಸೀರಿಸ್ ನಲ್ಲೂ ನಟಿಸುವ ಆಸಕ್ತಿ ಹೊಂದಿರುವ ಮಾನಸಾ ಮನೋಹರ್ ಒಳ್ಳೆಯ ಪಾತ್ರದ ನೀರಿಕ್ಷೆಯಲ್ಲಿದ್ದಾರಂತೆ.  

Comments are closed.