ನಟ ದರ್ಶನ್‌ 20 ಕೋಟಿ ಕೊಟ್ಟಿಲ್ಲ, ಸುಳ್ಳು ಸುದ್ದಿ ಹಬ್ಬಿಸಬೇಡಿ : ರೇಣುಕಾಸ್ವಾಮಿ ತಂದೆ

darshan thoogudeepa Renukaswamy : ಚಿತ್ರದುರ್ಗ : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮತ್ತೆ ಜೈಲು ಸೇರಿರುವ ದರ್ಶನ್‌ ತೂಗುದೀಪ್‌ (darshan thoogudeepa) ತಮಗೆ ಒಂದು ರೂಪಾಯಿಯನ್ನೂ ನೀಡಿಲ್ಲ. ಈ ಕುರಿತು ಎಂದು ರೇಣುಕಾಸ್ವಾಮಿ ತಂದೆ ಕಾಶಿನಾಥ್ ಶಿವನಗೌಡ ಸ್ಪಷ್ಟನೆ ಕೊಟ್ಟಿದ್ದಾರೆ.

ಸುಪ್ರೀಂ ಕೋರ್ಟ್‌ ನಟ ದರ್ಶನ್‌ ತೂಗುದೀಪ್‌, ಪವಿತ್ರಾ ಗೌಡ ಸೇರಿ ಒಟ್ಟು ಏಳು ಮಂದಿಯ ಜಾಮೀನು ಅರ್ಜಿ ರದ್ದು ಮಾಡುತ್ತಲೇ ಚಿತ್ರದುರ್ಗದಲ್ಲಿ ಅವರು ಮಾಧ್ಯಮದವರಿಗೆ ಹೇಳಿಕೆ ನೀಡಿದ್ದಾರೆ.

ನಟ ದರ್ಶನ್ ತೂಗುದೀಪ್ ಅಥವಾ ಅವರ ಕುಟುಂಬದಿಂದ‌ ನಾವು ಯಾವುದೇ ಹಣವನ್ನು ಪಡೆದಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ಹರಿದಾಡುತ್ತಿರುವ ಸುದ್ದಿಗಳು ಸಂಪೂರ್ಣ ಸುಳ್ಳು. ಯಾವುದೇ ಕಾರಣಕ್ಕೂ ಸುಳ್ಳು ಸುದ್ದಿ ಹಬ್ಬಿಸಬೇಡಿ ಎಂದು ತಿಳಿಸಿದ್ದಾರೆ.

ದರ್ಶನ್‌ನನ್ನು ಭೇಟಿಯಾಗಲು ಯತ್ನಿಸುತ್ತಿರುವ ಬಗ್ಗೆ ಅಥವಾ ರಾಜೀ ಸಂಧಾನದ ಬಗ್ಗೆ ಸುದ್ದಿ ಬಂದಿದ್ದಾಗ, ತಾವು ಯಾರನ್ನೂ ಭೇಟಿಯಾಗಿಲ್ಲ ಮತ್ತು ಯಾವ ಸಂಧಾನಕ್ಕೂ ಒಪ್ಪಿಲ್ಲ ಎಂದು ಹೇಳಿದ್ದರು.

ಇದನ್ನೂ ಓದಿ : ನಟ ದರ್ಶನ್‌ ತೂಗುದೀಪ್‌, ಪವಿತ್ರಾ ಗೌಡ ಜಾಮೀನು ರದ್ದು

ತಮ್ಮ ಮಗನ ಸಾವಿಗೆ ನ್ಯಾಯ ಸಿಗಬೇಕು, ಆರೋಪಿಗಳಿಗೆ ಶಿಕ್ಷೆಯಾಗಬೇಕು ಎಂಬುದೇ ತಮ್ಮ ಏಕೈಕ ಬೇಡಿಕೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಸುಪ್ರೀಂ ಕೋರ್ಟ್ ದರ್ಶನ್ ಮತ್ತು ಇತರ ಆರೋಪಿಗಳ ಜಾಮೀನು ರದ್ದುಪಡಿಸಿದಾಗ, ರೇಣುಕಾಸ್ವಾಮಿ ತಂದೆ ಸಂತಸ ವ್ಯಕ್ತಪಡಿಸಿದ್ದರು. ಈ ತೀರ್ಪಿನಿಂದ ನ್ಯಾಯಾಂಗದ ಮೇಲೆ ತಮ್ಮ ನಂಬಿಕೆ ಹೆಚ್ಚಾಗಿದೆ ಎಂದು ಅವರು ಹೇಳಿದ್ದರು.

ರೇಣುಕಾಸ್ವಾಮಿ ತಂದೆ ಹಣ ಪಡೆದ ಬಗ್ಗೆ ಹರಿದಾಡಿದ ವದಂತಿಗಳು ಸುಳ್ಳು ಎಂದು ಸ್ಪಷ್ಟಪಡಿಸಿದ್ದಾರೆ ಮತ್ತು ಅವರ ಪ್ರಮುಖ ಕಾಳಜಿ ಕಾನೂನು ಪ್ರಕ್ರಿಯೆಯಲ್ಲಿ ತಮ್ಮ ಮಗನಿಗೆ ನ್ಯಾಯ ಸಿಗಬೇಕು ಎಂಬುದಾಗಿದೆ.

ಇದನ್ನೂ ಓದಿ : ಧರ್ಮಸ್ಥಳ ಎಸ್‌ಐಟಿ ತನಿಖೆ, ಮಧ್ಯಂತರ ತನಿಖಾ ವರದಿ ನೀಡಿ

Kannada Famous Actor darshan thoogudeepa did not give 20 crores, dont spread false news says Renukaswamy father

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories