ನಟ ದರ್ಶನ್‌ತೂಗುದೀಪ, ಪವಿತ್ರಗೌಡ ಜಾಮೀನು ರದ್ದು : ಸುಪ್ರೀಂ ಕೋರ್ಟ್‌ ಮಹತ್ವದ ಆದೇಶ

Darshan Thooguddepa Pavitra Gowda Supreme Court : ನವದೆಹಲಿ : ಸ್ಯಾಂಡಲ್‌ವುಡ್‌ ಖ್ಯಾತ ನಟ ದರ್ಶನ್‌ ತೂಗುದೀಪಗೆ (Darshan Thooguddepa) ಬಿಗ್‌ಶಾಕ್‌ ಎದುರಾಗಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ ನೀಡಿದ್ದ ಜಾಮೀನು ರದ್ದುಗೊಳಿಸಿ ಸುಪ್ರೀಂ ಕೋರ್ಟ್‌ (Supreme Court) ಆದೇಶ ಹೊರಡಿಸಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಾಗಿಯಾಗಿರುವ ಆರೋಪ ಹೊತ್ತಿರುವ ನಟ ದರ್ಶನ್‌ ತೂಗುದೀಪ್‌, ಪವಿತ್ರಾ ಗೌಡ (Pavitra Gowda) ಸೇರಿ ಒಟ್ಟು 7 ಮಂದಿ ಆರೋಪಿಗಳ ಜಾಮೀನನ್ನು ಸುಪ್ರೀಂ ಕೋರ್ಟ್‌ ರದ್ದುಗೊಳಿಸಿದೆ. ಇದರಿಂದಾಗಿ ದರ್ಶನ್‌ ಮತ್ತೆ ಜೈಲು ಸೇರಲಿದ್ದಾರೆ.

ಕರ್ನಾಟಕ ಹೈಕೋರ್ಟ್ ನೀಡಿರುವ ಆದೇಶದಲ್ಲಿ ದೋಷವಿದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ. ಅಲ್ಲದೇ ಜಾಮೀನು ನೀಡುವಾಗ ಹೈಕೋರ್ಟ್ ತಾಂತ್ರಿಕ ಕಾರಣಗಳನ್ನು ಅನುಸರಿಸಿದೆ ಎಂದು ತಿಳಿಸಿದೆ.

ಕರ್ನಾಟಕ ಸರಕಾರವು ಹೈಕೋರ್ಟ್‌ನ ಜಾಮೀನು ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಇದರ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಹೈಕೋರ್ಟ್‌ನ ಕ್ರಮಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು. ಇದೀಗ ಅಂತಿಮವಾಗಿ ಜಾಮೀನನ್ನು ರದ್ದುಗೊಳಿಸಿ ತೀರ್ಪು ಪ್ರಕಟಿಸಿದೆ.

ದರ್ಶನ್‌, ಪವಿತ್ರಾ ಗೌಡ ಮತ್ತೆ ಜೈಲಿಗೆ

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಜೊತೆಗೆ ಇತರ 16 ಆರೋಪಿಗಳು ಭಾಗಿಯಾಗಿದ್ದಾರೆ. ರೇಣುಕಾಸ್ವಾಮಿಯ ಕೊಲೆಗೆ ಸಂಬಂಧಿಸಿದಂತೆ ಒಟ್ಟು 17 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ಪವಿತ್ರಾ ಗೌಡ ಪ್ರಮುಖ ಆರೋಪಿಯಾಗಿದ್ದಾರೆ. ಇವರ ಜೊತೆಗೆ ದರ್ಶನ್‌ನ ಸಹಚರರು, ಅಭಿಮಾನಿ ಸಂಘದ ಅಧ್ಯಕ್ಷರು ಮತ್ತು ಇತರ ಸಹಕರಿಸಿದ ವ್ಯಕ್ತಿಗಳು ಸೇರಿದ್ದಾರೆ.

ಪ್ರಮುಖ ಆರೋಪಿಗಳು:

ಪವಿತ್ರಾ ಗೌಡ (A1): ರೇಣುಕಾಸ್ವಾಮಿಯ ಕೊಲೆಗೆ ಕಾರಣರಾದ ಮೊದಲನೇ ಆರೋಪಿ. ರೇಣುಕಾಸ್ವಾಮಿ ಅಶ್ಲೀಲ ಸಂದೇಶ ಕಳುಹಿಸಿದ್ದು ಇವರಿಗೇ.

ದರ್ಶನ್ (A2): ಕೊಲೆಯ ಹಿಂದೆ ಇರುವ ಪ್ರಮುಖ ವ್ಯಕ್ತಿ. ಹಲ್ಲೆ ನಡೆಸಿ ಕೊಲೆ ಮಾಡಲು ಸಂಚು ರೂಪಿಸಿದ ಆರೋಪ.

ಇತರ ಆರೋಪಿಗಳು:

ಪವನ್ (A3): ಪವಿತ್ರಾ ಗೌಡ ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದವನು ಮತ್ತು ರೇಣುಕಾಸ್ವಾಮಿಯ ಬಗ್ಗೆ ದರ್ಶನ್‌ಗೆ ಮಾಹಿತಿ ನೀಡಿದವನು.

ರಾಘವೇಂದ್ರ (A4): ಚಿತ್ರದುರ್ಗದಲ್ಲಿ ದರ್ಶನ್ ಅಭಿಮಾನಿ ಸಂಘದ ಅಧ್ಯಕ್ಷ. ರೇಣುಕಾಸ್ವಾಮಿಯನ್ನು ಬೆಂಗಳೂರಿಗೆ ಕರೆ ತಂದಿದ್ದು ಇವರೇ.

ನಂದೀಶ್ (A5): ದರ್ಶನ್ ಅಭಿಮಾನಿ.

ಜಗದೀಶ್ (A6): ದರ್ಶನ್ ಆಪ್ತ.

ಅನು (A7): ದರ್ಶನ್ ಆಪ್ತ.

ರವಿ (A8): ಕ್ಯಾಬ್ ಚಾಲಕ.

ಧನರಾಜ್ (A9): ದರ್ಶನ್ ಆಪ್ತ.

ವಿನಯ್ (A10): ದರ್ಶನ್ ಆಪ್ತ.

ನಾಗರಾಜ್ (A11): ದರ್ಶನ್ ಆಪ್ತ.

ಲಕ್ಷ್ಮಣ (A12): ದರ್ಶನ್ ಕಾರ್ ಡ್ರೈವರ್.

ದೀಪಕ್ (A13): ದರ್ಶನ್ ಆಪ್ತ.

ಪ್ರದೋಶ್ (A14): ದರ್ಶನ್ ಆಪ್ತ.

ಕಾರ್ತಿಕ್ (A15): ದರ್ಶನ್ ಆಪ್ತ.

ಕೇಶವಮೂರ್ತಿ (A16): ದರ್ಶನ್ ಆಪ್ತ.

ನಿಖಿಲ್ ನಾಯಕ್ (A17): ದರ್ಶನ್ ಆಪ್ತ.

ಸುಪ್ರೀಂ ಕೋರ್ಟ್ ಜಾಮೀನು ರದ್ದುಗೊಳಿಸಿರುವುದರಿಂದ ದರ್ಶನ್ ಸೇರಿದಂತೆ ಜಾಮೀನು ಪಡೆದಿದ್ದ ಎಲ್ಲ ಆರೋಪಿಗಳು ಜೈಲಿಗೆ ಮರಳುವ ಸಾಧ್ಯತೆ ಇದೆ.

ಇದನ್ನೂ ಓದಿ : ಕಾಂತಾರ ಸಿನಿಮಾದ ಅಪ್ಪುಕೋಣ ಸಾವು

ದರ್ಶನ್‌ ಗೆ ಮುಂದಿನ ಅವಕಾಶಗಳೇನು ?

ದರ್ಶನ್ ತೂಗುದೀಪ ಮತ್ತು ಇತರ ಆರೋಪಿಗಳ ಪ್ರಕರಣ ಈಗ ಸುಪ್ರೀಂ ಕೋರ್ಟ್‌ನಿಂದ ಜಾಮೀನು ರದ್ದು ಆದೇಶದ ನಂತರ ಪ್ರಕರಣ ಮತ್ತಷ್ಟು ಗಂಭೀರ ಸ್ವರೂಪ ಪಡೆದುಕೊಂಡಿದೆ. ಇಂತಹ ಪರಿಸ್ಥಿತಿಯಲ್ಲಿ, ದರ್ಶನ್‌ಗೆ ಇರುವ ಮುಂದಿನ ಅವಕಾಶಗಳೇನು ಅನ್ನೋ ಮಾಹಿತಿ ಇಲ್ಲಿದೆ.

ಜಾಮೀನು ಅರ್ಜಿಯನ್ನು ಪುನಃ ಸಲ್ಲಿಸುವುದು: ಸುಪ್ರೀಂ ಕೋರ್ಟ್ ಆದೇಶದ ನಂತರ ದರ್ಶನ್ ಮತ್ತೆ ಜಾಮೀನು ಕೋರಿ ಕೆಳ ನ್ಯಾಯಾಲಯಕ್ಕೆ (ಮ್ಯಾಜಿಸ್ಟ್ರೇಟ್ ಕೋರ್ಟ್, ಹೈಕೋರ್ಟ್) ಅರ್ಜಿ ಸಲ್ಲಿಸಬೇಕಾಗುತ್ತದೆ. ಜಾಮೀನು ನೀಡಲು ಸುಪ್ರೀಂ ಕೋರ್ಟ್ ಸೂಚಿಸಿರುವ ನಿಯಮಗಳನ್ನು ಪಾಲಿಸಿ, ಹೊಸ ಕಾನೂನು ಆಧಾರಗಳೊಂದಿಗೆ ಜಾಮೀನು ಅರ್ಜಿ ಹಾಕಬಹುದು.

ಕಾನೂನು ಹೋರಾಟ: ದರ್ಶನ್ ಪರ ವಕೀಲರು ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ಅವರ ನಿರ್ದೋಷಿತ್ವವನ್ನು ಸಾಬೀತುಪಡಿಸಲು ನ್ಯಾಯಾಲಯದಲ್ಲಿ ಗಟ್ಟಿಯಾದ ವಾದ ಮಂಡಿಸಬೇಕು. ಸಾಕ್ಷ್ಯಗಳು ಮತ್ತು ಪ್ರಾಸಿಕ್ಯೂಷನ್‌ನ ವಾದಗಳನ್ನು ವಿರೋಧಿಸಿ, ದರ್ಶನ್‌ಗೆ ಜಾಮೀನು ಪಡೆಯಲು ಪ್ರಯತ್ನಿಸಬಹುದು.

ಇದನ್ನೂ ಓದಿ : ನಿರೂಪಕಿ ಅನುಶ್ರೀಗೆ ಮದುವೆ ಫಿಕ್ಸ್‌ : ಹುಡುಗ ಯಾರು ಗೊತ್ತಾ ?

ಪ್ರಕರಣದ ಇತ್ಯರ್ಥದವರೆಗೆ ಸಿನಿಮಾ ಶೂಟಿಂಗ್‌ ಬಂದ್‌: ದರ್ಶನ್ ಜೈಲಿನಲ್ಲಿರುವುದರಿಂದ ಮತ್ತು ಪ್ರಕರಣವು ಇತ್ಯರ್ಥವಾಗದ ಕಾರಣ, ಅವರು ಯಾವುದೇ ಹೊಸ ಸಿನಿಮಾ ಪ್ರಾಜೆಕ್ಟ್‌ಗಳಲ್ಲಿ ಭಾಗವಹಿಸಲು ಸಾಧ್ಯವಿಲ್ಲ. ಈಗ ನಿರ್ಮಾಣ ಹಂತದಲ್ಲಿರುವ ಮತ್ತು ಬಿಡುಗಡೆಗೆ ಸಿದ್ಧವಾಗಿರುವ ಸಿನಿಮಾಗಳ ಭವಿಷ್ಯವೂ ಅನಿಶ್ಚಿತವಾಗಿದೆ.

ಸಿನಿರಂಗದ ನಿಲುವೇನು ? ಚಿತ್ರರಂಗದ ನಿರ್ಮಾಪಕರು, ನಿರ್ದೇಶಕರು ಮತ್ತು ಸಹನಟರು ದರ್ಶನ್ ಬಗ್ಗೆ ಯಾವ ನಿಲುವು ತಳೆಯುತ್ತಾರೆ ಎಂಬುದು ಕೂಡ ಮುಖ್ಯವಾಗುತ್ತದೆ. ಪ್ರಕರಣವು ಸಂಪೂರ್ಣವಾಗಿ ಇತ್ಯರ್ಥವಾಗುವವರೆಗೂ ಚಿತ್ರರಂಗದ ಸಹಕಾರ ಸಿಗುವುದು ಕಷ್ಟವಾಗಬಹುದು.

Supreme Court cancels Bail Granted to Kannada Super Star Darshan Thooguddepa, Pavitra Gowda Renukaswamy Murder case

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories