ಕಾಂತಾರ ಸಿನಿಮಾದ ಅಪ್ಪು ಕೋಣ ಸಾವು

ಕಾಂತಾರ (Kantara) ಸಿನಿಮಾ ಕನ್ನಡ ಸಿನಿಮಾ ರಂಗದಲ್ಲಿ ಸೂಪರ್‌ ಹಿಟ್‌ ಆಗಿತ್ತು. ಕರಾವಳಿಯ ದೈವ, ದೇವರ ಕಥಾಹಂದರವನ್ನೇ ಹೊಂದಿರುವ ಸಿನಿಮಾ ತಂಡಕ್ಕೆ ಸಾಲು ಸಾಲು ಆಘಾತ ಎದುರಾಗುತ್ತಿದೆ. ಇದೀಗ ಕಾಂತಾರ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ ಅಪ್ಪು ಕೋಣ ನಿಧನವಾಗಿರೋದು ಬೇಸರ ಮೂಡಿಸಿದೆ.

2022ರಲ್ಲಿ ತೆರೆಕಂಡ ಕಾಂತಾರ ಸಿನಿಮಾ ಸೂಪರ್‌ ಹಿಟ್‌ ಆಗಿದ್ದು, ಕನ್ನಡ ಸಿನಿಮಾ ರಂಗದಲ್ಲಿಯೇ ಹಲವು ದಾಖಲೆಗಳನ್ನು ಬರೆದಿದ್ದು, ರಿಷಬ್‌ ಶೆಟ್ಟಿ ನಟಿಸಿ, ನಿರ್ದೇಶಿಸಿದ್ದ ಸಿನಿಮಾ ಸಿನಿ ಪ್ರಿಯರಿಗೆ ಸಖತ್‌ ಇಷ್ಟವಾಗಿತ್ತು.

ರಿಷಬ್‌ ಶೆಟ್ಟಿ (Rishab Shetty) ನಟನೆಯ ಕಾಂತಾರ ಸಿನಿಮಾದಲ್ಲಿ ಹೀರೋ ಆಗಿ ಮಿಂಚಿದ್ದ ಅಪ್ಪು ಕೋಣ ಇದೀಗ ಸಾವನ್ನಪ್ಪಿದೆ. ಉಡುಪಿ ಜಿಲ್ಲೆಯ ಬೈಂದೂರಿನ ಬೊಳಂಬಳ್ಳಿಯ ಕಂಬಳದ ಪ್ರೇಮಿ ಪರಮೇಶ್ವರ್‌ ಭಟ್‌ ಅವರು ಈ ಕೋಣವನ್ನು ಸಾಕುತ್ತಿದ್ದರು.

ಬೋಳಂಬಳ್ಳಿ ಪರಮೇಶ್ವರ ಭಟ್‌ ಅವರ ಕೋಣಗಳಿಗೆ ಅಪ್ಪು ಹಾಗೂ ಕಾಲಾ ಎಂದು ಹೆಸರಿಡಲಾಗಿತ್ತು. ಕಾಂತಾರ ಮೊದಲ ಆವತರಿಣಿಕೆಯ ಶೂಟಿಂಗ್‌ಗೆ ಮೊದಲು ರಿಷಬ್‌ ಶೆಟ್ಟಿ ಅಪ್ಪು ಹಾಗೂ ಕಾಲಾ ಕೋಣಗಳಿಂದ ತರಬೇತಿ ಪಡೆದಿದ್ದರು.

ರಿಷಬ್‌ ಶೆಟ್ಟಿ ಅವರ ಜೊತೆಗೆ ಈ ಕೋಣಗಳಿಗೆ ಅತ್ಯಾಪ್ತತೆ ಇದ್ದು, ನಂತರ ಇದೇ ಕೋಣಗಳು ಕೂಡ ಕಾಂತಾರ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಈ ಪೈಕಿ ಇದೀಗ ಅಪ್ಪು ಕೋಣ ಸಾವನ್ನಪ್ಪಿರೋದು ಬೋಳಂಬಳ್ಳಿ ಪರಮೇಶ್ವರ ಭಟ್‌ ಹಾಗೂ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ.

ಇದನ್ನೂ ಓದಿ : ನಿರೂಪಕಿ ಅನುಶ್ರೀ ಮದುವೆ ಫಿಕ್ಸ್‌

ಕಂಬಳ ಲೋಕದಲ್ಲಿ ಸಾಲು ಸಾಲು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದ ಅಪ್ಪು ಕಾಲಾ ಕೋಣಗಳು ಹೊಸ ದಾಖಲೆಲೆಯನ್ನು ಬರೆದಿದ್ದವು. ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಈ ಕೋಣಗಳು ಸಾಕಷ್ಟು ಹೆಸರು ಮಾಡಿದ್ದವು. ಬೆಂಗಳೂರಿನಲ್ಲಿ ನಡೆದ ಕಂಬಳದಲ್ಲಿಯೂ ಪ್ರಶಸ್ತಿಯನ್ನು ಪಡೆದುಕೊಂಡಿದ್ದವು.

ಕಾಂತಾರ ತಂಡಕ್ಕೆ ಸಾಲು ಸಾಲು ಆಘಾತ

ಕಾಂತಾರ – 1 ಸಿನಿಮಾದ ಶೂಟಿಂಗ್‌ ಈಗಾಗಲೇ ಮುಕ್ತಾಯಗೊಂಡಿದೆ. ಶೂಟಿಂಗ್‌ ವೇಳೆಯಲ್ಲಿ ಕೆಲವು ಕಲಾವಿದರು ಸಾವನ್ನಪ್ಪಿದ್ದಾರೆ. ಈ ಮೂಲಕ ಸಾಲು ಸಾಲು ಆಘಾತ ಉಂಟಾಗಿದೆ.

ಜೂನಿಯರ್ ಕಲಾವಿದನ ಸಾವು: ಮೇ 2025 ರಲ್ಲಿ, ಚಿತ್ರದ ಜೂನಿಯರ್ ಕಲಾವಿದರಾಗಿದ್ದ ಎಂ.ಎಫ್. ಕಪಿಲ್ ಅವರು ಚಿತ್ರೀಕರಣದ ವಿರಾಮದ ಸಮಯದಲ್ಲಿ ಸೌಪರ್ಣಿಕ ನದಿಯಲ್ಲಿ ಈಜಲು ಹೋಗಿದ್ದಾಗ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದರು. ಈ ಘಟನೆ ನಡೆದ ದಿನದಂದು ಚಿತ್ರೀಕರಣ ನಡೆಯುತ್ತಿರಲಿಲ್ಲ ಎಂದು ಚಿತ್ರತಂಡ ಸ್ಪಷ್ಟಪಡಿಸಿದೆ.

ಇಬ್ಬರು ಕಲಾವಿದರ ಸಾವು: ಕಲಾವಿದ ರಾಕೇಶ್ ಪೂಜಾರಿ ತನ್ನ ಸ್ನೇಹಿತರ ಮದುವೆ ಕಾರ್ಯಕ್ರಮದಲ್ಲಿ ನೃತ್ಯ ಮಾಡುವಾಗ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ವಿಜು ಎಂಬ ಮಿಮಿಕ್ರಿ ಕಲಾವಿದ ಕೂಡ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ಹೇಳಲಾಗಿದೆ. ಇವರಿಬ್ಬರೂ ಚಿತ್ರತಂಡದ ಭಾಗವಾಗಿದ್ದರು.

ಇದನ್ನೂ ಓದಿ : ಕಾಮಿಡಿ ಕಿಲಾಡಿಗಳು ಖ್ಯಾತಿಯ ರಾಕೇಶ್‌ ಪೂಜಾರಿ ನಿಧನ

ದೋಣಿ ದುರಂತ : ಜೂನ್ 2025 ರಲ್ಲಿ, ಶಿವಮೊಗ್ಗ ಜಿಲ್ಲೆಯ ಮಣಿ ಜಲಾಶಯದಲ್ಲಿ ಚಿತ್ರೀಕರಣದ ವೇಳೆ, ನಟ ರಿಷಬ್ ಶೆಟ್ಟಿ ಸೇರಿದಂತೆ ಸುಮಾರು 30 ಜನರಿದ್ದ ಬೋಟ್ ಹಠಾತ್ತಾಗಿ ಪಲ್ಟಿಯಾಗಿದೆ.

ಅದೃಷ್ಟವಶಾತ್, ಬೋಟ್ ಆಳವಿಲ್ಲದ ಪ್ರದೇಶದಲ್ಲಿ ಪಲ್ಟಿಯಾದ ಕಾರಣ ಯಾರಿಗೂ ಯಾವುದೇ ಗಾಯಗಳಾಗಿಲ್ಲ, ಆದರೆ ಕ್ಯಾಮೆರಾ ಮತ್ತು ಇತರ ಚಿತ್ರೀಕರಣದ ಉಪಕರಣಗಳಿಗೆ ಹಾನಿಯಾಗಿದೆ.

ಬಸ್ ಅಪಘಾತ : ನವೆಂಬರ್ 2024 ರಲ್ಲಿ, 20 ಕ್ಕೂ ಹೆಚ್ಚು ಜೂನಿಯರ್ ಕಲಾವಿದರು ಪ್ರಯಾಣಿಸುತ್ತಿದ್ದ ಮಿನಿಬಸ್ ಮುಡೂರು ಪ್ರದೇಶದಲ್ಲಿ ಅಪಘಾತಕ್ಕೀಡಾಗಿತ್ತು. ಈ ಘಟನೆಯಲ್ಲಿ ಯಾರಿಗೂ ತೀವ್ರ ಸ್ವರೂಪದ ಗಾಯಗಳಾಗಿಲ್ಲ ಎಂದು ತಿಳಿದುಬಂದಿದೆ.

Kantara Movie Appu Buffalo Dies in Byndoor

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories