ನಿರೂಪಕಿ ಅನುಶ್ರೀಗೆ ಮದುವೆ ಫಿಕ್ಸ್ : ಹುಡುಗ ಯಾರು ಗೊತ್ತಾ ?
Anchor Anushree Marriage : ಕನ್ನಡ ಕಿರುತೆರೆಯ ಖ್ಯಾತ ನಿರೂಪಕಿ ಅನುಶ್ರೀಗೆ ಕಂಕಣಬಲ ಕೂಡಿಬಂದಿದೆ. ಸರಿಗಮಪ ಮೂಲಕ ಹೆಚ್ಚು ಪ್ರಖ್ಯಾತಿ ಪಡೆದಿರುವ ಕುಡ್ಲದ ಬೆಡಗಿ ಇದೇ ಅಗಸ್ಟ್ 28ಕ್ಕೆ ಬೆಂಗಳೂರಿನಲ್ಲಿ ಹಸೆಮಣೆ ಏರಲಿದ್ದಾರೆ.
ಮಂಗಳೂರು ಮೂಲದ ಅನುಶ್ರೀ ಸದ್ಯ ಕನ್ನಡ ಕಿರುತೆರೆಯ ಬಹುಬೇಡಿಕೆಯ ನಿರೂಪಕಿ. ಸರಿಗಮಪ ಕಾರ್ಯಕ್ರಮ ಅನುಶ್ರೀ ಅವರ ನಿರೂಪಣೆಯಲ್ಲಿ ಹೆಚ್ಚು ಪ್ರಖ್ಯಾತಿ ಪಡೆದುಕೊಂಡಿದೆ.
ಚುರುಕಾದ ನಿರೂಪಣೆ, ಮಾತಿನ ಮೂಲಕವೇ ಅನುಶ್ರೀ ಕರ್ನಾಟಕದ ಮನೆ ಮಾತಾಗಿದ್ದಾರೆ. ಕಳೆದ ಕೆಲವು ವರ್ಷಗಳಿಂದಲೂ ಅನುಶ್ರೀ ಅವರು ಮದುವೆಯ ವಿಚಾರದ ಸಾಕಷ್ಟು ಚರ್ಚೆ ಆಗ್ತಿತ್ತು.

ಕೊನೆಗೂ ಅನುಶ್ರೀ ಹಸೆಮಣೆ ಏರುವುದು ಖಚಿತವಾಗಿ. ಕುಟುಂಬದವರೇ ಮದುವೆಯನ್ನು ನಿಶ್ಚಯಿಸಿದ್ದು, ಮದುವೆಗೆ ಸಕಲ ಸಿದ್ದತೆಗಳು ನಡೆಯುತ್ತಿದೆ.
ಮಂಗಳೂರು ಮೂಲದ ಅನುಶ್ರೀ ಬೆಂಗಳೂರಿನ ಸೈಂಟ್ ಥಾಮಸ್ ಶಾಲೆಯಲ್ಲಿ 5ನೇ ತರಗತಿವರೆಗೆ ವಿದ್ಯಾಭ್ಯಾಸವನ್ನು ಪಡೆದು, ನಂತರ ಮಂಗಳೂರಿನ ನಾರಾಯಣಗುರು ಶಾಲೆಯಲ್ಲಿ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿದ್ದಾರೆ. ಅಲ್ಲದೇ ಮಂಗಳೂರು ವಿಶ್ವ ವಿದ್ಯಾನಿಲಯದ ಹಳೆ ವಿದ್ಯಾರ್ಥಿ ಆಗಿದ್ದಾರೆ.
ನಿರೂಪಕಿ ಅನುಶ್ರೀ ಮದುವೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಆದರೆ ಅನುಶ್ರೀ ಮಾತ್ರ ತನ್ನ ಮದುವೆಯ ಬಗ್ಗೆ ಅಧಿಕೃತ ಹೇಳಿಕೆಯನ್ನು ನೀಡಿಲ್ಲ.
Also Read : 72 ಗಂಟೆಗಳ ಕಾಲ ನಾಯಕನ್ನು ಚುಂಬಿಸಿದ ಖ್ಯಾತ ನಟಿ…!
Anchor Anushree Marriage : ಅನುಶ್ರೀ ಕೈ ಹಿಡಿಯುವ ಹುಡುಗ ಯಾರು ?
ನಿರೂಪಕಿ ಅನುಶ್ರೀ ಅವರ ಮದುವೆ ಕಳೆದ ಕೆಲವು ವರ್ಷಗಳಿಂದಲೂ ಚರ್ಚೆ ಆಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಕನ್ನಡದ ಖ್ಯಾತ ನಟರ ಜೊತೆಗೆ ಮದುವೆ ಆಗ್ತಾರೆ ಅನ್ನೋ ಸುದ್ದಿಯನ್ನು ಹಬ್ಬಿಸಲಾಗಿತ್ತು.
ಆದ್ರೀಗ ಅನುಶ್ರೀ ಕೂರ್ಗ್ ಮೂಲದ ಐಟಿ ಉದ್ಯಮಿ ರೋಷನ್ ಎಂಬವರನ್ನು ಮದುವೆ ಆಗ್ತಿದ್ದಾರೆ ಅನ್ನೋ ಮಾಹಿತಿ ಹೊರಬಿದ್ದಿದೆ. ಇಬ್ಬರದ್ದು ಲವ್ ಮ್ಯಾರೇಜ್ ಅಲ್ಲಾ ಬದಲಾಗಿ, ಮನೆಯವರೇ ನಿಶ್ವಿಯ ಮಾಡಿರುವ ಮದುವೆ ಎನ್ನಲಾಗುತ್ತಿದೆ.

ಅನುಶ್ರೀ ಅವರು ಮದುವೆ ವಿಚಾರ ಕೇಳಿ ಅವರ ಅಭಿಮಾನಿಗಳು ಸಾಕಷ್ಟು ಸಂಭ್ರಮದಲ್ಲಿದ್ದಾರೆ. ಕನ್ನಡ ಖ್ಯಾತ ನಿರೂಪಕಿ ಮದುವೆ ಕಣ್ತುಂಬಿಕೊಳ್ಳಲು ಕರುನಾಡು ಕಾತರದಿಂದ ಕಾಯುತ್ತಿದೆ.
Also Read : ಮೇಘನಾ ರಾಜ್ ಸರ್ಜಾ ಹೊಸ ಮನೆ : ಚಿರು ಮನೆ ತೊರೆಯೋ ನಿರ್ಧಾರ ಮಾಡಿದ್ಯಾಕೆ ಗೊತ್ತಾ ?
Anchor Anushree Marriage Date Fix in Kannada News



