Leena Manimekalai : ಸಿಗರೇಟ್​ ಸೇದುತ್ತಿರುವ ಶಿವ, ಪಾರ್ವತಿ : ಮತ್ತೊಂದು ವಿವಾದ ಸೃಷ್ಟಿಸಿದ ಲೀನಾ ಮಣಿಮೇಕಲೈ

Leena Manimekalai : ಚಲನಚಿತ್ರ ನಿರ್ಮಾಪಕಿ ಲೀನಾ ಮಣಿಮೇಕಲೈಗೆ ವಿವಾದಗಳು ಅಂದರೆ ಇಷ್ಟವೋ ಅಥವಾ ವಿವಾದಗಳಿಗೆ ಲೀನಾ ಮಣಿಮೇಕಲೈ ಎಂದರೆ ಇಷ್ಟವೋ ಎಂಬುದು ಅರ್ಥವಾಗುತ್ತಿಲ್ಲ. ಏಕೆಂದರೆ ಕಾಳಿ ಸಾಕ್ಷ್ಯಚಿತ್ರದ ಸಂಬಂಧ ಸಿಗರೇಟ್​ ಸೇದುತ್ತಿರುವ ರೀತಿಯಲ್ಲಿ ಕಾಳಿಯನ್ನು ಚಿತ್ರಿಸಿ ಸಿನಿಮಾದ ಪೋಸ್ಟರ್​ (Kaali poster controversial) ಶೇರ್​ ಮಾಡಿ ಭಾರೀ ವಿವಾದಕ್ಕೆ ಕಾರಣವಾಗಿದ್ದ ಕೆನಡಾ ಮೂಲದ ಮಧುರೈ ನಿರ್ಮಾಪಕಿ ಲೀನಾ ಮಣಿಮೇಕಲೈ ಇದೀಗ ಮತ್ತೊಂದು ವಿವಾದಾತ್ಮಕ ಫೋಟೋವನ್ನು ಸೋಶಿಯಲ್​ ಮೀಡಿಯಾದಲ್ಲಿ ಶೇರ್​ ಮಾಡುವ ಮೂಲಕ ಹಿಂದೂಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ತಮ್ಮ ಟ್ವಿಟರ್​ ಖಾತೆಯಲ್ಲಿ ಲೀನಾ ಮಣಿಮೇಕಲೈ ಶಿವ ಹಾಗೂ ಪಾರ್ವತಿಯ ವೇಷ ಧರಿಸಿರುವ ಪುರುಷ ಹಾಗೂ ಮಹಿಳೆಯು ಧೂಮಪಾನ ಮಾಡುತ್ತಿರುವ ದೃಶ್ಯವನ್ನು ಹಂಚಿಕೊಂಡಿದ್ದಾರೆ. ಈ ಫೋಟೋಗೆ ಲೀನಾ ಮಣಿಮೇಕಲೈ ‘ಬೇರೆಡೆ’ ಎಂದು ಶೀರ್ಷಿಕೆಯನ್ನು ನೀಡಿದ್ದಾರೆ.

ನಿರ್ಮಾಪಕಿ ಲೀನಾ ಮಣಿಮೇಕಲೈ ನಿರ್ದೇಶನದ ಸಾಕ್ಷ್ಯ ಚಿತ್ರ ಕಾಳಿ ಪೋಸ್ಟರ್​ನಲ್ಲಿ ಲೀನಾ ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟು ಮಾಡಿದ್ರು. ಕಾಳಿ ದೇವಿಯಂತೆ ವೇಷ ಭೂಷಣ ಧರಿಸಿದ್ದ ರೂಪದರ್ಶಿಯು ಒಂದು ಕೈಯಲ್ಲಿ ತ್ರಿಶೂಲ ಮತ್ತೊಂದು ಕೈಯಲ್ಲಿ ಸಲಿಂಗಕಾಮಿಗಳ ಬಾವುಟ ಹಿಡಿದಿದ್ದರೆ ಮತ್ತೊಂದು ಕೈಯಲ್ಲಿ ಸಿಗರೇಟ್​ ಸೇದುತ್ತಿರುವಂತೆ ಫೊಟೋ ಕ್ಲಿಕ್ಕಿಸಲಾಗಿತ್ತು. ಚಲನಚಿತ್ರವು ಟೊರೊಂಟೊದ ಅಗಾ ಖಾನ್ ಮ್ಯೂಸಿಯಂನಲ್ಲಿ “ರಿದಮ್ಸ್ ಆಫ್ ಕೆನಂಡಾ” ವಿಭಾಗದ ಭಾಗವಾಗಿತ್ತು ಎಂದು ಚಲನಚಿತ್ರ ನಿರ್ಮಾಪಕರು ಟ್ವೀಟ್ ಮಾಡಿದ್ದಾರೆ.ಸಿನಿಮಾದ ಈ ಪೋಸ್ಟರ್​ನ್ನು ಲೀನಾ ಮಣಿಮೇಕಲೈ ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಂತೆಯೇ ವ್ಯಾಪಕ ವಿರೋಧ ವ್ಯಕ್ತವಾಗಿತ್ತು.


ಈ ಟ್ವೀಟ್​ಗೆ ದೇಶಾದ್ಯಂತ ಆಕ್ರೋಶ ಹಾಗೂ ತೀವ್ರ ಖಂಡನೆ ವ್ಯಕ್ತವಾಗುತ್ತಿದ್ದಂತೆಯೇ ಸಾಕ್ಷ್ಯಚಿತ್ರದ ಕುರಿತು ಲೀನಾ ಮಣಿಮೇಕಲೈ ಅವರ ಟ್ವೀಟ್ ಅನ್ನು ಟ್ವಿಟರ್ ಹಿಂತೆಗೆದುಕೊಂಡಿತ್ತು. ತನ್ನ ಕಾಳಿ ಪೋಸ್ಟರ್​ ಕುರಿತು ಮಾತನಾಡಿದ್ದ ಮಣಿಮೇಕಲೈ, “ನನ್ನ ಮಟ್ಟಿಗೆ, “ಕಾಳಿ” ಮಹತ್ವಾಕಾಂಕ್ಷೆಯ, ಕಡಿವಾಣವಿಲ್ಲದ, ದೈತ್ಯಾಕಾರದ ಎಂದು ಪರಿಗಣಿಸಲ್ಪಟ್ಟ ಎಲ್ಲವನ್ನೂ ತುಳಿಯುವ ಮತ್ತು ದುಷ್ಟರ ಎಲ್ಲಾ ತಲೆಗಳನ್ನು ಕತ್ತರಿಸುವ ಒಂದು ಮಹತ್ವಾಕಾಂಕ್ಷೆಯ ಜೀವಿ. ಅಂತಹ ವ್ಯಕ್ತಿ ಒಂದು ಸಂಜೆ ನನ್ನೊಳಗೆ ಬಂದು ಟೊರೊಂಟೊದ ಬೀದಿಗಳಲ್ಲಿ ತೆವಳಿದರೆ ಏನಾಗುತ್ತದೆ ಎಂಬುದನ್ನು ತೋರಿಸುವ ಚಿತ್ರ ಇದಾಗಿದೆ ಎಂದು ಹೇಳಿದ್ದರು.

ಇದನ್ನು ಓದಿ : section 144 imposed : ಕೆರೂರಿನಲ್ಲಿ ಅನ್ಯಕೋಮಿನ ಸಂಘರ್ಷದ ವೇಳೆ ಚಾಕು ಇರಿತ : ನಿಷೇಧಾಜ್ಞೆ ಜಾರಿ

ಇದನ್ನೂ ಓದಿ : murdering Chandrasekhar Guruji : ಚಂದ್ರಶೇಖರ್​ ಗುರೂಜಿ ಹತ್ಯೆ ಪ್ರಕರಣ : ಆರೋಪಿಗಳ ಹೆಡೆಮುರಿ ಕಟ್ಟಿದ ಪೊಲೀಸರು

Post Kaali poster controversial, Leena Manimekalai shares another pic of Lord Shiva Parvati smoking

Comments are closed.