ಪತ್ನಿ ಶಿಲ್ಪಾ ಶೆಟ್ಟಿ ಕುಂದ್ರಾಗೆ 38.5 ಕೋಟಿ ರೂಪಾಯಿ ಆಸ್ತಿ ವರ್ಗಾಯಿಸಿದ ರಾಜ್​ ಕುಂದ್ರಾ

ಕಳೆದ ವರ್ಷ ಪತಿ ಹಾಗೂ ಉದ್ಯಮಿ ರಾಜ್​ ಕುಂದ್ರಾ ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಬಂಧನವಾದ ಬಳಿಕದ ಸಮಯವು ನಟಿ ಶಿಲ್ಪಾ ಶೆಟ್ಟಿ ಪಾಲಿಗೆ ಅಗ್ನಿಪರೀಕ್ಷೆಯಂತಿತ್ತು ಎಂದು ಹೇಳಿದರೆ ತಪ್ಪಾಗಲಾರದು. ಅಶ್ಲೀಲ ವಿಡಿಯೋಗಳನ್ನು ತಯಾರಿಸಿ ಅವುಗಳನ್ನು ವಿವಿಧ ಸೈಟ್​ಗಳಲ್ಲಿ ರಿಲೀಸ್​ ಮಾಡುತ್ತಿದ್ದ ಪ್ರಕರಣದ ಅಡಿಯಲ್ಲಿ ರಾಜ್​ ಕುಂದ್ರಾರನ್ನು ಬಂಧಿಸಲಾಗಿತ್ತು. ಈ ಕಷ್ಟದ ಸಂದರ್ಭದಲ್ಲಿ ನಮ್ಮ ಗೌಪ್ಯತೆಗೆ ಬೆಲೆ ನೀಡಿ ಎಂದು ಶಿಲ್ಪಾ ಶೆಟ್ಟಿ ಸಾಮಾಜಿಕ ಮಾಧ್ಯಮಗಳಲ್ಲಿ ಮನವಿಯನ್ನೂ ಮಾಡಿದ್ದರು. ಈ ಘಟನೆ ನಡೆದು ಬರೋಬ್ಬರಿ ಆರು ತಿಂಗಳುಗಳ ಬಳಿಕ ಇದೀಗ ಉದ್ಯಮಿ ರಾಜ್​ ಕುಂದ್ರಾ ತಮ್ಮ ಪತ್ನಿ ಶಿಲ್ಪಾ ಶೆಟ್ಟಿಯವರಿಗೆ ಬರೋಬ್ಬರಿ 38.5 ಕೋಟಿ ರೂಪಾಯಿ ಮೌಲ್ಯದ ಆಸ್ತಿಗಳನ್ನು(Raj Kundra transfers 5 flats) ವರ್ಗಾಯಿಸಿದ್ದಾರೆ.

ಉದ್ಯಮಿ ರಾಜ್​ ಕುಂದ್ರಾ ತಮ್ಮ ಪತ್ನಿ ಶಿಲ್ಪಾ ಶೆಟ್ಟಿ ಕುಂದ್ರಾರಿಗೆ 38.5 ಕೋಟಿ ಮೌಲ್ಯದ ಆಸ್ತಿಯನ್ನು ವರ್ಗಾವಣೆ ಮಾಡಿದ್ದಾರೆ. ಜುಹುದಲ್ಲಿರುವ ಓಷನ್​ ವ್ಯೂ ಹೆಸರಿನ ಕಟ್ಟಡದಲ್ಲಿನ 5 ಫ್ಲ್ಯಾಟ್​ಗಳನ್ನು ರಾಜ್​ ಕುಂದ್ರಾ ತಮ್ಮ ಹೆಸರಿನಿಂದ ಪತ್ನಿ ಶಿಲ್ಪಾ ಶೆಟ್ಟಿ ಕುಂದ್ರಾರಿಗೆ ವರ್ಗಾವಣೆ ಮಾಡಿದ್ದಾರೆ ಎಂದು ದಾಖಲೆಗಳು ತಿಳಿಸಿವೆ.ರಾಜ್​ ಕುಂದ್ರಾ ಪತ್ನಿ ಶಿಲ್ಪಾ ಶೆಟ್ಟಿ ಕುಂದ್ರಾಗೆ ವರ್ಗಾವಣೆ ಮಾಡಿದ ಆಸ್ತಿಯ ಒಟ್ಟು ವಿಸ್ತೀರ್ಣ 5996 ಚದರ ಅಡಿ ಇದೆ ಎನ್ನಲಾಗಿದೆ. ಈ ಆಸ್ತಿಯ ರಿಜಿಸ್ಟ್ರೇಷನ್​ಗಾಗಿ ಜನವರಿ 24 ರಂದು 1.92 ಕೋಟಿ ರೂಪಾಯಿಗಳ ಸ್ಟ್ಯಾಂಪ್ ಶುಲ್ಕವನ್ನು ಪಾವತಿ ಮಾಡಲಾಗಿದೆ.


ಇನ್ನು ಶಿಲ್ಪಾ ಶೆಟ್ಟಿ ಕುಂದ್ರಾದ ವೃತ್ತಿ ಜೀವನದ ಬಗ್ಗೆ ಮಾತನಾಡುವುದಾದರೆ ಇತ್ತೀಚಿಗೆ ಶಿಲ್ಪಾ ಶೆಟ್ಟಿ ಅಭಿನಯದ ಹಂಗಾಮಾ 2 ಸಿನಿಮಾ ರಿಲೀಸ್​ ಆಗಿತ್ತು. ಈ ಸಿನಿಮಾದಲ್ಲಿ ಪರೇಶ್​ ರಾವಲ್​, ರಾಜಪಾಲ್​ ಯಾದವ್​ ಸೇರಿದಂತೆ ಘಟಾನುಘಟಿ ನಟರು ನಟಿಸಿದ್ದಾರೆ. ಶಿಲ್ಪಾ ಶೆಟ್ಟಿ ಸೂಪರ್​ ಡ್ಯಾನ್ಸರ್​ ಎಂಬ ರಿಯಾಲಿಟಿ ಶೋನಲ್ಲಿ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಿದ್ದಾರೆ. ಇದರಲ್ಲಿ ಗೀತಾ ಕಪೂರ್​ ಹಾಗೂ ನಿರ್ದೆಶಕ ಅನುರಾಗ್​ ಬಸು ಅವರೊಂದಿಗೆ ನಟಿ ಶಿಲ್ಪಾ ಶೆಟ್ಟಿ ಕುಂದ್ರಾ ಸಹ ತೀರ್ಪುಗಾರರಾಗಿ ಕಾಣಿಸಿಕೊಂಡಿದ್ದರು. ಪ್ರಸ್ತುತ ಶಿಲ್ಪಾ ಶೆಟ್ಟಿ ಕುಂದ್ರಾ ಕಿರಣ್​ ಖೇರ್​ ಹಾಗೂ ರ್ಯಾಪರ್​ ಬಾದ್​ ಶಾ ಜೊತೆಯಲ್ಲಿ ಸೋನಿ ಟಿವಿಯಲ್ಲಿ ಇಂಡಿಯನ್​ ಗಾಟ್​ ಟಾಲೆಂಟ್​ ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಇದನ್ನು ಓದಿ : ಮತ್ತೆ ಬಣ್ಣ ಹಚ್ಚಲು ಸಿದ್ಧವಾದ್ರು ರಮ್ಯ : ಮಾರ್ಚ್ ನಲ್ಲಿ ಅನೌನ್ಸ್ ಆಗುತ್ತೆ ಸ್ಯಾಂಡಲ್ ವುಡ್ ಕ್ವಿನ್ ಸಿನಿಮಾ

ಇದನ್ನೂ ಓದಿ : ನಿರ್ಮಾಣ ಹಂತದ ಕಟ್ಟದ ಕುಸಿದು 7 ಮಂದಿ ಕಾರ್ಮಿಕರು ದುರ್ಮರಣ

Raj Kundra transfers 5 flats worth Rs 38.5 crore to his wife Shilpa Shetty. Read details

Comments are closed.