ಅಮೇರಿಕಾದಲ್ಲಿ ಸಂಚಾರಿ ವಿಜಯ್ ನಮನ : ಫ್ರಾಂಕ್ಲಿನ್ ಥಿಯೇಟರ್‌ ನಿಂದ ವಿಶೇಷ‌ ಗೌರವ

ಸ್ಯಾಂಡಲ್‌ವುಡ್ ನಟ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಸಂಚಾರಿ ವಿಜಯ್ ಕನ್ನಡ ಚಿತ್ರರಂಗಕ್ಕೆ ಗೌರವ ತಂದುಕೊಟ್ಟಿದ್ರು. ಇದೀಗ ಇದೀಗ ಅಮೆರಿಕದ ಪ್ರತಿಷ್ಠಿತ ಫ್ರಾಂಕ್ಲಿನ್‌ ಥಿಯೇಟರ್‌ ವತಿಯಿಂದ ಸಂಚಾರಿ ವಿಜಯ್ ಅವರಿಗೆ ಗೌರವ ಸಲ್ಲಿಸಲಾಗಿದೆ.

ಸಂಚಾರಿ ವಿಜಯ್ ಅವರು ಜೂನ್ 15ರಂದು ನಿಧನರಾಗಿದ್ದರು. ಚಂದನವನಕ್ಕೊಂದು ಗೌರವ ತಂದುಕೊಟ್ಟ ಕಲಾವಿದನಿಗೆ ಸರಿಯಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸರಿಯಾಗಿ‌ ಶ್ರದ್ದಾಂಜಲಿ ಸಮರ್ಪಣೆ ಮಾಡಿರಲಿಲ್ಲ. ಈ‌ ಕುರಿತು ಸಾಕಷ್ಟು ಆಕ್ರೋಶ ವ್ಯಕ್ತವಾಗಿತ್ತು. ಅಲ್ಲದೇ ಚಕ್ರವರ್ತಿ ಚಂದ್ರಚೂಡ್ ಅವರು ವಾಣಿಜ್ಯ ಮಂಡಳಿ ವಿರುದ್ದ ಗುಡುಗಿದ್ರು.

ಇದರ ಬೆನ್ನಲ್ಲೇ ಅಮೆರಿಕದಲ್ಲಿ ವಾಸಿಸುತ್ತಿರುವ ಕನ್ನಡಿಗ, ಸಿನಿಮಾ ನಿರ್ಮಾಪಕ ರವಿ ಕಶ್ಯಪ್‌ ಅವರ ವಿಶೇಷ ಕಾಳಜಿಯಿಂದ ಅಮೆರಿಕದ ಪ್ರತಿಷ್ಠಿತ ಫ್ರಾಂಕ್ಲಿನ್‌ ಥಿಯೇಟರ್‌ ವತಿಯಿಂದ ಸಂಚಾರಿ ವಿಜಯ್ ಅವರಿಗೆ ಗೌರವ ಸಲ್ಲಿಸಲಾಗಿದೆ. “ALWAYS IN OUR HEART, SANCHARI VIJAY, GONE YET NOT FORGOTTEN” ಅಂತ ಅಮೆರಿಕದ ಪ್ರತಿಷ್ಠಿತ ಫ್ರಾಂಕ್ಲಿನ್‌ ಥಿಯೇಟರ್‌ನಲ್ಲಿ ಸಂದೇಶ ಪ್ರಸಾರವಾಗುತ್ತಿದೆ. ಈ ಸಂದೇಶ 24 ಗಂಟೆಗಳ ಕಾಲ ಥಿಯೇಟರ್‌ ಬೋರ್ಡ್‌ ಮೇಲೆ ರಾರಾಜಿಸಲಿದೆ.

Comments are closed.