Actor Dunia vijay : ನಟ ದುನಿಯಾ ವಿಜಯ್ ಗೆ ಪಿತೃವಿಯೋಗ: ಅನಾರೋಗ್ಯದಿಂದ ತಂದೆ ರುದ್ರಪ್ಪ ನಿಧನ

ಸಲಗ ಗೆಲುವಿನ ಸಂಭ್ರಮದಲ್ಲಿ ಹೊಸ ಚಿತ್ರಗಳಿಗೆ ಸಜ್ಜಾಗುತ್ತಿದ್ದ ನಟ ದುನಿಯಾ ವಿಜಯ್ ಗೆ (Actor Dunia vijay) ಆಘಾತವೊಂದು ಎದುರಾಗಿದ್ದು, ವಿಜಯ್ ತಂದೆ ( Rudrappa )ಅನಾರೋಗ್ಯದಿಂದ ಇಹಲೋಕ ತ್ಯಜಿಸಿದ್ದಾರೆ.

ವಿಜಯ್ ತಂದೆ ರುದ್ರಪ್ಪ ಅವರಿಗೆ 81 ವರ್ಷ ವಯಸ್ಸಾಗಿತ್ತು.‌ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ರುದ್ರಪ್ಪ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೂರು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ರುದ್ರಪ್ಪ ಇಂದು ನಿಧನರಾಗಿದ್ದಾರೆ. ವಿಜಯ್ ತಂದೆ ಅಂತ್ಯಕ್ರಿಯೆ ಆನೇಕಲ್ ನ ಕುಂಬಾರ ಹಳ್ಳಿಯಲ್ಲಿ ನಡೆಯಲಿದೆ ಎಂದು ದುನಿಯಾ ವಿಜಯ್ ಮಾಹಿತಿ ನೀಡಿದ್ದಾರೆ.

ಕಳೆದ‌ ಜುಲೈನಲ್ಲಿ ದುನಿಯಾ ವಿಜಯ್ ತಾಯಿ ಅನಾರೋಗ್ಯದಿಂದ ನಿಧನರಾಗಿದ್ದರು. ಕುಂಬಾರಹಳ್ಳಿಯಲ್ಲಿ ತಾಯಿ ಅಂತ್ಯಕ್ರಿಯೆ ನಡೆಸಿದ್ದ ವಿಜಯ್, ಅಲ್ಲಿಯೇ ತಾಯಿ ಸಮಾಧಿ ಹಾಗೂ ತಾಯಿಯ ಪುತ್ಥಳಿ ನಿರ್ಮಿಸಿ ಗೌರವ ಸಲ್ಲಿಸಿದ್ದರು.

ಇದನ್ನೂ ಓದಿ : Save Mysore ಕ್ಯಾಂಪೇನ್ ಗೆ ಕೈ ಜೋಡಿಸಿದ ಸಲಗ…! ಮರ ಕಡಿಯುವ ಆಭಿವೃದ್ಧಿ ಯೋಜನೆಗೆ ದುನಿಯಾ ವಿಜಯ್ ವಿರೋಧ…!!

ಇದನ್ನೂ ಓದಿ : Duniya Vijay : ಟಾಲಿವುಡ್ ಗೆ ಸ್ಯಾಂಡಲ್ ವುಡ್ ಸಲಗ : ವಿಲನ್ ಆಗ್ತಿದ್ದಾರೆ ದುನಿಯಾ ವಿಜಯ್

( Actor Dunia Vijay Father Rudrappa passes away)

Comments are closed.