ಜಾಕ್ವೆಲಿನ್ ದರ್ಶನಕ್ಕೆ ಮುಹೂರ್ತ ಫಿಕ್ಸ್. …! ಅಭಿಮಾನಿಗಳಿಗೆ ಸಪ್ರೈಸ್ ಕೊಟ್ಟ ವಿಕ್ರಾಂತ್ ರೋಣ ಟೀಂ…!!

ಕೆಜಿಎಫ್-2 ನಂತರ ಸಖತ್ ಕುತೂಹಲ ಸೃಷ್ಟಿಸಿರುವ ಸಿನಿಮಾ ವಿಕ್ರಾಂತ ರೋಣ ಇನ್ನೇನು ಬಿಡುಗಡೆಗೆ ಸಿದ್ಧವಾಗಿದೆ. ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರೋ ಸಿನಿಮಾ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದೆ. ಹೌದು ವಿಕ್ರಾಂತ್ ರೋಣಕ್ಕೆ ಮಾದಕ ಟಚ್ ಕೊಟ್ಟ ಜಾಕ್ವಲಿನ್ ಐಟಂ ಸಾಂಗ್ ಫರ್ಸ್ಟ್ ಲುಕ್ ತೆರೆಗೆ ಬರಲಿದೆ.

ವಿಕ್ರಾಂತ್ ರೋಣಾ ಹಾಗೂ ಸುದೀಪ್ ಅಭಿಮಾನಿಗಳಿಗೆ ದಿಢೀರ್ ಸಪ್ರೈಸ್ ನೀಡಿದೆ ಚಿತ್ರತಂಡ. ಇನ್ನೇರಡು ದಿನದಲ್ಲಿ ಚಿತ್ರತಂಡ ವಿಕ್ರಾಂತ್ ರೋಣಾದಲ್ಲಿ ಶ್ರೀಲಂಕಾ ಬೆಡಗಿ ಜಾಕ್ವಲಿನ್ ಫರ್ನಾಂಡಿಸ್ ಹೆಜ್ಜೆ ಹಾಕಿದ ಐಟಂ ಸಾಂಗ್ ನ ಝಲಕ್ ಹಾಗೂ ಜಾಕ್ವಲಿನ್ ಪಾತ್ರದ ಫರ್ಸ್ಟ್ ಲುಕ್ ರಿಲೀಸ್ ಮಾಡಲಿದೆ.

ಈ ವಿಚಾರವನ್ನು ಸ್ವತಃ ನಟ ಸುದೀಪ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಜುಲೈ 31 ಕ್ಕೆ ವಿಕ್ರಾಂತ್ ರೋಣ್ ಫರ್ಸ್ಟ್ ಲುಕ್ ರಿಲೀಸ್ ಆಗಲಿದೆ ಎಂದಿದ್ದಾರೆ. ಈ ಫರ್ಸ್ಟ್ ಲುಕ್ ಕನ್ನಡ ಮಾತ್ರವಲ್ಲದೇ, ತಮಿಳು,ತೆಲುಗು,ಮಲೆಯಾಳಂ ಹಾಗೂ ಹಿಂದಿಯಲ್ಲೂ ತೆರೆ ಕಾಣಲಿದೆ.

ಇನ್ನು ಕನ್ನಡದಲ್ಲಿ ತಮ್ಮ ಮೊದಲ ಸಿನಿಮಾದ ಫರ್ಸ್ಟ್ ಲುಕ್ ನೋಡೋಕೆ ನಟಿ ಜಾಕ್ವಲಿನ್ ಕೂಡ ಕಾತುರರಾಗಿದ್ದು, ಬಿಗ್ ಸಪ್ರೈಸ್ ಗೆ ರೆಡಿಯಾಗಿ .ವಿಕ್ರಾಂತ್ ರೋಣ ಚಿತ್ರತಂಡ ಜುಲೈ 31 ಕ್ಕೆ ಫರ್ಸ್ಟ್ ಲುಕ್ ರಿಲೀಸ್ ಮಾಡುತ್ತಿದೆ. ನಾನು ಕಾಯುತ್ತಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.

ಅನೂಪ್ ಭಂಡಾರಿ ಸಾರಥ್ಯದಲ್ಲಿ ಮೂಡಿಬಂದಿರೋ ವಿಕ್ರಾಂತ್ ರೋಣ ಹಲವು ಕಾರಣಕ್ಕೆ ನೀರಿಕ್ಷೆ ಹೆಚ್ಚಿಸಿದ್ದು, ಜಾಕ್ವಲಿನ್ ಫರ್ನಾಂಡಿಸ್ 3 ಕೋಟಿ ವೆಚ್ಚದಲ್ಲಿ ಅದ್ದೂರಿ ಐಟಂ ಸಾಂಗ್ ಗೆ ಹೆಜ್ಜೆಹಾಕಿದ್ದು, ವಿಶೇಷ ಪಾತ್ರವೊಂದರಲ್ಲಿ ಕೂಡ ನಟಿಸಿದ್ದಾರೆ.

Comments are closed.