ಅಶ್ಲೀಲ ಸನ್ನೆ ಎಫೆಕ್ಟ್….! ಬಿಗ್ ಬಾಸ್ ಮನೆಯಿಂದ ಸದ್ದಿಲ್ಲದೇ ಹೊರಬಿದ್ದ ಚಕ್ರವರ್ತಿ ಚಂದ್ರಚೂಡ್…!!

ಬಿಗ್ ಬಾಸ್ ಮನೆಯಲ್ಲಿ ಸಭ್ಯತೆಯ ಎಲ್ಲೇ ಮೀರುವ ಮೂಲಕ ಪ್ರೇಕ್ಷಕರ ಹಾಗೂ ಸ್ಪರ್ಧಿಗಳ ಕೆಂಗಣ್ಣಿಗೆ ಗುರಿಯಾಗಿದ್ದ ಚಕ್ರವರ್ತಿ ಚಂದ್ರಚೂಡ್ ಕೊನೆಗೂ ತಪ್ಪಿಗೆ ಪ್ರಾಯಶ್ಚಿತ ಅನುಭವಿಸಿದ್ದಾರೆ. ಎಲಿಮಿನೇಟ್ ಆಗಿದ್ದ ಚಂದ್ರಚೂಡ್ ಸೇಫ್ ಆಗದೇ ಬಿಗ್ ಬಾಸ್ ಮನೆಯಿಂದ ಸದ್ದುಗದ್ದಲವಿಲ್ಲದೇ ಹೊರಬಂದಿದ್ದಾರೆ.

ಕಳೆದ ವಾರ ವಾರದ ಕತೆ ಕಿಚ್ಚ್ ನ ಜೊತೆ ವೇಳೆ ಎಲಿಮಿನೇಶನ್ ನಡೆದಿರಲಿಲ್ಲ.   ಈ ವೇಳೆ ಎಲಿಮಿನೇಟ್ ಆಗಿದ್ದ ಸ್ಪರ್ಧಿಗಳಿಗೆ ಎಚ್ಚರಿಕೆ ನೀಡಿದ್ದ ಸುದೀಪ್ ಈ ಭಾರಿ ವಾರದ ಯಾವುದೋ ಒಂದು ದಿನ ಎಲಿಮಿನೇಟ್ ಆದವರಲ್ಲಿ ಒಬ್ಬ ಸ್ಪರ್ಧಿ ಬಿಗ್ ಬಾಸ್ ಮನೆಯಿಂದ ಹೊರಬರಲಿದ್ದಾರೆ.

ಯಾವುದೋ ಒಬ್ಬ ಸ್ಪರ್ಧಿ ನನ್ನೊಂದಿಗೆ ಮಾತನಾಡದೇ, ವೇದಿಕೆಗೆ ಬರದೇ ಮರಳಲಿದ್ದಾರೆ ಎಂದಿದ್ದರು. ಆ ಸ್ಪರ್ಧಿ ಯಾರು ಎಂಬ ಕುತೂಹಲಕ್ಕೆ ತೆರೆ ಬಿದ್ದಿದ್ದು, ಚಕ್ರವರ್ತಿ ಚಂದ್ರಚೂಡ್ ಮನೆಯಿಂದ ಹೊರಬಂದಿದ್ದಾರೆ.

ಬಿಗ್ ಬಾಸ್ ಮನೆಗೆ ಕರೆ ಮಾಡಿದ್ದ ಬಿಗ್ ಬಾಸ್ ಒಬ್ಬೊಬ್ಬರನ್ನೇ ಸೇಫ್ ಮಾಡಿದ್ದರು. ಕೊನೆಗೆ ಶಮಂತ್ ಬಳಿ ಮಾತನಾಡಿದ ಬಿಗ್ ಬಾಸ್ ಪೋನ್ ಚಕ್ರವರ್ತಿಗೆ ನೀಡಲು ಹೇಳಿದರು. ನಿಮ್ಮ ತಪ್ಪಿನ ಅವಲೋಕನ್ ಮಾಡಿಕೊಳ್ಳಿಎಂಬ ಬಿಗ್ ಬಾಸ್ ಕೊನೆಗೆ ಯಾರಿಗೂ ಏನನ್ನು ಹೇಳದೆ ಪೋನ್ ಶಮಂತ್ ಗೆ ನೀಡಿ ಬಿಗ್ ಬಾಸ್ ಮನೆಯ ದ್ವಾರದಿಂದ ನಿರ್ಗಮಿಸುವಂತೆ ಸೂಚಿಸಿದ್ದಾರೆ.

ಲೀವಿಂಗ್ ಏರಿಯಾದಲ್ಲಿದ್ದ ಇತರ ಸ್ಪರ್ಧಿಗಳ ಜೊತೆ ಮಾತನಾಡುವ ಅವಕಾಶವನ್ನು ನೀಡದೇ ಚಕ್ರವರ್ತಿ ಚಂದ್ರಚೂಡ್ ರನ್ನು ಬಿಗ್ ಬಾಸ್ ಮನೆಯಿಂದ ಹೊರಹಾಕಲಾಗಿದೆ.

ಬಿಗ್ ಬಾಸ್ ಸ್ಪರ್ಧಿ ಪ್ರಿಯಾಂಕಾ ತಿಮ್ಮೇಶ್ ಎಲಿಮಿನೇಶನ್ ನಿಂದ ಹೊರಬಂದ ವೇಳೆ ಚಂದ್ರಚೂಡ್ ರನ್ನು ಎಲಿಮಿನೇಟ್ ಮಾಡಿದ್ದರು. ಈ ವೇಳೆ ಚಕ್ರವರ್ತಿ ಅಶ್ಲೀಲ್ ಸಿಂಬಲ್ ತೋರಿಸಿದ್ದು, ಅಂದಿನಿಂದಲೇ ಚಂದ್ರಚೂಡ್ ಸುದೀಪ್ ಹಾಗೂ ಪ್ರೇಕ್ಷಕರುಹಾಗೂ ಸ್ಪರ್ಧಿಗಳ ಕೆಂಗಣ್ಣಿಗೆ ಗುರಿಯಾಗಿದ್ದು, ಅವರ ಬಗ್ಗೆ ಎಲ್ಲರ ಅಭಿಪ್ರಾಯವೇ ಬದಲಾಗಿತ್ತು.  

Comments are closed.